ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಡವೆ ಭೇಟಿ ಪ್ರಕರಣಕ್ಕೆ ಸಂಬಂಧ ಮನೆಯೊಂದರ ಮೇಲೆ ದಾಳಿ:20 ಕೆ.ಜಿ ಮಾಂಸ ವಶಕ್ಕೆ ಪಡೆದ ಅರಣ್ಯಾಧಿರಿಗಳು

ಕಡವೆ ಭೇಟಿ ಪ್ರಕರಣಕ್ಕೆ ಸಂಬಂಧ ಮನೆಯೊಂದರ ಮೇಲೆ ದಾಳಿ:20 ಕೆ.ಜಿ ಮಾಂಸ ವಶಕ್ಕೆ ಪಡೆದ ಅರಣ್ಯಾಧಿರಿಗಳು

Mon, 14 Oct 2024 06:09:11  Office Staff   SO News

ಭಟ್ಕಳ:ಯಲ್ವಡಿಕವೂರ ಪಂಚಾಯತ ವ್ಯಾಪ್ತಿಯ ಬೆಣಂದೂರಿನಲ್ಲಿ ಗರ್ಭಿಣಿ ಕಡವೆ ಭೇಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ವ್ಯಕ್ತಿಯ ಮನೆವೊಂದರ ಮೇಲೆ ದಾಳಿ ನಡೆಸಿ 20 ಕೆಜಿ ಮಾಂಸ  ಹಾಗೂ ಓರ್ವ ವ್ಯಕ್ತಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ವೇಳೆ ಮಹಿಳೆಯೋರ್ವಳು ಬೆಣಂದೂರಿಗೆ ಹೋಗುವ ರಸ್ತೆ ಪಕ್ಕದಲ್ಲಿ ದನದ ಮೇವುಗಾಗಿ ಬಂದ ವೇಳೆ ಯಾರೋ ಭೇಟೆಗಾರರು ಹೆಣ್ಣು ಗರ್ಭಿಣಿ ಕಡೆವೆಯನ್ನು ಭೇಟೆಯಾಡಿದ ಬಳಿಕ ಅದರ ತಲೆಯನ್ನು ಬೇರ್ಪಡಿಸಿ ಅಲ್ಲೇ ಎಸೆದು ಮಾಂಸವನ್ನು ಸಾಗಾಟ ಮಾಡಿಕೊಂಡು ಪರಾರಿಯಾಗಿದ್ದರು.

ನಂತರ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಭಟ್ಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು.

ಬಳಿಕ ತನಿಖೆ ಕೈಗೊಂಡ ಅರಣ್ಯ ಅಧಿಕಾರಿಗಳು ಖಚಿತ ಮಾಹಿತಿ ಮೆರೆಗೆ ಭಟ್ಕಳ ವ್ಯಕ್ತಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ಸುಮಾರು 20 ಕೆಜಿ ಮಾಂಸ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ವ್ಯಕ್ತಿಯನ್ನು ಬಿಡಲಾಗಿದೆ.ಬಳಿಕ ಮಾಂಸವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು.ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ


Share: