ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ವಿಶೇಷ ಆದ್ಯತೆಯುಳ್ಳ ಮಕ್ಕಳೆಡೆಗೆ ಮಾನವೀಯ ಕಳಕಳಿ ಇರಲಿ: ಶಾಸಕ ಜೆ.ಡಿ.ನಾಯ್ಕ

ಭಟ್ಕಳ: ವಿಶೇಷ ಆದ್ಯತೆಯುಳ್ಳ ಮಕ್ಕಳೆಡೆಗೆ ಮಾನವೀಯ ಕಳಕಳಿ ಇರಲಿ: ಶಾಸಕ ಜೆ.ಡಿ.ನಾಯ್ಕ

Tue, 23 Feb 2010 18:48:00  Office Staff   S.O. News Service

ಭಟ್ಕಳ, ಫೆಬ್ರವರಿ ೨೩: ವಿಶೇಷ ಆದ್ಯತೆಯುಳ್ಳ ಮಕ್ಕಳು ನೈಸರ್ಗಿಕ ಸೃಷ್ಟಿಯಾಗಿದ್ದು, ಅವರಲ್ಲಿಯೂ ಅಗಾಧ ಪ್ರತಿಭೆ, ಜ್ಞಾನ ಸಂಗ್ರಹಗಳಿವೆ. ಇವರನ್ನು ನಿರ್ಲಕ್ಷಿಸದೇ ಪಾಲಕರು ಮಾನವೀಯ ಕಳಕಳಿಯನ್ನು ತೋರ್ಪಡಿಸುವುದರ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಾಗಿದೆ ಎಂದು ಶಾಸಕ ಜೆ.ಡಿ.ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

 

 

ಅವರು ಜಿಲ್ಲಾಪಂಚಾಯತ ಉತ್ತರಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಟ್ಕಳ ತಾಲೂಕಿನ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಯನ್ನು ವಿತರಿಸಿ ಮಾತನಾಡುತ್ತಿದ್ದರು. ಅಂಗವಿಕಲತೆ ಶಾಪವಲ್ಲ ಎಂದ ಅವರು ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬಡತನದಿಂದ ಮೇಲೆತ್ತುವ ಪ್ರಯತ್ನ ನಡೆಯಲಿ ಎಂದು ಹಾರೈಸಿದರು. ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮನ್ವಯ ಶಿಕ್ಷಣ ಅನುಷ್ಠಾನ ಸಮಿತಿಯ ಸದಸ್ಯ ಶ್ರೀಧರ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ನಾಯ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಎಲ್ಲರನ್ನೂ ಸ್ವಾಗತಿಸಿದರು. ಎಸ್.ಎಸ್.ಭಟ್. ವಂದಿಸಿದರು. ಬಿ‌ಆರ್‌ಸಿ ಸುರೇಶ ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.

 


Share: