ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಾಮಧಾರಿ ಸಮಾಜದಿಂದ ಮಹಿಳಾ ಭಜನಾ ತಂಡಕ್ಕೆ ಸನ್ಮಾನ

ನಾಮಧಾರಿ ಸಮಾಜದಿಂದ ಮಹಿಳಾ ಭಜನಾ ತಂಡಕ್ಕೆ ಸನ್ಮಾನ

Wed, 21 Feb 2024 05:43:25  Office Staff   SOnews


ಭಟ್ಕಳ: ನಗರದ ನಾಮಧಾರಿ ಗುರುಮಠ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸಾಂಸ್ಕçತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುಂಡಳ್ಳಿಯ  ಬ್ರಾಹ್ಮಿ ಮಹಿಳಾ ಭಜನಾ ಕುಣಿತ  ತಂಡವನ್ನು ಗೌರವಿಸಿ ಸನ್ಮಾನಿಸಲಾಯಿತು. 

ಶ್ರೀ ದೇವರ ಪಲ್ಲಕಿ ಉತ್ಸವದ ಮೆರವಣಿಗೆಯಲ್ಲಿ  ಸತತ  ೮ ಗಂಟೆಗೂ ಅಧಿಕ ಸಮಯ  ತಮ್ಮ ಭಜನಾ ತಂಡದಿAದ ಭಜನಾ ಕುಣಿತವನ್ನು ಪ್ರದರ್ಶಿಸಿ ಭಕ್ತರ ಪ್ರಶಂಸೆಗೆ  ಕಾರಣೀಕರ್ತರಾಗಿದ್ದರು. ನಾಮಧಾರಿ ಗುರುಮಠ ಆಡಳಿತ ಮಂಡಳೀಯ ಅಧ್ಯಕ್ಷ ಅರುಣ ನಾಯ್ಕ ರವರು ಶ್ರೀ ದುರ್ಗಾಪರಮೇಶ್ವರಿ ಮಹಿಳಾ  ಭಜನಾ ಕುಣಿತ ತಂಡದ ನಾಯಕಿ ಶ್ರೀಮತಿ  ಯಮುನಾ ದಿನೇಶ ನಾಯ್ಕ ಹಾಗೂ ಅವರ ತಂಡದ ಸದಸ್ಯರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗುರುಮಠದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ,ನಾಯ್ಕ, ಕಾರ್ಯದರ್ಶಿ  ಡಿ.ಎಲ್.ನಾಯ್ಕ, ಗೌರವಾಧ್ಯಕ್ಷ ಕೃಷ್ಣ ನಾಯ್ಕ , ಸದಸ್ಯರಾದ ಕೆ.ಆರ್. ನಾಯ್ಕ,ಪ್ರಕಾಶ ನಾಯ್ಕ,  ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ  ಶ್ರೀಧರ ನಾಯ್ಕ ಯುವಕ ಸಂಘದ ಅಧ್ಯಕ್ಷ  ವಸಂತ ನಾಯ್ಕ ಮತ್ತಿತರರು ಇದ್ದರು.


 


Share: