ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ.

ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ.

Sat, 27 Apr 2024 23:18:55  Office Staff   SO News

ಶಿರಸಿ: ವಾಸ್ತವ್ಯ ಮತ್ತು ಸಾಗುವಳಿಗಾಗಿ ಅತಿಕ್ರಮಿಸಿರುವ ಅರಣ್ಯ ಭೂಮಿ ಹಕ್ಕು ಪತ್ರ ನೀಡುವುದು ಜನಪ್ರತಿನಿಧಿಗಳ ಧರ್ಮ. ಚುನಾವಣೆ ಬಂದಾಗ ಮಾತ್ರ ಗಂಭೀರತೆ ಪಡೆಯುವ ಅತಿಕ್ರಮಣದಾರರ ಸಮಸ್ಯೆ ನಂತರದ ದಿನಗಳಲ್ಲಿ ತೀವೃತೆಗೊಳ್ಳದಿರುವುದು ವಿಷಾದಕರ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಧಾನ ಸಂಚಾಲಕಿ ಕುಮಾರಿ ರಂಜಿತಾ ರವೀಂದ್ರ ಅವರು ಹೇಳಿದರು.

 ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಅರಣ್ಯ ಅತಿಕ್ರಮಣದಾರ ಮಹಿಳಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಅವರು ಮೇಲಿನಂತೆ ಹೇಳಿದರು.

 ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ಹೋರಾಟಗಾರ ವೇದಿಕೆ ಪ್ರಯತ್ನಿಸುತ್ತಿರುವುದು ಸಂತೋಷಕರ. ರಾಜ್ಯ ಮತ್ತು ಕೇಂದ್ರ ಸರಕಾರ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.

 ಸಭೆಯಲ್ಲಿ ಗಂಗಾ ರಾಮ ನಾಯ್ಕ, ಇಬ್ರಾಹಿಂ ಗೌಡಳ್ಳಿ, ಶಾರದಾ ನೆಗ್ಗು ಮಾತನಾಡಿದರು. ಜಯಾ ದೊಡ್ನಳ್ಳಿ, ಜಮೀಲಾ ರಿಯಾಜ್ ಅಹ್ಮದ್, ನಾರಾಯಣ ಪೂಜಾರಿ, ಮುಬಾರಕಬೇಗಂ ಅಯೂಬಬುದ್ವಂತ ಬರ್ಗಿ, ಧರ್ಮ ಗಣಪ ಗೌಡ, ಅನ್ನಪೂರ್ಣ ಸೊಂದಾ, ಶೋಭಾ ಮಡಿವಾಳ ನೆಗ್ಗು, ನೇತ್ರಾವತಿ ಮಂಜಗುಣಿ ಮುಂತಾದವರು ಉಪಸ್ಥಿತರಿದ್ದರು.

ಹೋರಾಟ ನಿಲ್ಲದು:
 ಭೂಮಿ ಹಕ್ಕು ಸಂವಿಧಾನ ಬದ್ಧ ಹಕ್ಕು, ಅರಣ್ಯ ಭೂಮಿ ಹಕ್ಕಿನ ಹೋರಾಟಕ್ಕೆ ೩೩ ವರ್ಷಗಳಾಗಿದ್ದು, ಅರಣ್ಯ ಹಕ್ಕು ಕಾಯಿದೆ ಜ್ಯಾರಿಯಾಗಿ ೧೬ ವರ್ಷಗಳಾದರೂ ಇತ್ಯರ್ಥವಾಗದೇ ಇರುವುದು ವಿಷಾದಕರ. ಅರಣ್ಯವಾಸಿಗಳ ಸಮಸ್ಯೆ ಚುನಾವಣೆ ಸರಕಾಗದೇ, ಭೂಮಿ ಹಕ್ಕು ನೀಡುವಲ್ಲಿ ಇಚ್ಛಾಶಕ್ತಿ ಪ್ರದರ್ಶನಗೊಳ್ಳುವುದು ಅವಶ್ಯ. ಹಕ್ಕಿಗಾಗಿ ಹೋರಾಟ ನಿರಂತರ ಎಂದು ಕುಮಾರಿ ರಂಜಿತಾ ರವೀಂದ್ರ ಅವರು ಹೇಳಿದರು.


Share: