ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಮುಸ್ಲಿಮರ ಇಂದಿನ ಸ್ಥಿತಿಗೆ ಕಾರಣವಾಗಿರುವ ವಕ್ಫ್ ಮಂಡಳಿ ನಿರ್ಲಕ್ಷ್ಯ

ಹೊಸದಿಲ್ಲಿ: ಮುಸ್ಲಿಮರ ಇಂದಿನ ಸ್ಥಿತಿಗೆ ಕಾರಣವಾಗಿರುವ ವಕ್ಫ್ ಮಂಡಳಿ ನಿರ್ಲಕ್ಷ್ಯ

Sun, 27 Sep 2009 02:20:00  Office Staff   S.O. News Service

ಹೊಸದಿಲ್ಲಿ: ಈ ದೇಶದ ಮುಸ್ಲಿಮರ ಹೃದಯ ವಿದ್ರಾವಕ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಮುಂ ದಿಟ್ಟ ಸಾಚಾರ್ ಸಮಿತಿಯ ವರದಿ, ಅವರನ್ನು ನವ ದಲಿತರೆಂದು ಕರೆಯಿತು. ಅತ್ಯಧಿಕ ಭಿಕ್ಷುಕರಿರುವ, ಶಿಕ್ಷಣದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಸಮುದಾಯವೆಂದು ಭಾರತೀಯ ಮುಸ್ಲಿಮರನ್ನು ಬಣ್ಣಿಸಿತು.

ಸಾಚಾರ್ ವರದಿ ಬಹಿರಂಗಗೊಂಡ ಬೆನ್ನಿಗೇ, ಈ ದೇಶದ ಪ್ರಧಾನಿ ಏಕಾ‌ಏಕಿ ಎಚ್ಚೆತ್ತು, ಹೇಳಿಕೆಗಳನ್ನು ನೀಡತೊಡಗಿದರು. ವಿವಿಧ ರಾಜ್ಯಗಳು ಮುಸ್ಲಿಮರಿಗೆ ಮೀಸಲಾತಿ ನೀಡುವ ಕುರಿತಂತೆ ಮಾತನಾಡತೊಡಗಿದವು. ಇದನ್ನೇ ಮುಂದಿಟ್ಟು, ಬಿಜೆಪಿ, ಸಂಘಪರಿ ವಾರ `ಮುಸ್ಲಿಮರ ತುಷ್ಟೀಕರಣ ನಡೆಯುತ್ತಿದೆ' ಎಂದು ಟೀಕೆಗಳಿಯಿತು.

ಇದೇ ಸಂದಭದಲ್ಲಿ ಕೆಲವು ಮುಸ್ಲಿಂ ಪುಢಾರಿಗಳು ಈ ವರದಿಯನ್ನು ಮುಂದಿಟ್ಟು ಸರಕಾರವನ್ನು ಟೀಕಿಸುವ ಕೆಲಸಕ್ಕಿಳಿದರೇ ಹೊರತು, ಇದಕ್ಕೆ ತಾವೆಷ್ಟು ಹೊಣೆಗಾರರು ಎನ್ನುವು ದನ್ನು ಪ್ರಶ್ನಿಸಿಕೊಳ್ಳಲಿಲ್ಲ.

ಸರಕಾರ ಪಕ್ಕಕ್ಕಿರಲಿ. ಮುಸ್ಲಿಮ್ ಸಮುದಾಯದ ಅಭಿವೃದ್ದಿಗಾಗಿಯೇ ಇರುವ ವಕ್ ಮಂಡಳಿಗಳು ಮುಸ್ಲಿಮರ ಅಭಿವೃದ್ದಿಯಲ್ಲಿ ಯಾವ ಪಾತ್ರವನ್ನು ವಹಿಸಿವೆ? ಸುಮಾರು ೮೦೦ ವರ್ಷಕ್ಕೂ ಅಧಿಕ ಇತಿಹಾಸವಿರುವ ವಕ್ ಮಂಡಳಿಗಳಲ್ಲಿ ಬಡ ಮುಸ್ಲಿಮರ ಉಪಯೋಗಕ್ಕಾಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಅಲ್ಲಾಹನ ಹೆಸರಿನಲ್ಲಿ ದಾನ ನೀಡಿದ ಲಕ್ಷಾಂತರ ಎಕರೆ ಆಸ್ತಿಯಿದೆ.

ಈ ದೇಶದಲ್ಲಿ ಸುಮಾರು ೫ ಲಕ್ಷ ನೋಂದಾಯಿತ ವಕ್‌ಗಳಿವೆ. ಇವುಗಳ ಬಳಿ ಒಟ್ಟು ಆರು ಲಕ್ಷ ಎಕರೆಗೂ ಅಧಿಕ ಭೂಮಿ ಇದೆ. ಇದರ ಅಂದಾಜು ಮೌಲ್ಯ ಸುಮಾರು ೬೦೦೦ ಕೋಟಿ. ಆದರೆ ಇವುಗಳಿಂದ ಬರುವ ಆದಾಯ ಮಾತ್ರ ಬರೇ ೧೬೩ ಕೋಟಿ ರೂ. ಅಂದ ರೆ ಕೇವಲ ಶೇ. ೨.೭ರಷ್ಟು. ಬಡ ಮುಸ್ಲಿಮರ ಅಭಿವೃದಿಟಛಿಗೆ ಬಳಕೆಯಾಗಬೇಕಾಗಿದ್ದ ಉಳಿದ ಹಣ ಎಲ್ಲಿ ಹೋಯಿತು? ನಿಜಕ್ಕೂ ಈ ವಕ್ ಮಂಡಳಿಗಳ ಆಸ್ತಿಗಳಿಂದ ಹಣ ದೋಚುತ್ತಿರುವವರು ಯಾರು?

ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದಂತೆ, ರೈಲ್ವೆ ಮತ್ತು ರಕ್ಷಣಾ ಖಾತೆಗಳ ಬಳಿಕ, ಅತಿ ಹೆಚ್ಚಿನ ಭೂಮಿಯ ಒಡೆಯರಾಗಿ ಈ ವಕ್ ಮಂಡಳಿಗಳು ಗುರುತಿಸಲ್ಪಡುತ್ತಿವೆ.

ಆದರೆ ಈ ಜಮೀನನ್ನು ಕೆಲವೇ ಕೆಲವು ಶ್ರೀಮಂತ ವರ್ಗ ಜುಜುಬಿ ಬೆಲೆಗೆ ಅನುಭೋಗಿಸುತ್ತಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಬೆಂಗಳೂರಿನ ಪ್ರತಿಷ್ಠಿತ ವಿಂಡ್ಸರ್ ಮ್ಯಾನರ್-ಶೆರಟಾನ್ ಹೊಟೇಲ್ ನಮ್ಮ ಮುಂದಿದೆ. ವಕ್ ಮಂಡಳಿಯ ನಾಲ್ಕು ಎಕರೆ ಭೂಮಿಯಲ್ಲಿ ಈ ಹೊಟೇಲ್ ನಿಂತಿದೆ. ಅತ್ಯಂತ ದುಬಾರಿ ಪ್ರದೇಶ ಇದು. ಈ ಹೊಟೇಲ್‌ ನ ಕೊಠಡಿಯಲ್ಲಿ ಒಂದು ದಿನದ ಬಾಡಿಗೆಯೇ ಸಹಸ್ರಾರು ರೂಪಾಯಿಗಳಿವೆ.

ಅಂದ ಹಾಗೆ, ಈ ಹೊಟೇಲು ೨೦೦೫ರವರೆಗೂ ತಾನಿರುವ ನಾಲ್ಕು ಎಕರೆ ಭೂಮಿಗಾಗಿ ವಕ್ ಮಂಡಳಿಗೆ ನೀಡುತ್ತಿದ್ದ ಬಾಡಿಗೆಯೆಷ್ಟು ಗೊತ್ತೇ? ಕೇವಲ ಆರು ಸಾವಿರ ರೂಪಾ ಯಿ.!

೨೦೦೫ರ ಬಳಿಕ ಹೈಕೋರ್ಟ್‌ನ ಆದೇಶದಂತೆ ೬ ಲಕ್ಷ ರೂ.ವನ್ನು ನೀಡುತ್ತಾ ಬರುತ್ತಿದೆ. ಈಗಿನ ಮಾರುಕಟ್ಟೆಯ ಮೌಲ್ಯದ ಪ್ರಕಾರ ಕನಿಷ್ಠವೆಂದರೂ ತಿಂಗಳಿಗೆ ೫೦ ಲಕ್ಷ ರೂಪಾಯಿ ಬಾಡಿಗೆ ಪಾವತಿಸಬೇಕಾಗುತ್ತದೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಈ ದೇಶದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಹಲವು ಜಮೀನುಗಳನ್ನು ಬರೇ ಕೆಲವೇ ಲಕ್ಷ ಗಳಿಗೆ ವಕ್ ಮಂಡಳಿಗಳು ಮಾರಿ ಕೈ ತೊಳೆದುಕೊಂಡಿವೆ.

ಮಂಡಳಿಗಳ ಸದಸ್ಯರು ಕೆಲವು ಸಾವಿರ ರೂಪಾಯಿಗಳ ಹಣದಾಸೆಗೆ ಬಲಿಗೊಟ್ಟುದು ಬರೇ ವಕ್‌ನ ಆಸ್ತಿಯನ್ನು ಮಾತ್ರವಲ್ಲ, ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ಕೂಡ. ಚೆನ್ನೈ, ಮುಂಬೈ, ಬೆಂಗಳೂರು ಹೀಗೆ ಎಲ್ಲೆಡೆ ಇದು ನಡೆದಿದೆ, ನಡೆಯುತ್ತಿದೆ. ಬಡ ಮುಸ್ಲಿ ಮ್ ಯುವಕರ ಶಿಕ್ಷಣಕ್ಕೆ, ಅವರ ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗಬೇಕಾದ ಭೂಮಿಯನ್ನು ಅಂಬಾನಿಗಳು, ಐಟಿಸಿಯಂತಹ ಕಂಪೆನಿಗಳು ಮೇಯುತ್ತಿವೆ. ಶೇ. 70 ರಷ್ಟು ವಕ್ ಆಸ್ತಿಗೂ ಇದೇ ದು:ಸ್ಥಿತಿ ಒದಗಿದೆ ಎನ್ನುವುದನ್ನು ರಾಜ್ಯಸಭಾಧ್ಯಕ್ಷ ಕೆ.ರಹ್ಮಾ ನ್ ಖಾನ್ ಹೇಳುತ್ತಾರೆ.

೧೯೯೫ರ ವಕ್ ಕಾಯ್ದೆಯ ಬಳಿಕ ಈ ಅಕ್ರಮ ಇನ್ನಷ್ಟು ಹೆಚ್ಚುವುದಕ್ಕೆ ಆಸ್ಪದವಾಗಿದೆ. ಈ ಮೊದಲು ವಕ್ ಆಸ್ತಿ ಮಾರಾಟ ಮಾಡಬೇಕಾಗಿದ್ದರೆ ಅಥವಾ ಜಮೀನು ವಿನಿಮಯ ಮಾಡಿಕೊಳ್ಳಬೇಕಾಗಿದ್ದರೆ ಜಿಲ್ಲಾ ನ್ಯಾಯಾಧೀಶರು ಮಂಜೂರಾತಿ ನೀಡಬೇಕಾಗಿತ್ತು. ಆದರೆ ಈಗ, ಮಂಡಳಿಗಳೇ ತಮಗೆ ಬೇಕಾದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪಡೆದಿವೆ.

ವಕ್ ಮಂಡಳಿಗಳು ತಮ್ಮಲ್ಲಿರುವ ಸಂಪನ್ಮೂಲಗಳನ್ನು ನಿಜಕ್ಕೂ ಮುಸ್ಲಿಂ ಸಮುದಾಯ ಕ್ಕಾಗಿ ಬಳಸಿದ್ದರೆ ಇಂದು ದೇಶದಲ್ಲಿ ಮುಸ್ಲಿಮರ ಸ್ಥಿತಿ ಇಷ್ಟು ಕೆಳಮಟ್ಟದಲ್ಲಿರುತ್ತಿರಲಿಲ್ಲ. ಆದರೆ, ಇನ್ನಾದರೂ ಎಚ್ಚೆತ್ತರೆ ಸಂಪೂರ್ಣ ಕೈ ಬಿಟ್ಟು ಹೋಗಲಿರುವ ಅಳಿದುಳಿದ ವಕ್ ಆಸ್ತಿಯನ್ನು ರಕ್ಷಿಸಿ, ಬಡ ಮುಸ್ಲಿಮರಿಗೆ ವಿನಿಯೋಗಿಸಬಹುದಾಗಿದೆ.

`ವಿಂಡ್ಸರ್ ಮ್ಯಾನರ್' ಹೊಟೇಲಿನ ವಿರುದ್ದ ನ್ಯಾಯಾಲಯಕ್ಕೆ ಮೊರೆ ಹೋದಂತೆ, ಅತಿ ಕ್ರಮಣಕ್ಕೀಡಾದ ಉಳಿದ ಆಸ್ತಿಗೆ ಸಂಬಂಧಿಸಿದಂತೆಯೂ ಕಾನೂನು ಕ್ರಮವನ್ನು ಜರಗಿಸಿ, ಅದರ ಉಪಯೋಗ ಹಿಂದುಳಿದ ಮುಸ್ಲಿಮರಿಗೆ ದೊರಕುವಂತಾಗಲು ವಕ್ ಮಂಡಳಿಗ ಳೊಳಗಿನ ಪ್ರಾಮಾಣಿಕ ಮುಸ್ಲಿಂ ನಾಯಕರು ಶ್ರಮಿಸಬೇಕಾಗಿದೆ.

ಹಾಗೆಯೇ ಉಳಿದ ಶೇ.30ರಷ್ಟು ಭೂಮಿಯನ್ನು ರಕ್ಷಿಸಿ, ಅದನ್ನು ಮುಸ್ಲಿಂ ಸಮುದಾಯದ ಏಳಿಗೆಗೆ ವ್ಯಯಿಸುವುದಕ್ಕೆ ಅವರು ಮುಂದಾಗಬೇಕಾಗಿದೆ. ದೇಶದ ವಿವಿಧ ರಾಜ್ಯಗಳ ವಕ್ ಮಂಡಳಿಗಳು ಸವಿಸ್ತಾರವಾಗಿ ತಮ್ಮಲ್ಲಿನ ಪರಿಸ್ಥಿತಿಯ ಪರಿಶೀಲನೆ ನಡೆಸಿ, ವಕ್ ಸೊತ್ತುಗಳನ್ನು ಪ್ರಚಲಿತ ಅನಾಥಾವಸ್ಥೆಯಿಂದ ಮುಕ್ತಗೊಳಿಸುವ ಶ್ರಮ ಆರಂಭಿಸಿದರೆ, ದೇಶದ ಮುಸ್ಲಿಮರ ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡೀತು.

``...ಖಂಡಿತವಾಗಿಯೂ ಅಲ್ಲಾಹನು ಒಂದು ಸಮುದಾಯದ ಸ್ಥಿತಿಯನ್ನು ಬದಲಿಸುವುದಿ ಲ್ಲ-ಅದು ಸ್ವತಃ ತನ್ನ ಸ್ಥಿತಿಯನ್ನು ಬದಲಿಸುವ ತನಕ..."(೧೩:೧೧) ಪವಿತ್ರ ಕುರ್‌ಆನಿನ ಈ ವಾಕ್ಯ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ


Share: