ಸಕಲೇಶಪುರ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಹೇಮಾವತಿ ಸೇತುವೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೇ ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್, ರಾಜ್ಯವನ್ನು ಗಣಿ ದೊರೆಗಳು ಲೂಟಿಮಾಡುತ್ತಿದ್ದಾರೆ ಮುಖ್ಯ ಮಂತ್ರಿ ಕಣ್ಣಿರು ಹಾಕುತ್ತಿದ್ದರೆ, ಗಣಿ ಮತ್ತು ಭೂ ಗರ್ಭ ಇಲಾಖೆಯ ಅದಿಕಾರಿಗಳು ಗಣಿ ದೊರೆಗಳ ಮನೆಯಲ್ಲಿ ಕೆಲಸಮಾಡುತ್ತಿದ್ದು ಇದೂಂದು ನರ ಸತ್ತ ಇಲಾಖೆ ಯಾಗಿದೆ ಎಂದರು.
ಇಲ್ಲಿಯ ವಿದ್ಯುತ್ ಸಮಸ್ಯೆ, ಆನೆ ಹಾವಳಿ,ಕಾಫಿ ಬೆಳೆಗಾರರ ಸಮಸ್ಯೆ, ಮಳಲಿ ಗ್ರಾಮದಲ್ಲಿ ಪುರಸಭೆ ತ್ಯಾಜ್ಯಾವಾರಿ ಮಾಡುತ್ತಿರುವುದರ ಬಗ್ಗೆ, ಪಡಿತರ ಚೀಟಿ ಸಮಸ್ಯೆ,ಸರಕಾರಿ ಆಸ್ಪತ್ರೆಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ ಅವರು ಪಶ್ಚಿಮ ಘಟ್ಟದಲ್ಲಿ ತಲೆ ಎತ್ತುತ್ತಿರುವ ಜಲವಿದ್ಯುತ್ ಘಟಕಗಳು, ಮರಳು ಮಾಫಿಯವನ್ನು ವಿರೋಧಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕಣಗಾಲ್ ಮೂರ್ತಿ,ಸಿದ್ದವಿರಪ್ಪ,ಪಾಪಣ್ಣ,ಬಾಬು,ಸಾದಿಕ್,ಕ್ಯಾನಳ್ಳಿ ರವಿ ಮುಂತಾದವರು ಇದ್ದರು.
ಸೌಜನ್ಯ: ಸುದ್ದಿಮನೆ