ಭಟ್ಕಳ, ನವೆಂಬರ್ 15: ಹೊಸನಗರ ಮಠಾಧೀಶ ರಾಘವೇಶ್ವರ ಸ್ವಾಮಿಗಳಿಗೆ ಕೇಳಲಾಗಿದೆ ಎನ್ನಲಾದ ಹತ್ತಕ್ಕೂ ಹೆಚ್ಚು ಪ್ರಶ್ನೆಗಳುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಮುರುಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಮಚಂದ್ರ ಭಟ್ ಮೂಳೆ ಸಾಕೀನ ಗೋಕರ್ಣ ಎಂದು ಗುರುತಿಸಲಾಗಿದೆ. ಈ ಸಂಬಂಧ ಕುಮಟಾ ತಾಲೂಕಿನ ಮಂಜುನಾಥ ಜಿ.ಭಟ್ ಎಂಬುವವರು ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ಆರೋಪಿಯ ವಿರುದ್ಧ ೫೦೪, ೫೦೬ರನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಡಿವಾಯ್‌ಎಸ್ಪಿ ವೇದಮೂರ್ತಿ ಮಾರ್ಗದರ್ಶನದ ಮೇರೆಗೆ ಎಸೈ ಸುಂದರೇಶ ಹೊಳ್ಳಣ್ಣನವರ್ ತನಿಖೆಯನ್ನು ಮುಂದುವರೆಸಿದ್ದಾರೆ.