ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳನ್ನು ರಕ್ಷಣೆ ಮಾಡಿದ್ದ ಪೋಲಿಸರು

ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳನ್ನು ರಕ್ಷಣೆ ಮಾಡಿದ್ದ ಪೋಲಿಸರು

Tue, 05 Mar 2024 07:47:08  Office Staff   SO News

 

 

ಭಟ್ಕಳ: ತಾಲೂಕಿನ ತೆಂಗಿನ ಗುಂಡಿ ಸಮೀಪ ಸೋಮವಾರ ಬೆಳಗಿನ ಜಾವ ಅಕ್ರಮವಾಗಿ ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳನ್ನು ಭಟ್ಕಳ ಪೊಲೀಸ್ ಇನ್ಸ್ಪೇಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ರಕ್ಷಣೆ ಮಾಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ

ಲಾರಿ ಚಾಲಕ ಬಿದರನ ಹುಮ್ನಬಾದ ನಿವಾಸಿ ನಾಗಶೆಟ್ಟಿ ಶರಣಪ್ಪ ಗೋವಿ, ಹೈದ್ರಾಬಾದಿನ ನಿವಾಸಿ ಮಹ್ಮದ್ ಸರ್ದಾರ  ಮತ್ತು ಮಹಾರಾಷ್ಟçದ ಜಬ್ಬಾರ ಮಿಯಾ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಹೊನ್ನಾವರ ಕಡೆಯಿಂದ ಮಂಗಳೂರು ಕಡೆಗೆ ಎತ್ತುಗಳನ್ನು ಪರ ವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊAಡು ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.  ೩.೭೫ ಲಕ್ಷ ರೂ. ಮೌಲ್ಯದ ೧೫ ಎತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ರಕ್ಷಣೆ ಮಾಡಿದ ಜಾನುವಾರಗಳನ್ನು ನ್ಯಾಯಾಲಯದ ಅನುಮತಿ ಪಡೆದು ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಸೇರಿಸಲಾಗಿದೆ.  ಕಾರ್ಯಚರಣೆಯಲ್ಲಿ ವಾಹನ ಚಾಲಕ ಕಿರಣ ಕುಮಾರ, ಸಿಬ್ಬಂದಿಯಾದ ಅರುಣ ಪಿಂಟೋ, ಉದಯ ನಾಯ್ಕ ಹಾಗೂ ಇತರರು ಇದ್ದರು. ಪಿಎಸ್‌ಐ ಶಿವಾನಂದ ನಾವದಾರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share: