ಭಟ್ಕಳ, ನವೆಂಬರ್ ೫: ಚಲಿಸುತ್ತಿರುವ ರೈಲ್ವೇ ಇಂಜಿನ್ನಿಗೆ ತಲೆಯೊಡ್ಡಿದ ಅಪರಿಚಿತನೋರ್ವ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತಾಲೂಕಿನ ಸರ್ಪನಕಟ್ಟೆಯ ಬಳಿ ನಡೆದಿದೆ.
ಮೃತ ದೇಹವು ಗುರುತು ಹಿಡಿಯದ ರೀತಿಯಲ್ಲಿ ಛಿದ್ರಗೊಂಡಿದ್ದು, ವ್ಯಕ್ತಿಯು 33ರಿಂದ 38 ವರ್ಷದ ಒಳಗಿನವನಿರಬೇಕು ಎಂದು ಅಂದಾಜಿಸಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿಯೇ ಪೋಸ್ಟ ಮಾರ್ಟ ನಡೆಸಲಾಗಿದ್ದು, ಅಲ್ಲಿಯೇ ಅಂತ್ಯ ಸಂಸ್ಕಾರ ಕ್ರಿಯೆಯನ್ನೂ ನೆರವೇರಿಸಲಾಗಿದೆ. ಶವ ಬಿದ್ದುಕೊಂಡಿದ್ದ ಆಸುಪಾಸಿನ ಸ್ಥಳದಲ್ಲಿದ್ದ ಒಂದು ಮೊಬೈಲ್, ‘ರಾಯಲ್ ಸ್ಟ್ಯಾಗ್’ ಬ್ರ್ಯಾಂಡಿನ ಒಂದು ವಿಸ್ಕಿ ಬಾಟಲು, ಹಾಗೂ ಒಂದು ನೀರು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.