ಸಕಲೇಶಪುರ, ನವೆಂಬರ್ ೨೪: ಪಶ್ಚಿಮ ಘಟ್ಟದಲ್ಲಿ ತಲೆ ಎತ್ತುತ್ತಿರುವ ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ವಿರೋದಿಸಿ ಕೆಂಪುಹೊಳೆ ಕಿರು ಜಲ ವಿದ್ಯುತ್ ಘಟಕದ ಸಮೀಪ ಶ್ರೀ ಶಕ್ತಿ ಯುವಕ ಸಂಘದ ಸೋಮವಾರ ಪ್ರತಿಭಟನೆ ಹಮ್ಮಿಕೋಂಡಿತ್ತು.
ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಲವಿದ್ಯುತ್ ಘಟಕಗಳಿಗೆ ಸಾಮಾಗ್ರಿ ಸರಬರಾಜು ಮಾಡುತ್ತಿದ್ದ ಲಾರಿಗಳನ್ನು ಕೆಲಕಾಲ ತಡೆದರು.
ಪ್ರತಿಭಟನೆಯ ನೇತೃತ್ವವನ್ನು ಎಂ.ಕೆ ನಾಗರಾಜ್.ಎಂ.ಕೆ ರಾಮೇಗೌಡ. ದೇವರಾಜ್.ಕುಮಾರಸ್ವಾಮಿ ವಹಿಸಿದ್ದರು.
ಸೌಜನ್ಯ: ಸುದ್ದಿಮನೆ