ಭಟ್ಕಳ: ಭಟ್ಕಳ ತಾಲೂಕಿನ ಕುಂಟವಾಣಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಚನ್ನವೀರಪ್ಪ ಹೊಸಮನಿ ಪ್ರೌಢಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ “ಶಿಕ್ಷಣ ರತ್ನ” ರಾಜ್ಯ ಪ್ರಶಸ್ತಿ ಬಾಜನರಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಸೂರ್ಯ ಪೌಂಡೇಶನ್ ಹಾಗೂ ಸ್ಪಾರ್ಕ ಅಕಾಡಮಿ ವತಿಯಿಂದ ಇಂಡೋಗ್ಲೋಬ್ ಗ್ರೂಪ್ ಆಫ್ ಇನ್ಸಟ್ಯೂಶನ್ಸ ಮತ್ತು ಶಿಕ್ಷಕರ ಪ್ರತಿಭಾ ಪರಿಷತ ಸಹಯೋಗದಲ್ಲಿ ಅ. ೧೫ ರಂದು ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇವರಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಸದಸ್ಯರು, ಮುಖ್ಯಾದ್ಯಾಪಕರು, ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿಗಳು ಅಬಿನಂದಿಸಿದ್ದಾರೆ.