ರಾಜ್ಯಪಾಲರ ಪ್ರವಾಸ
ಮಂಗಳೂರು, ಮೇ ೩:(ಕರ್ನಾಟಕ ವಾರ್ತೆ)-ರಾಜ್ಯಪಾಲರಾದ ಹಂಸರಾಜ ಭಾರಧ್ವಾಜ ಅವರು ಮೇ ೫ರಂದು ೮.೧೫ಕ್ಕೆ ಬಜಪೆಯಿಂದ ಸರ್ಕ್ಯುಟ್ ಹೌಸ್‌ಗೆ ಆಗಮಿಸುವರು. ೧೦.೩೦ಕ್ಕೆ ಸರ್ಕ್ಯುಟ್ ಹೌಸ್‌ನಿಂದ ಸುರತ್ಕಲ್‌ಗೆ ನಿರ್ಗಮನ. ೧೧.೩೦ಕ್ಕೆ ಎನ್ ಐ ಟಿಕೆ ಘಟಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ೪.೩೦ಕ್ಕೆ ಸುರತ್ಕಲ್ ನಿಂದ ಮಣಿಪಾಲಕ್ಕೆ ತೆರಳುವರು. ಉಡುಪಿಯಲ್ಲೇ ತಂಗುವ ಅವರು ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಮೇ ೬ರಂದು ೭.೧೫ಕ್ಕೆ ಉಡುಪಿಯಿಂದ ಮಂಗಳೂರಿಗೆ ಆಗಮಿಸಿ ಸರ್ಕ್ಯುಟ್ ಹೌಸ್ ನಲ್ಲಿ ತಂಗುವರು. ೭ರಂದು ಬೆಳಗ್ಗೆ ೮.೪೫ಕ್ಕೆ ಬೆಂಗಳೂರಿಗೆ ವಿಮಾನದ ಮೂಲಕ ಹಿಂದಿರುಗುವರು.