ಬೆಂಗಳೂರು, ಅ.೧೧: ಈ ವರ್ಷದ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರಾಜ್ಯ ಹಜ್ ಯಾತ್ರೆಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಹಜ್ ಕ್ಯಾಂಪ್ ಎಂದೇ ಪ್ರಸಿದ್ದವಾಗಿರುವ ನಗರದ ಖುದ್ದೂಸ್ ಸಾಬ್ ಈದ್ಗ್ಹಾ ಮೈದಾನದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಬಾಷಾ ಅವರು ಮೊದಲ ಹಂತದ ತರಬೇತಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಲಾರ ಹಾಗೂ ತುಮಕೂರು ಜಿಲ್ಲೆಯ ಸುಮಾರು ಎರಡು ಸಾವಿರ ಹಜ್ ಯಾತ್ರಾರ್ಥಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ತರಬೇತಿ ಕಾರ್ಯಕ್ರಮದಲ್ಲಿ ಹಜ್ ಯಾತ್ರಿಕರ ತರಬೇತಿ ವೇದಿಕೆಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಮೇಲ್ವಿಚಾರಣೆಯಲ್ಲಿ ಆಧುನಿಕ ತಂತ್ರಜ್ಞಾನದ ಮುಖಾಂತರ ಹಜ್ ಕುರಿತ ಸಂಪೂರ್ಣ ವಿವರ ನೀಡಲಾಯಿತು. ಕೆ.ಎ.ಎಸ್. ಅಧಿಕಾರಿ ಸೈಯದ್ ಏಜಾಝ್ ಅಹ್ಮದ್, ಮೌಲಾನಾ ಲುತ್ಫುಲ್ಲಾ ರಶಾದಿ, ಮೌಲಾನಾ ಝೈನುಲ್ ಆಬೇದಿನ್ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ, ಈ ಬಾರಿ ರಾಜ್ಯದ ಯತ್ರಾರ್ಥಿಗಳಿಗೆ ಸಮಿತಿ ವತಿಯಿಂದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಯಾತ್ರಿಕರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಸಮಿತಿ ಬದ್ದವಾಗಿದೆ. ತಜ್ಞರ ಸಮಿತಿಗಳನ್ನು ರಚಿಸಲಾಗಿದ್ದು, ಹಿರಿಯರ, ಅನುಭವಿಗಳ ಮತ್ತು ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆಯಲಾಗುವುದು. ಮುಂದಿನ ದಿನಗಳಲ್ಲಿ ಗುಲ್ಬರ್ಗ, ಬಳ್ಳಾರಿ, ಮೈಸೂರು ಮತ್ತು ಮಂಗಳೂರಲ್ಲೂ ಸಹ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಹಜ್ ಸಮಿತಿ ಮೂಲಕ ಯಾತ್ರೆಗೆ ತೆರಳಲಿರುವ ಒಟ್ಟು ೬೧೦೦ ಯಾತ್ರಿಕರ ಪೈಕಿ, ನೂರು ಜನರ ಪ್ರಥಮ ತಂಡ ಬರುವ ನವೆಂಬರ್ ೭ ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೆಕ್ಕಾಗೆ ತೆರಳಲಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಲಿರುವ ೪೬೦೦ ಯಾತ್ರಿಕರನ್ನು ಹೊರತು ಪಡಿಸಿ, ಮಂಗಳೂರು ವಿಮಾನ ನಿಲ್ದಾಣದಿಂದ ೭೦೦ ಹಾಗೂ ಗುಲಬರ್ಗಾ ಮತ್ತು ಬೀದರ್ನ ೮೦೦ ಯಾತ್ರಿಕರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲಿದ್ದಾರೆ. ಬೆಂಗಳೂರಿನಿಂದ ತೆರಳುವ ೧೯ ವಿಮಾನಗಳಲ್ಲಿ ತಲಾ ೩೧೦ ಹಾಗೂ ಮಂಗಳೂರಿನಿಂದ ತೆರಳುವ ೬ ವಿಮಾನಗಳಲ್ಲಿ ತಲಾ 117 ಯಾತ್ರಿಕರು ಪ್ರಯಾಣಿಸಲಿದ್ದಾರೆ. ಇದೇ ಮೊದಲ ಬಾರಿ ಮಂಗಳೂರಿನಿಂದ ಯಾತ್ರಿಕರ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದ್ದು, ಅಕ್ಟೋಬರ್ ೨೫ ರಂದು ಪ್ರಥಮ ತಂಡ ಯಾತ್ರೆ ಕೈಗೊಳ್ಳಲಿದೆ.
ಹೆಚ್ಚುವರಿ ಕೋಟಾ ಸಿಗುವ ವಿಶ್ವಾಸ: ನಿಗದಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ನಾಲ್ಕು ಸಾವಿರ ಹೆಚ್ಚಿನ ಅರ್ಜಿಗಳು ಬಂದಿವೆ. ಇದರಲ್ಲಿ ಒಂದು ಸಾವಿರ ಅರ್ಜಿಗಳಿಗೆ ಮಾನ್ಯತೆ ಸಿಕ್ಕರೂ ಸಕಾಲದಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು.
ಈ ಸಂಬಂಧ ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಮುಮ್ತಾಜ್ ಅಲಿ ಖಾನ್, ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವರು ನಮ್ಮ ಬೇಡಿಕೆಗೆ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಹೆಚ್ಚುವರಿ ಕೋಟಾ ಸಿಗುವ ವಿಶ್ವಾಸವಿದೆ. ಆದರೂ ಅಂತಿಮ ಕ್ಷಣದವರೆಗೂ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ.
ಕೇಂದ್ರ ಸರಕಾರಕ್ಕೆ ಮನವಿ: ಅಂತರರಾಷ್ಟ್ರೀಯ ಪಾಸ್ಪೋರ್ಟ್ ಹೊಂದಿದವರಿಗೆ ಮಾತ್ರ ಅರ್ಜಿ ವಿತರಿಸುವಂತೆ ರಾಜ್ಯ ಹಜ್ ಸಮಿತಿಯು ಕೇಂದ್ರ ಸರಕಾರಕ್ಕೆ ಮನವಿ ಮಾಡಲಿದೆ. ಇದರಿಂದ ಮುಂದೆ ಯಾವುದೇ ರೀತಿಯ ಆಡಚಣೆ ಆಗುವುದಿಲ್ಲ. ಈ ಬಾರಿ ರಾಜ್ಯ ಸಮಿತಿಯ ವಿಶೇಷ ಕಾಳಜಿಯಿಂದ ಅನೇಕರಿಗೆ ಪಾಸ್ಪೋರ್ಟ್ ದೊರಕಿತ್ತು.
ಹಜ್ ಯಾತ್ರೆಯ ಸಮಸ್ತ ಸಿದ್ದತೆ, ತರಬೇತಿ ಮತ್ತು ಮಾರ್ಗದರ್ಶ ಕಾರ್ಯಗಳು ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ನಯಾಝ್ ಅಹ್ಮದ್ ನೇತೃತ್ವದಲ್ಲಿ ನಡೆಯಲಿವೆ.