ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 5.6 ಲಕ್ಷ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ

5.6 ಲಕ್ಷ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ

Sat, 16 Nov 2024 09:17:19  Office Staff   Vb

ಮುಂಬೈ: ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ಈ ಸಮೃದ್ದ ದೇಶಗಳಿಗೆ ವಲಸೆ ಹೋಗಿದ್ದಾರೆ.

ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ದೇಶಗಳ ಹೊಸ ವಲಸೆಗಾರರಾಗಿ, ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳಾಗಿ, ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಈ ದೇಶಗಳು ಪ್ರಸ್ತುತ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದಾಗಿ ಈ ಮುಕ್ತ ಮಾರ್ಗ ಕಿರಿದಾಗುತ್ತಿದೆ.

2022ರಲ್ಲಿ 5.6 ಲಕ್ಷಮಂದಿ ಒಇಸಿಡಿ ದೇಶಗಳಿಗೆ ತೆರಳಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 35ರಷ್ಟು ಅಧಿಕ. ಒಇಸಿಡಿ ದೇಶಗಳ ವಲಸೆಗಾರರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಚೀನಾದಿಂದ 3.2 ಲಕ್ಷ ಮಂದಿ ವಲಸೆ ಬಂದಿದ್ದಾರೆ. ಒಇಸಿಡಿ ದೇಶಗಳ ಹೊಸ ವಲಸೆಗಾರರ ಪೈಕಿ ಭಾರತೀಯರ ಪಾಲು ಶೇಕಡ 6.4ರಷ್ಟಿದ್ದರೆ, ಚೀನಾ ಪಾಲು ಶೇಕಡ 3.8ರಷ್ಟು. 2.68 ಲಕ್ಷ ಮಂದಿಯೊಂದಿಗೆ ರಶ್ಯ ಮೂರನೇ ಸ್ಥಾನದಲ್ಲಿದೆ. ರಶ್ಯದಿಂದ ವಲಸೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದ್ದು, ಹಿಂದಿನ ವರ್ಷ ಒಟ್ಟು ವಲಸೆಗಾರರ ಪೈಕಿ ರಶ್ಯ 18ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ರೊಮೇನಿಯಾವನ್ನು ಹಿಂದಕ್ಕೆ ತಳ್ಳಿ ಮೂರನೇ ಸ್ಥಾನಕ್ಕೇರಿದೆ.

ಪ್ಯಾರೀಸ್‌ನಲ್ಲಿ ಗುರುವಾರ ಬಿಡುಗಡೆ ಮಾಡಲಾದ ಇಂಟರ್‌ನ್ಯಾಷನಲ್ ಮೈಗ್ರೇಷನ್ ಔಟ್ ಲುಕ್ -2024ನಲ್ಲಿ ಈ ಅಂಕಿ ಅಂಶಗಳ ವಿವರಗಳಿವೆ.


Share: