ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

Sat, 20 Apr 2024 04:12:40  Office Staff   SO News

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 19 ಅಭ್ಯರ್ಥಿಗಳಿಂದ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಪಕ್ಷೇತರ ಅಭ್ಯರ್ಥಿ ಅವಿನಾಶ್ ನಾರಾಯಣ ಪಾಟೀಲ್ ಮತ್ತು ಪ್ರಕಾಶ್ ಪಿಂಟೋ ಶುಕ್ರವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಜಿಲ್ಲೆಯಲ್ಲಿ ಇದುವರೆಗೆ , ಭಾರತೀಯ ಜನತಾ ಪಕ್ಷದ ಹೆಗಡೆ ವಿಶ್ವೇಶ್ವರ (3 ನಾಮ ಪತ್ರಗಳು), ಭಾರತೀಯ ರಾಷ್ಟಿಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ (2 ನಾಮ ಪತ್ರಗಳು) , ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ (3 ನಾಮಪತ್ರಗಳು), ಕರ್ನಾಟಕ ರಾಷ್ಟ ಸಮಿತಿಯ ವಿನಾಯಕ ನಾಯ್ಕ್ (2 ನಾಮಪತ್ರಗಳು), ರಾಷ್ಟಿಯ ಜನ ಸಂಭಾವನಾ ಪಕ್ಷದ ನಾಗರಾಜ ಶ್ರೀಧರ್ ಶೇಟ್,(2 ನಾಮಪತ್ರಗಳು) ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್(2 ನಾಮಪತ್ರಗಳು), ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ (3 ನಾಮಪತ್ರಗಳು), ಕೃಷ್ಣ ಹನುಮಂತಪ್ಪ ಬಳೆಗಾರ (3 ನಾಮಪತ್ರಗಳು), ರೂಪಾ ನಾಯ್ಕ್,(2 ನಾಮಪತ್ರಗಳು) ರಾಜಶೇಖರ ಹಿಂಡಲಗಿ,(3 ನಾಮಪತ್ರಗಳು), ಉಮೇಶ್ ದೈವಜ್ಞ (2 ನಾಮಪತ್ರಗಳು), ಅವಿನಾಶ್ ನಾರಾಯಣ ಪಾಟೀಲ್ (2 ನಾಮಪತ್ರಗಳು), ಪ್ರಕಾಶ್ ಪಿಂಟೋ, ಚಿದಾನಂದ ಹೆಚ್ ಹರಿಜನ, ನಾಗರಾಜ ಅನಂತ ಶಿರಾಲಿ, ಮಡಗಾಂವಕರ್ ಪ್ರಮೋದ್, ಅರವಿಂದ ಗೌಡ ಹಾಗೂ ಸುಜಯ್ ಸುಧೀರ್ ಗೋಕರ್ಣ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 

  ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.


Share: