ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಗರಂ ಆದ ಸಚಿವ ಮಂಕಾಳ್ ವೈದ್ಯ

ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಗರಂ ಆದ ಸಚಿವ ಮಂಕಾಳ್ ವೈದ್ಯ

Sat, 02 Nov 2024 20:39:10  Office Staff   SO News

ಕಾರವಾರ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಿಡಿ ಕಾರಿದ್ದಾರೆ.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕುಮಟಾ-ಶಿರಸಿ 766(ಜಿ) ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಸಂಪೂರ್ಣ ಬಂದ್ ಮಾಡುವ ವಿಚಾರಕ್ಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಶಿರಸಿ ರಸ್ತೆ ಕಾಮಗಾರಿ ವಿಚಾರದಲ್ಲಿ 'ರಸ್ತೆ ನಿರ್ಮಾಣ ಕಂಪನಿಗಳ ಸೆಟಲ್ಮೆಂಟ್ ಗೆ ಅವರು ಬರ್ತಾರೋ ಅಥವಾ ಪರಿಶೀಲನೆಗೆ ಬರ್ತಾರೋ ಗೊತ್ತಿಲ್ಲ" ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಅವರು ಜಿಲ್ಲೆಗೆ ಯಾಕೆ ಬರ್ತಾರೆ ಗೊತ್ತಿಲ್ಲ. ಅವರು ಐಆರ್‌ಬಿ ಹಾಗೂ ಆರ್ ಏನ್ ಎಸ್ ಕಂಪನಿಗಳ ಜೊತೆ ಮಾತುಕತೆಗೆ ಬರ್ತಾರೋ ಅಂತೆ. ಅವರು ರಸ್ತೆ ಬಂದ್‌ ಮಾಡುವಂತೆ ಆರ್‌ಎನ್‌ಎಸ್ ಕಂಪನಿಗಳಿಗೆ ಸಲಹೆ ಕೊಟ್ಟಿದ್ದಾರೆ ಎಂದು ಕಾಣುತ್ತಿದೆ. ರಸ್ತೆ ಬಂದ್ ಮಾಡಲು ನಾನು ಒಪ್ಪುವುದಿಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ.


Share: