ಬೆಂಗಳೂರು, ನ.೩: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಒಳಗಾಗಿರುವ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ವಿರುದ್ದ ಬೆಜವಾಬ್ದಾರಿತನದ ಹೇಳಿಕೆ ನೀಡಿರುವ ಬಾರ್ ಕೌನ್ಸಿಲ್ ಸದಸ್ಯರೊಬ್ಬರ ಬೆಂಗಳೂರು ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ವಕೀಲ ಬಿ.ವಿ. ರಾಮಮೂರ್ತಿ ನೇತೃತ್ವದಲ್ಲಿ ಸುಮಾರು ೨೦ಕ್ಕೂ ಹೆಚ್ಚು ವಕೀಲರು ಕರ್ನಾಟಕ ಬಾರ್ ಕೌನ್ಸಿಲ್ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ಸದಂರ್ಭದಲ್ಲಿ ಮಾತನಾಡಿದ ರಾಮಮೂರ್ತಿ, ಈ ಸಂಬಂಧ ಬಾರ್ ಕೌನ್ಸಿಲ್ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ಕೇಲವರು ಮಾಡಿರುವ ಸುಳ್ಳು ಆರೋಪಗಳನ್ನು ಆಧಾರವಾಗಿಟ್ಟುಕೊಂಡು ‘ ದಿನಕರನ್ ಅವರು ನೈತಿಕ ಹೊಣೆ ಹೊತ್ತು ರಜೆಯ ಮೇಲೆ ತೆರಳಬೇಕು ಹಾಗೂ ನ್ಯಾಯಾಲಯದ ಕಲಾಪಗಳನ್ನು ನಡೆಸ ಬಾರದು’ ಕಲಾಪ ನಡೆಸಿದರೆ ಧರಣಿ ನಡೆಸಲಾಗುತ್ತದೆ ಎಂದು ಬಾರ್ ಕೌನ್ಸಿಲ್ ಸದಸ್ಯ ರೊಬ್ಬರ ಹೇಳಿಕೆ ಸುಪ್ರೀಮ್ ಕೋರ್ಟ್ ತೀರ್ಪಿಗೆ ವಿರುದ್ದ ವಾಗಿರುತ್ತದೆ ಎಂದು ರಾಮಮೂರ್ತಿ ಬಾರ್ ಕೌನ್ಸಿಲ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿಗಳಿಂದ ನೇಮಕಗೊಂಡ ನ್ಯಾಯಾಂಗದ ಮುಖ್ಯಸ್ಥರನ್ನು ರಾಜಿನಾಮೆಗೆ ಒತ್ತಾಯಿಸುವ ಮತ್ತು ಅವರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ರೀತಿಯ ಹೇಳಿಕೆಗಳು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹದು, ಮುಖ್ಯ ನ್ಯಾಯ ಮೂರ್ತಿಗಳ ವಿರುದ್ದ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಬಾರ್ ಕೌನ್ಸಿಲ್ ಸದಸ್ಯರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಬಾರ್ ಕೌನ್ಸಿಲ್ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಬಿ.ವಿ. ರಾಮಮೂರ್ತಿ ಒತ್ತಾಯಿಸಿದ್ದಾರೆ.
‘ ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ಆರೋಪಗಳ ತನಿಖೆ ಪೂರ್ಣಗೊಳ್ಳುವವರಿಗೆ ಅವರು ನೈತಿಕ ಹೊಣೆ ಹೊತ್ತು ದೀರ್ಘ ರಜೆ ಮೇಲೆ ತೆರಳಬೇಕು ಮತ್ತು ಕಲಾಪದಲ್ಲಿ ಪಾಲ್ಗೊಳ್ಳಬಾರದು, ಇಲ್ಲದಿದ್ದರೆ ವಕೀಲರು ಧರಣಿ ನಡೆಸಬೇಕಾಗುತ್ತದೆ’ ಎಂದು ಬಾರ್ ಕೌನ್ಸಿಲ್‌ನ ಮಾಜಿ ಅಧ್ಯಕ್ಷ ವೈ.ಆರ್. ಸದಾಶಿವರೆಡ್ಡಿ ಅಕ್ಟೋಬರ್ ೨೭ ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಲಾಪಕ್ಕೆ ಸಿಜೆ ಗೈರು: ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಮಂಗಳವಾರ ಕಲಾಪಕ್ಕೆ ಗೈರು ಹಾಜರಾದ ಕಾರಣ ಮುಖ್ಯ ನ್ಯಾಯಮೂರ್ತಿಗಳ ಪೀಠದ ಕಲಾಪ ನಡೆಯಲಿಲ್ಲ.
ವಕೀಲರ ಸಂಘದ ಸಭೆ: ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ ಸಂಘದ ನಿರ್ಣಯಗಳನ್ನು ಅವಲೋಕಿಸಲು ಮತ್ತು ಮುಂದಿನ ತೀರ್ಮಾನಗಳ ಕುರಿತು ಚರ್ಚಿಸಲು ನಗರ ವಿಭಾಗದ ವಕೀಲರ ಭವನದಲ್ಲಿ ಬುಧುವಾರ (ನ.೪) ಮಧ್ಯಾಹ್ನ ೨ ಗಂಟೆಗೆ ಸರ್ವ ಸದಸ್ಯರ ವಿಶೇಷ ಸಭೆ ಕರೆಯಲಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ ತಿಳಿಸಿದ್ದಾರೆ.
ಈ ವಿಶೇಷ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕುರಿತು ಈವರೆಗೆ ಸಂಘ ತೆಗೆದುಕೊಂಡ ನಿರ್ಣಯಗಳು, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಧೀಶರ ಸಮೂಹ(ಕೊಲಿಜಿಯಂ) ನ ಬಗ್ಗೆ ಹಾಗೂ ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ