ಸಕಲೇಶಪುರ, ನವೆಂಬರ್ ೨೪:ತಾಲೂಕು ಜಯಕರ್ನಾಟಕ ವತಿಯಿಂದ ೫೪ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ "ಗೆದ್ದಲು ಪಂಡಿತರು" ನಾಟಕ ಪ್ರದರ್ಶನ ಪಟ್ಟಣದ ಪುರಭವನದಲ್ಲಿ ನವಂಬರ್ ೨೫ ರಂದು ಸಂಜೆ ೫.೩೦ ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಯ ಕರ್ನಾಟಕ ರಾಜ್ಯಸಮಿತಿ ಸದಸ್ಯ ಪವನ್ ಕುಮಾರ್ ನೆರವೇರಿಸಲಿದ್ದು,ಅಧ್ಯಕ್ಷತೆಯನ್ನು ತಾಲೂಕು ಸಾಂಸ್ಕ್ರತಿಕ ಘಟಕದ ಅಧ್ಯಕ್ಷ ಸಾ.ಸು.ವಿಶ್ವನಾಥ್ ವಹಿಸಲಿದ್ದಾರೆ. ಅಧಿತಿಗಳಾಗಿ ರಾಜ್ಯ ಸಾಂಸ್ಕ್ರತಿಕ ಘಟಕದ ಅಧ್ಯಕ್ಷ ರಾಮಚಂದ್ರಯ್ಯ,ಜಿಲ್ಲಾದ್ಯಕ್ಷ ಉಮೇಶ್,ತಾಲೂಕು ಅದ್ಯಕ್ಷ ಸುಪ್ರದೀಪ್ತ್ ಯಜಮಾನ್, ಕಸಾಪ. ಅಧ್ಯಕ್ಷ ಪ್ರಸಾದ್ ರಕ್ಷಿದಿ,ಪುರಸಭಾದ್ಯಕ್ಷ ಇಬ್ರಾಹಿಂ ಮುಂತಾದವರು ಭಾಗವಹಿಸಲಿದ್ದಾರೆ.
ಸಕಲೇಶಪುರ:ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರೀಯ ಕೋಮು ಸೌಹಾರ್ಧ ದಿನ ಕಾರ್ಯಕ್ರಮ ಪಟ್ಟಣದ ಅಲ್ ಅಮೀನ್ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಕಲ್ಲಿ ಕಸಾಪ ಅಧ್ಯಕ್ಷ ಪ್ರಸಾದ್ ರಕ್ಷಿದಿ ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್,ಪತ್ರಕರ್ತರ ಸಂಘದ ಅದ್ಯಕ್ಷ ಮಲ್ನಾಡ್ ಮೆಹಬೂಬ್, ಅಲ್ ಅಮೀನ್ ಶಾಲೆ ಅದ್ಯಕ್ಷ ಝಫರ್ ಅಲಿ ಭಗವಹಿಸಲಿದ್ದಾರೆ.
ಸೌಜನ್ಯ: ಸುದ್ದಿಮನೆ