ಭಟ್ಕಳ:ಯಾವುದೆ ಕಾರ್ಯ ಮಾಡುವ ಮೊದಲು ಅದಕ್ಕೆ ನಾಮಕರಣ ಅಗತ್ಯವಾಗಿದ್ದು, ಆ ಕಾರ್ಯ ಇಂದು ಯಶಸ್ವಿಯಾಗಿದೆ. ಜಿಲ್ಲೆಯ ೧೩ನೇ ಬಂದರು(ಪೋರ್ಟ) ಆಗಿ ಇಂದು ಇದು ದೇಶದಲ್ಲೆ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸುಮಾರು ೨೦೦ಕೋಟಿ ರೂ ವೆಚ್ಚದಲ್ಲಿ ಸರ್ವಋತು ಬಂದರು ಇದನ್ನು ನಿರ್ಮಾಣ ಮಾಡುವದಾಗಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಶನಿವಾರ ತಾಲೂಕಿನ ಬೆಳಕೆಯ ಬಳಿ ಅರಬ್ಬಿ ಸಮುದ್ರದಲ್ಲಿ ೧೭.೩ಕೋಟಿ ರೂ ವೆಚ್ಚದಲ್ಲಿ ಕೃತಕ ಬಂಡೆಗಳ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದರು. ಮೂರು ತಿಂಗಳ ನಂತರ ಕೃತಕ ಬಂಡೆಗಳ ಪ್ರಯೋಜನ ಪ್ರತಿಬಿಂಬಿಸಲು ಪ್ರಾರಂಭಿಸುತ್ತದೆ, ಕೃತಕ ಬಂಡೆಗಳು ಸಣ್ಣ ಮತ್ತು ದೊಡ್ಡ ಸ್ಥಳೀಯ ಪ್ರಭೇದಗಳಿಗೆ ಬಂದರು ಆಗುತ್ತವೆ, ಕೃತಕ ಬಂಡೆಯು ಕಾರ್ಬನ್ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕರಾವಳಿ ಸ್ಥಳೀಯ ಮೀನುಗಾರರ ಜೀವನೋಪಾಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಸಮುದ್ರದಲ್ಲಿ ಮೀನುಗಳ ಉತ್ಪತ್ತೊಯನ್ನುವದು ಅದು ದೇವರ ಸೃಷ್ಟಿ, ಸಮುದ್ರಕ್ಕೆ ತೆರಳಿ ಯಾರು ಮರಿಗಳನ್ನು ಅಥವಾ ಮೊಟ್ಟೆಗಳನ್ನು ಹಾಕುವದಿಲ್ಲ.ಇಂತಹ ಕೃತಕ ಬಂಡೆಗಳಲ್ಲಿ ಮೀನು ತನ್ನ ಸಂತಾನೋತ್ಪತ್ತಿಯನ್ನು ಮಾಡಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಸರ್ವಋÄತು ಬಂದರು ಆಗಿ ಅಭಿವೃದ್ಧಿ ಪಡಿಸುತ್ತೇನೆ. ಇದರಿಂದ ಮೀನುಗಾರರು ಯಾವಗ ಬೇಕಾದರೂ ಮೀನಗಾರಿಕೆಗೆ ತೆರಳಬಹುದು. ಇಲ್ಲಿನ ಒಂದು ಬದಿಯಲ್ಲಿ ಗುಡ್ಡ ಇದ್ದು ಇನ್ನೊಂದು ಬದಿಯಲ್ಲಿ ಬ್ರೇಕ್ ವಾಟರ್ ಮೂಲಕ ತಡಗೋಡೆ ನಿರ್ಮಿಸಲಾಗುವದು. ಇಲ್ಲಿನ ಬಂದರಿನ ವಿಸ್ತೀರ್ಣವನ್ನು ಹೆಚ್ಚಿಸಿ ಸಮುದ್ರದ ವರೆಗೂ ಒಯ್ಯಲಾಗುವದು. ನೀರು ಮೇಲೆ ಬರದಂತೆ, ವಾಹನ ಒಡಾಟ ಅನುಕೂಲಕ್ಕೆ ತಡೆಗೋಡೆ ನಿರ್ಮಿಸಲಾಗುವದು. ಮುಂದಿನ ವರ್ಷದಲ್ಲಿ ಇದಕ್ಕೂ ಅಡಿಗಲ್ಲು ಸಮಾರಂಭ ನಡೆಸಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಬೆಳಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ ಎಲ್ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ರಾಜು ಎಲ್ ತಾಂಡೇಲ, ಮೀನುಗಾರಿಕೆ ಇಲಾಖೆಯ ಡಾ. ಎಲ್ ನರಸಿಂಹ ಮೂರ್ತಿ, ಡಾ. ಭೊ ಕಿಜಾಕುಡನ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.