ಬೆಂಗಳೂರು, ಏಪ್ರಿಲ್ ೩೦ : ಗ್ರಾಮಪಂಚಾಯತಿ ಸಾರ್ವತ್ರಿಕ ಚುನಾವಣೆ-೨೦೧೦ ರ ಸಂಬಂಧ ಮೇ ೮ ಮತ್ತು ೧೨ ರಂದು ನಡೆಯಲಿರುವ ಮತದಾನದ ವೇಳೆ ಮತದಾರರ ಬಲಗೈನ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲು ರಾಜ್ಯ ಚುನಾವಣಾ ಆಯೋಗವು ತೀರ್ಮಾನಿಸಿದೆ. ಹಾಗೂ ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.