ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮುನ್ನೆಚ್ಚರಿಕೆ ಕ್ರಮಗಳಿಂದ ಗುಡ್ಡ ಕುಸಿತದ ಅನಾಹುತಗಳನ್ನು ತಡೆಯಲು ಸಾಧ್ಯ.

ಕಾರವಾರ: ಮುನ್ನೆಚ್ಚರಿಕೆ ಕ್ರಮಗಳಿಂದ ಗುಡ್ಡ ಕುಸಿತದ ಅನಾಹುತಗಳನ್ನು ತಡೆಯಲು ಸಾಧ್ಯ.

Wed, 04 Jun 2025 18:37:40  IG Bhatkali   IG Bhatkali
ಕಾರವಾರ: ಮುನ್ನೆಚ್ಚರಿಕೆ ಕ್ರಮಗಳಿಂದ ಗುಡ್ಡ ಕುಸಿತದ ಅನಾಹುತಗಳನ್ನು ತಡೆಯಲು ಸಾಧ್ಯ.

ಕಾರವಾರ: ಗುಡ್ಡ ಕುಸಿತ ಪ್ರದೇಶಗಳಲ್ಲಿ ಕಂಡು ಬರುವ ಬದಲಾವಣೆಗಳನ್ನು ಸೂಕ್ಷö್ಮವಾಗಿ ಗಮನಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುಡ್ಡ ಕುಸಿತದಿಂದಾಗುವ ಅನಾಹುತಗಳನ್ನು ತಡೆಯಲು ಸಾಧ್ಯವಿದೆ ಎಂದು ಜಿ.ಎಸ್.ಐ. ನ ತಾಂತ್ರಿಕ ಅಧಿಕಾರಿ ಮಧುಸೂದನ್ ಹೇಳಿದರು.

ಅವರು ಬುಧವಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಭೂ ಕುಸಿತ ಪ್ರದೇಶಗಳ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಸ್ಪಾಟರ್ಸ್ಗಳಿಗೆ ಆನ್‌ಲೈನ್ ಮೂಲಕ ನಡೆದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಭೂಕುಸಿತಕ್ಕೆ ಮಳೆಯೇ ಪ್ರಮುಖ ಕಾರಣವಾಗಿದ್ದು, ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಭೂಕುಸಿತಗಳು ಘಟನೆಗಳು ಸಂಭವಿಸುತ್ತವೆ. ಭೂಕುಸಿತಕ್ಕೆ ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತ ಅವೈಜ್ಞಾನಿಕ ನಿರ್ಮಾಣ ಚಟುವಟಿಕೆಗಳು ಸಹ ಕಾರಣವಾಗಿದ್ದು, ಕಡಿಮೆ ಸಮಯದಲ್ಲಿ ಸತತವಾಗಿ ಬೀಳುವ ಹೆಚ್ಚಿನ ಮಳೆಯಿಂದ ಮಣ್ಣಿನ ಸವಕಳಿ ಉಂಟಾಗಿ, ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳು ಹೆಚ್ಚಾಗಿ ಉಂಟಾಗುತ್ತವೆ ಎಂದರು.

ಎತ್ತರ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ನೀರು ಅಲ್ಲಿಯೇ ಸಂಗ್ರಹವಾಗುವುದು ಕೂಡಾ ಭೂಕುಸಿತಕ್ಕೆ ಕಾರಣವಾಗುತ್ತದೆ. ಜೆಸಿಬಿಯನ್ನು ಉಪಯೋಗಿಸಿಕೊಂಡು ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕೊರೆದು ರಸ್ತೆ, ಮನೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಸಂಭವಿಸಲಿದೆ. ಸ್ಪಾರ‍್ಸ್ ಗಳು ಭೂಕುಸಿತದ ಪ್ರದೇಶದಲ್ಲಿ ಬಿರುಕಿನ ಲಕ್ಷಣಗಳು ಕಂಡು ಬಂದ ಸಮಯದಲ್ಲಿ ಕೂಡಲೇ ಈ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು. ರಸ್ತೆಗಳಲ್ಲಿ ಬಿರುಕುಗಳು ಕಂಡುಬAದಲ್ಲಿ ರಾಷ್ಟಿçÃಯ ಹೆದ್ದಾರಿ,ಲೋಕೋಪಯೋಗಿ ಇಲಾಖೆಗಳಿಗೆ ಮಾಹಿತಿಯನ್ನು ನೀಡಬೇಕು ಮತ್ತು ಅಂತಹ ರಸ್ತೆಯ ಮೇಲೆ ವಾಹನಗಳನ್ನು ವೇಗವಾಗಿ ಚಲಾಯಿಸಬಾರದು ಎಂದರು.

ಭೂಕುಸಿತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂಚೂಣಿಯಾಗಿ ಮಾಡಿಕೊಂಡಿದ್ದಲ್ಲಿ ಮಾನವ ಜೀವ ಹಾನಿ ಹಾಗು ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ತಡೆಯಬಹುದು. ಭೂ ಕುಸಿತ ಪ್ರದೇಶದ ಗುಡ್ಡ-ಬೆಟ್ಟಗಳ ಬಳಿ ನಿಂತು ಸಾರ್ವಜನಿಕರು ಫೋಟೋ, ವಿಡೀಯೋಗಳನ್ನು ತೆಗೆದುಕೊಳ್ಳಬಾರದು. ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ನೇಮಕ ಮಾಡಿರುವ ಸ್ಪಾಟರ್ ಗಳು ಸಾರ್ವಜನಿಕರ ಹಿತದೃಷ್ಠಿಯ ಜೊತೆಗೆ ತಮ್ಮ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಮಳೆಗಾಲ ಆರಂಭಕ್ಕೂ ಮುನ್ನವೇ ಭೂಕುಸಿತದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಭೂಕುಸಿತದ ಅಪಾಯಗಳ ಬಗ್ಗೆ ಮನವರಿಕೆ ಮಾಡಬೇಕು. ಭೂ ಕುಸಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿPಕರು ಎಚ್ಚರಿಕೆಯಿಂದ ಇರಬೇಕು, ಗುಡ್ಡ ಕುಸಿತದ ಅಪಾಯದ ಬಗ್ಗೆ ಸೂಚನೆಗಳು ಬಂದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದರು.

ಭೂಕುಸಿತ ಸಂಬಂಧಿಸಿದಂತೆ Bhooskhalan ಮೊಬೈಲ್ ಆಪ್ಲೀಕೇಶ್‌ನ್ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಕಾರ್ಯಗಾರದಲ್ಲಿ ತಿಳಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿ.ಎಸ್.ಐ. ಸಂಸ್ಥೆಯಿಂದ ಈಗಾಗಲೇ 439 ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಬಗ್ಗೆ ಸಂಬAದಪಟ್ಟ ಎಲ್ಲಾ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ. ಭೂ ಕುಸಿತ ಸ್ಥಳಗಳ ಬಗ್ಗೆ ನಿಗಾ ವಹಿಸಲು 220 ಸ್ಪಾಟರ್ ಗಳನ್ನು ನೇಮಕ ಮಾಡಲಾಗಿದ್ದು ಅವರಿಗೆ ಈಗಾಗಲೇ ಒಂದು ಸುತ್ತಿನ ತರಬೇತಿಯನ್ನು ನೀಡಲಾಗಿದ್ದು, ಪ್ರಸ್ತುತ 2 ನೇ ಸುತ್ತಿನ ತರಬೇತಿಯನ್ನು ಬುಧವಾರ ನೀಡಲಾಗಿದೆ.

ಕಾರ್ಯಗಾರದಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು, ಈಗಾಗಲೇ ನೇಮಕಗೊಂಡಿರುವ ಸ್ಪಾರ‍್ಸ್ಗಳು , ಸಂಬಂದಪಟ್ಟ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಪಿಡಿಓ ಗಳು ಹಾಜರಿದ್ದರು.


Share: