ಭಟ್ಕಳ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಲ್ಲಿನ ಕರಿಕಲ್ ದ್ಯಾನ ಮಂದಿರಕ್ಕೆ ಆಗಮಿಸಿ ಚಾತುಮಾಸ್ಯ ವೃತ್ತದಲ್ಲಿರುವು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗನ್ನು ಬೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ಸ್ವಾಮೀಜಿಗಳು ಸಚಿವರಿಗೆ ಮಂತ್ರಾಕ್ಷತೆ ನೀಡಿ ಗೌರವಿಸಿದರು. ನಂತರ ಸಚಿವರ ಮಾಧ್ಯಮದೊಂದಿಗೆ ಮಾತನಾಡಿ ನಾನು ಈ ಹಿಂದೆಯೂ ಸಹ ಧರ್ಮಸ್ತಳಕ್ಕೆ ಹೋಗಿ ಚಾತುಮಾಸ್ಯದಲ್ಲಿರುವ ಸ್ವಾಮೀಜಿಯವರ ಅಶೀರ್ವಾದ ಪಡೆದು ಬಂದಿದ್ದೇನೆ.
ಈಗ ಸಚಿವನಾಗಿ ಸ್ವಮೀಜಿಗಳ ಆಶಿರ್ವಾದ ಪಡೆಯಲು ಬಂದಿದ್ದು ೪೧ ದಿನಗಳ ಕಾಲ ಭಟ್ಕಳದ ಕರಿಕಲ್ ದ್ಯಾನ ಮಂದಿರಲ್ಲಿಲದ ನಡೆಯುವ ಚಾತುಮಾಸ್ಯ ಕಾರ್ಯಕ್ರಮವನ್ನು ಸ್ವಾಮೀಜಿಗಳ ಭಕ್ತರು ಅಚ್ಚುಕಟ್ಟಾಗಿ ದೊಡ್ಡ ಮಟ್ಟದಲ್ಲಿ ನಡೆಸಿದ್ದಾರೆ.
ಎಲ್ಲ ಜಾತಿ ಮತದವರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ನಡೆಸುವ ಈ ಈ ಕಾರ್ಯಕ್ಕೆ ಎಲ್ಲ ಸದ್ಬಕ್ತರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಬೀಮಣ್ಯ ನಾಯ್ಕ, ವಿ.ಆರ್.ನಾಯ್ಕ ಸಿದ್ದಾಪುರ, ಶ್ರೀನಿವಾಸ ನಾಯ್ಕ, ಸಿರಸಿ, ಭಟ್ಕಳ ಬ್ಲಾಕ ಕಾಂಗ್ರೇಸ ಅಧ್ಯಕ್ಷ ವೆಂಕಟೇಶ ನಾಯ್ಕ, ಚಾತುಮಾಸ್ಯ ಸಮಿತಿಯ ಅಧ್ಯಕ್ಷರಾದ ಕೃಷ್ಣ ನಾಯ್ಕ, ಸಂಚಾಲಕರಾದ ಕೃಷ್ಣ ಪ್ರಥ್ವಿ,ವಿಠ್ಠಲ್ ನಾಯ್ಕ,ವಾಮನ ನಾಯ್ಕ ಹೊನ್ನಾವರ, ಮತ್ತಿತರರು ಉಪಸ್ಥಿತರಿದ್ದರು.