ಸಕಲೇಶಪುರ, ಫೆಬ್ರವರಿ ೧೮: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಹಾಸನ ಜಿಲ್ಲಾ ವಕ್ವ ಮಂಡಲಿ ಅಧ್ಯಕ್ಷ ಮಹಮ್ಮದ್ ಅಲೀಂನನ್ನು ಸ್ಥಾನ ದಿಂದ ವಜ ಗೊಳಿಸ ಬೇಕು ಹಾಗೂ ಉಗ್ರ ಕಾನೂನು ಕ್ರಮ ಕೈಗೂಳ್ಳ ಬೇಕು ಎಂದು ನೂರುಲ್ ಹುದಾ ಸುನ್ನಿ ವೆಲ್ ವೇರ್ ಟ್ರೇಸ್ಟ ಅಧ್ಯಕ್ಷ ಎಸ್.ಕೆ.ವಝೀರ್ ಒತ್ತಾಯಿಸಿದರು.
ಸೋಮಾವಾರ ಇಲ್ಲಿಯ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಯವರಿಗೆ ಮಹಮ್ಮದ್ ಅಲೀಂ ವಿರುದ್ದ ಕ್ರಮ ಕೈ ಗೋಳ್ಳುಬೇಕೆಂದು ಮನವಿ ಸಲ್ಲಿಸಿದ ನಂತರ ಸುದ್ದಿ ಗಾರರೂಂದಿಗೆ ಮಾತನಾಡಿದ ಅವರು, ಇದೂಂದು ಸೈತಾನಿ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಲೀಂ ನಂತಹ ಕಾಮಕರಿಂದ ಮಹಿಳೆಯರು ಸಮಾಜದಲ್ಲಿ ಕೆಲಸಮಾಡುವುದು ಕಷ್ಟವಾಗಿದೆ,ಇದು ಮುಸ್ಲೀಮ್ ಸಮಾಜಕ್ಕೆ ಮಾಡಿರುವ ಅಗೌರವವಾಗಿದೆ,ಜಿಲ್ಲೆಯ ಎಲ್ಲಾ ಮುಸ್ಲೀಮ್ ಮುಖಂಡರು, ಸಂಘ-ಸಂಸ್ಥೆಗಳು ಖಂಡಿಸಬೇಕು ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ನೈತಿಕ ಬೆಂಬಲ ನೀಡಬೇಕು ಎಂದು ಮನವಿಮಾಡಿದರು.
ಸಮಾಜದ ಜವಾಬ್ದಾರಿಯತ ಸ್ಥಾನ ದಲ್ಲಿರುವರು ಇಂಥಹ ನೀಜ ಕೆಲಸಕ್ಕೆ ಇಳಿದರೆ ಸಮಾಜವನ್ನು ಉಳಿಸುವರುಯಾರು? ಪ್ರಶ್ನಿಸಿದ ವಝೀರ್ ಇಸ್ಲಾಂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದೆ, ವಿಶೇಷ ಗೌರವ ನೀಡಿದೆ ಎಂದು ತಿಳಿಸಿದರು.