ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

Fri, 19 Apr 2024 14:25:00  Office Staff   Vb

ಹೊಸದಿಲ್ಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ಮಾಡಿರುವ ಆರೋಪಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇವಿಎಂಗಳಲ್ಲಿ ಚಲಾ ವಣೆಯಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್ ಗಳೊಂದಿಗೆ ತಾಳೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ಪೈಕಿ ಅರ್ಜಿದಾರರೊಬ್ಬರ ವಕೀಲರಾದ ಪ್ರಶಾಂತ್ ಭೂಷಣ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೇಲಿನ ಸೂಚನೆ ನೀಡಿದೆ.

ದಯವಿಟ್ಟು ಈ ಆರೋಪಗಳನ್ನು ಪರಿಶೀಲಿಸಿ ತನಿಖೆ ನಡೆಸಿ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ದ್ವಿಸದಸ್ಯ ಪೀಠ ಆಯೋಗದ ವಕೀಲರಾದ ಮಣಿಂದರ್ ಸಿಂಗ್ ಅವರಿಗೆ ಹೇಳಿತು.

ಕೇರಳದಲ್ಲಿ ಅಣಕು ಮತ ದಾನ ಫಲಿತಾಂಶಗಳ ಕುರಿತಾದ ವರದಿಯಲ್ಲಿ ಬಿಜೆಪಿಗೆ ಹೆಚ್ಚು ವರಿ ಮತಗಳು ಬಿದ್ದಿರುವ ಕುರಿತು ಪ್ರಶಾಂತ್ ಭೂಷಣ್ ಉಲ್ಲೇಖಿಸಿದರು. ಎಪ್ರಿಲ್ 17ರಂದು ಕೇರಳದ ಕಾಸರ ಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಕನಿಷ್ಠ ನಾಲ್ಕು ಇವಿಎಂಗಳು ಬಿಜೆಪಿ ಪರ ತಪಾಗಿ ಮತಗಳನ್ನು ದಾಖಲಿಸಿದ್ದವು ಎಂಬ ಮಾಧ್ಯಮ ವರದಿಯನ್ನು ಭೂಷಣ್ ಉಲ್ಲೇಖಿಸಿದ್ದರು.


Share: