ಭಟ್ಕಳ: ಇಲ್ಲಿನ ಮಂಗಳೂರು ಗೋವಾ ರಾ.ಹೆ.೧೭ರ ಮೂಡಭಟ್ಕಳ ಬೈಪಾಸ್ ಬಳಿ ಅದಿರು ಲಾರಿ ಮತ್ತು ಕಾರ‍್ ನಡುವೆ ನಡೆದ ಅಫಘಾತದಲ್ಲಿ ಬ್ರಹ್ಮಾವರದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕಾರು ಭಾಗಶಃ ಜಖಂಗೊಂಡಿದ್ದು ಕಾರಿನಲ್ಲಿ ಪ್ರಯಣಿಸುತ್ತಿದ್ದ ೬ ಮಂದಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರದಂದು ಜರುಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಬ್ಹಹ್ಮಾವರದ ದಿನಕರನ್, ಪ್ರದೀಪ, ಬಾಗಲಕೋಟೆಯ ಕಾರು ಚಾಲಕ ಬಂದಗಿಸಾಬ್ ಮುಜಾವರ‍್, ವಾರಿಜಾ ಶೆಟ್ಟಿ ಈಕೆಯ ಪತಿ ಮುತ್ತಯ್ಯ ಶೆಟ್ಟ ಮಗಳು ರಮಿ ಶೆಟ್ಟಿ ಎಂದು ಗುರುತಿಲಾಗಿದೆ.
ಇವರು ಬ್ರಹ್ಮಾವರದಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಬಾಗಲಕೋಟೆಗೆ ತೆರಳುತ್ತಿದ್ದರು ಎನ್ನಲಾಗಿದ್ದು ಎದುರಿನಿಂದ ಬಂದ ಅದಿರು ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪ್ರಕಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.




