ಭಟ್ಕಳ, ಮಾರ್ಚ್ ೪: ಭಟ್ಕಳ ಜಮಾತುಲ್ ಮುಸ್ಲಿಮೀನ್ ನ ಮಾಜಿ ಉಪಖಾಝಿ ಯಾಗಿದ್ದ ಮೌಲಾನ ಮುಹಮ್ಮದ್ ಇಖ್ಬಾಲ್ ಬರ್ಮಾವರ‍್ ನದ್ವಿ ಗುರುವಾರ ಸಂಜೆ ೫ ಗಂಟೆ ಸುಮಾರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ ಸುನ್ನಾ ಚಾರಿಟೆಬಲ್ ಟ್ರಸ್ಟ್ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಇವರು ಭಟ್ಕಳದ ಖ್ಯಾತ ವಿದ್ವಾಂಸ ಮೌಲಾನ ಮುಹಮ್ಮದ್ ಐಯ್ಯೋಬ್ ಬರ್ಮಾವರ‍್ ನದ್ವಿಯವರ ಸಹೋದರರಾಗಿದ್ದಾರೆ. ಶುಕ್ರವಾರದಂದು ಅವರ ಅಂತ್ಯಕ್ರಿಯೆ ನೆರವೇರಲಿದ್ದು ಜನಾಝ ನಮಾಝನ್ನು ಜಾಮಿಯ ಮಸೀದಿಯಲ್ಲಿ ಮಾಡಲಾಗುವುದು ಎಂದು ತಿಳಿದುಬಂದಿದೆ.