ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎಸ್.ಜಿ.ಎಸ್ ಕಾಲೇಜಿನ ಪ್ರಾಚಾರ್ಯರಿಗೆ ಡಿಸೈನ್ ಪೇಟೆಂಟ್

ಎಸ್.ಜಿ.ಎಸ್ ಕಾಲೇಜಿನ ಪ್ರಾಚಾರ್ಯರಿಗೆ ಡಿಸೈನ್ ಪೇಟೆಂಟ್

Sat, 15 Jun 2024 02:12:09  Office Staff   SOnews

 

ಭಟ್ಕಳ. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಶ್ರೀಧರ ಪೈ ರವರು ಕೈಗೊಂಡ ಸಂಶೋಧನೆಗೆ ಭಾರತ ಡಿಸೈನ್ ಪೇಟೆಂಟ್ ಲಭಿಸಿದೆ.

೨೧ನೇ ಶತಮಾನದಲ್ಲಿ ಕಂಪ್ಯೂಟರ್ ಸಾಪ್ಟವೇರ್ ಕ್ಷೇತ್ರದಲ್ಲಿ ಸರ್ವರಂತೆ ದಿವ್ಯಾಂಗ (ಅಂಧ) ವಿದ್ಯಾರ್ಥಿಗಳೂ ಸಹ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಜಿಕ್ ಅನ್ನು ಸುಲಭವಾಗಿ ಕಲಿತು ಸಾಪ್ಟವೇರ್ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಸಾಧನೆಗೈದು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ "ಟ್ಯಾಕ್ಟೈಲ್ ಬೆಸ್ಡ ಕೋಡಿಂಗ್ ಅಸ್ಸಿಸ್ಟಿವ್ ಟೂಲ್ ಫಾರ್ ಬ್ಲೈಂಡ್ ಪ್ರೋಗ್ರಾಮರ್ಸ್" ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಭಟ್ಕಳ ರೋಟರಿ ಕ್ಲಬ್ ನ ಕಾರ್ಯದರ್ಶಿಗಳೂ ಆದ ಇವರು "ದಿವ್ಯ-ಚಕ್ಷು" ಎಂಬ ಯೋಜನೆ ಅಡಿಯಲ್ಲಿ ಅಂಧರಿಗಾಗಿ ಈಗಾಗಲೇ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಇವರ ಈ ಸಂಶೋಧನೆಗೆ ಭಾರತ ಸರ್ಕಾರದ ಐ.ಪಿ ಪೇಟೆಂಟ್ - ಡಿಸೈನ್ ಪೇಟೆಂಟ್ ಮನ್ನಣೆ ದೊರೆತಿದೆ. ಮುಂದಿನ ೧೦ ವರ್ಷಗಳ ಅವಧಿಯವರೆಗೆ ಈ ಪೇಟೆಂಟನ ಮಾನ್ಯತೆ ಚಾಲ್ತಿಯಲ್ಲಿರಲಿದೆ.
ಭಟ್ಕಳ ಏಜುಕೇಶನ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ, ಸರ್ವ ಟ್ರಸ್ಟಿಗಳು, ರೋಟರಿ ಸದಸ್ಯರು ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
 


Share: