ಭಟ್ಕಳ:೧೩, ಸೋಮವಾರ ರಾತ್ರಿ ತಾಲೂಕಿನ ಮುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಜಗದೀಶ್ ನಾಯ್ಕ ಎಂಬುವವರ ಮನೆಗೆ ಅಕಸ್ಮಿಕ ಬೆಂಕಿ ಹತ್ತಿಕೊಂಡ ಕಾರಣ ಮನೆಯಲ್ಲಿದ್ದ ೪೦,ಸಾವಿರ ರೂ ನಗದು ಎರಡು ಕ್ವಿಂಟಲ್ ಅಕ್ಕಿ ಬಟ್ಟೆ ಬರೆ ಸೇರಿದಂತೆ ಒಟ್ಟು ೧.೫ಲಕ್ಷ ರೂ ನಷ್ಟ ಸಂಭವಿಸಿದ ಘಟನೆ ಜರುಗಿದೆ.
ಜಗದೀಶನಾಯ್ಕ ಎಂಬುವವರು ಅದೇ ತಾನೆ ಬ್ಯಾಂಕಿನಿಂದ ಸಾಲವನ್ನು ಮಾಡಿ ೪೦ ಸಾವಿರ ತಂದಿದ್ದರು ಎನ್ನಲಾಗಿದ್ದು ಅದು ಬೆಂಕಿಗಾಹುತಿಯಾಗಿದ್ದಕ್ಕೆ ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯು ತಿಳಿಯುತ್ತಿದ್ದಂತೆ ರಾತ್ರಿ ಸುಮಾರು ೧೦-೩೦ ಕ್ಕೆ ಅಗ್ನಿ ಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಸಿದ್ದಾರೆ.
ತಂಝೀಮ್ ವತಿಯಿಂದ ನೊಂದ ಕುಟುಂಬಕ್ಕೆ ಸಾಂತ್ವಾನ ಹಾಗೂ ಆರ್ಥಿಕ ನೆರವು: ಅಕಸ್ಮಿಕ ಬೆಂಕಿಯಿಂದಾಗಿ ಮನೆಯಲ್ಲಿದ್ದ ಎಲ್ಲವನ್ನು ಕಳೆದುಕೊಂಡ ಜಗದೀಶ ನಾಯ್ಕ ಕುಟುಂಬಕ್ಕ ಮಜ್ಲಿಸೆ ಇಸ್ಲಾಹ್ ತಂಝೀಮ್ ಸಾಂತ್ವಾನವನ್ನು ಹೇಳಿದ್ದು ತಂಝೀಮ್ ಅಧ್ಯಕ್ಷ ಡಾ. ಬದ್ರುಲ್ ಹಸನ್ ಮುಅಲ್ಲಿಮ್, ಪ್ರದಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್ ಸೇರಿದಂತೆ ಇತರ ಪದಾಧಿಕಾರಿಗಳು ಘಟನೆ ಸ್ಥಳಕ್ಕೆ ತೆರಳಿ ತೀವ್ರ ಸಂತಾಪವನ್ನು ಸೂಚಿಸಿ ಆರ್ಥಿಕ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಇನಾಯುತುಲ್ಲಾ ಶಾಬಂದ್ರಿ, ಅಬ್ದುಲ್ ರಖೀಬ್ ಎಮ್.ಜೆ. ಮತ್ತಿತರರು ಹಾಜರಿದ್ದರು.
ಪ್ರಕರಣವು ಗ್ರಾಮೀಂ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ಪೋಲಿಸರು ತನಿಖೆಯನ್ನು ಕೈಗೊಂಡಿದ್ದಾರೆ.