ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಪಾರ ಪ್ರಮಾಣದ ಸ್ಪೋಟಕ ವಶ - ನಿಷ್ಪಕ್ಷಪಾತ ತನಿಖೆಗೆ ಮಜ್ಲಿಸ್-ಎ-ಇಸ್ಲಾಹ್ ಆಗ್ರಹ

ಭಟ್ಕಳ: ಅಪಾರ ಪ್ರಮಾಣದ ಸ್ಪೋಟಕ ವಶ - ನಿಷ್ಪಕ್ಷಪಾತ ತನಿಖೆಗೆ ಮಜ್ಲಿಸ್-ಎ-ಇಸ್ಲಾಹ್ ಆಗ್ರಹ

Sat, 24 Oct 2009 14:38:00  Office Staff   S.O. News Service
ಭಟ್ಕಳ, ಅಕ್ಟೋಬರ್ 24: ಭಟ್ಕಳ ತಾಲೂಕಿನ ಶಿರಾಲಿ ಬೇಂಗ್ರೆಯಲ್ಲಿ ಕರಾವಳಿ ಕಾವಲಿ ಪೋಲಿಸ್ ಪಡೆಯು ಜಪ್ತಿ ಮಾಡಿಕೊಂಡ ಲಕ್ಷಕ್ಕೂ ಅಧಿಕ ಮೌಲ್ಯದ ಸ್ಪೋಟಕ ಸಾಮಾಗ್ರಿಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡಿ ಭಯೋತ್ತಪಾದನೆಯನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿ ಇಲ್ಲಿನ ಪರಮೋಚ್ಚ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಇಂದು ಬೆಳೆಗ್ಗೆ ೧೦-೩೦ಕ್ಕೆ ಮೌನ ಮೆರವಣೆಗೆಯನ್ನು ನಡೆಸುವುದರ ಮೂಲಕ ಸಹಾಯಕ ಕಮಿನಷನರ್ ಭಟ್ಕಳ ಮುಖಾಂತರ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. 
24-bkl1.jpg
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಇಲ್ಲಿನ ಸುಲ್ತಾನ್ ಮಸೀದಿಯಿಂದ ಮೆರವಣಿಗೆ ಮೂಲಕ ಸಹಾಯಕ ಕಮಿಷನರ್ ಕಛೇರಿಗೆ ತೆರಳಿ ಅಲ್ಲಿ ಮನವಿಯನ್ನು ಅರ್ಪಿಸಿದರು. 

ಕಳೆದ ಹದಿನೈದುಗಳ ಹಿಂದೆ ಭಟ್ಕಳದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಸಾಮಾಗ್ರಿಗನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ ಪೋಲಿಸರ ಕಾರ್ಯವನ್ನು ಮನವಿಯಲ್ಲಿ ಶ್ಲಾಘಿಸಲಾಗಿದೆ. ಆದರೆ ಭಟ್ಕಳದಲ್ಲಿ ಆತಂಕ ಸೃಷ್ಟಿಗೆ ಕಾರಣವಾದ ಹಿಂದಿನ ಕೈಗಳನ್ನು ಗುರುತಿಸಿ ಅವರನ್ನು ಮಟ್ಟಹಾಕಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಉತ್ತರಕನ್ನಡ ಜಿಲ್ಲೆಗೆ ಬಂದು ಹೋದ  ರಾಮಸೇನೆಪ್ರಮೋದ ಮುತಾಲಿಕ್ ಹೇಳಿಕೆಯಂತೆ ನಾವು ೫೦೦ ಶಸಸ್ತ್ರಧಾರಿಗಳನ್ನು ಸಿದ್ದಗೊಳಿಸಲಾಗುವುದು ಎಂದಿದ್ದು ಭಟ್ಕಳದಲ್ಲಿ ದೊರೆತ ಸ್ಫೋಟಕ ಸಾಮಾಗ್ರಿಗಳು ಅದರ ಒಂದು ಭಾಗವಾಗಿರುವ ಶಂಕೆ ವ್ಯಕ್ತವಾಗಿದೆ ಆದ್ದರಿಂದ ಇದರ ಹಿಂದಿರುವ ಬಲವಾದ ಕೈಗಳನ್ನು ಪತ್ತೆ ಹಚ್ಚಿ ಜನರ ಹಾಗೂ ಮಾಧ್ಯಮದ ಮುಂದೆ ತರಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಭಟ್ಕಳದಲ್ಲಿ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಶಕ್ತಿಗಳನ್ನು ಕೂಡಲೆ ಪತ್ತೆ ಹಚ್ಚಬೇಕೆಂದು ಆಗ್ರಹಿಸಿರುವ ತಂಝೀಮ್ ಇದಕ್ಕಾಗಿ ಮೌನ ಶಾಂತಿ ಮರೆವಣೆಗೆಯನ್ನು ಹಮ್ಮಿಕೊಳ್ಳುವುದರ ಮೂಲಕ ಸರಕಾರದ ಗಮನವನ್ನು ಸೆಳೆದಿದೆ. 
24-bkl2.jpg
24-bkl3.jpg 
ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಮುಖಂಡ ಅಬ್ದುಲ್ಲಾ ದಾಮೂದಿ ಭಯೋತ್ಪಾದನೆಯನ್ನು ದಮನಿಸುವ ನಿಟ್ಟಿನಲ್ಲಿ ಸರಕಾರವು ಕಠಿಣ ಕ್ರಮಗಳನ್ನು ಜರುಗಿಸಬೇಕು,ಯಾರೋ ಮಾಡಿದ ತಪ್ಪಿಗೆ ಇಡಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಗೋವಾದಲ್ಲಿಯು ದಿಪಾವಳಿಯ ಮುನ್ನ ದಿನ ಬಾಂಬ್ ಸ್ಪೋಟಿಸಲ್ಪಟ್ಟಿದೆ ಅದರ ಹಿಂದಿರುವ ಸಂಘಟನೆಗಳನ್ನು ಪತ್ತೆಹಚ್ಚಬೇಕು ಎಂದು ಅವರು ಒತ್ತಾಯಿಸಿದರು.  ಪುರಸಭಾ ಅಧ್ಯಕ್ಷ ಪರ್ವೇಝ ಕಾಸಿಮಜಿ ಮಾತನಾಡಿ ಭಟ್ಕಳದಲ್ಲಿ ಪತ್ತೆಯಾದ ಸ್ಫೋಟಕ ಸಾಮಾಗ್ರಗಳು ಯಾರದ್ದು ಮತ್ತು ಅದು ಯಾವ ದುಷ್ಕೃತ್ಯಕ್ಕೆ ಬಳಸಲಾಗುತ್ತಿತ್ತೆಂದುಬು ಪತ್ತೆ ಹಚ್ಚಬೇಕು ಇದಕ್ಕಾಗಿ ನಿಷ್ಪಕ್ಷವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. 
ಮನವಿಯನ್ನು ಸ್ವಿಕರಿಸಿದ ಸಹಾಯಕ ಕಮಿಷನರ್ ತ್ರಿಲೋಕಚಂದ್ರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರೆ ತಲ್ಲೀನರಾಗಲಿ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಭಟ್ಕಳದಲ್ಲಿ ದೊರೆತ ಸ್ಫೋಟಕ ಸಾಮಾಗ್ರಿಗಳ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳಲಾಗುವುದು ಎಂಬ ಆಶ್ವಾಸನೆಯನ್ನು ನೀಡಿದರು. ಭಟ್ಕಳ ಡಿ.ವೈ‌ಎಸ್.ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ ಬೇಂಗ್ರೆಯಲ್ಲಿ ದೊರೆತ ಸಾಮಾಗ್ರಿಗಳ ಕುರಿತಾಗಿ ಪೋಲಿಸ್ ಇಲಾಖೆಯಿಂದಲೂ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಇದು ಕಾನೂನು ಬಾಹಿರ ಕೃತ್ಯವಾಗಿದ್ದು ಇಂತಹ ಸಾಹಸಕ್ಕೆ ಯಾರೆ ಕೈಹಾಕಲಿ ಅವರ ವಿರುದ್ದ ಕಾನೂನುಕ್ರಮವನ್ನು ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ಈ ಪ್ರಕರಣಕ್ಕೆ ಈ ವರೆಗೆ ಇಬ್ಬರನ್ನು ಬಂಧಿಸಲಾಗಿದ್ದು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮತ್ತೆ ಕೆಲವರನ್ನು ಬಂಧಿಸುವುದಾಗಿ  ಕರಾವಳಿ ಕಾವಲು ಪಡೆಯ ಪೋಲಿಸ್ ಅಧಿಕಾರಿ ನಂದೀಶ್ ತಿಳಿಸಿದರು. 
24-bkl5.jpg
24-bkl6.jpg 
ಶಾಂತಿಯುತ ಹಾಗೂ ಮೌನ ಮೆರವಣೆಗೆಯ ನೇತೃತ್ವವನ್ನು ತಂಝೀಮ್ ಅಧ್ಯಕ್ಷ ಡಾ. ಬದ್ರುಲ್ ಹಸನ್ ಮು‌ಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್ ವಹಿಸಿದ್ದರು. ತಂಝೀಮ್ ಪದಾಧಿಕಾರಿಗಳಾದ ಡಾ. ಸೈಯ್ಯದ್ ಸಲೀಮ್ ಅಬ್ದುಲ್ ರಖೀಬ್ ಎಮ್.ಜೆ. ಮುಖಂಡರಾದ ಇರ್ಶಾದ್ ಗವಾಯಿ ಸನಾವುಲ್ಲಾ ಗವಾಯಿ, ಸೈಯ್ಯದ್ ಹಸನ್ ಬರ್ಮಾವರ್, ಅಝೀಝುರ್ರಹ್ಮಾನ್ ರುಕ್ನುದ್ದೀನ್, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


Share: