ಭಟ್ಕಳ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಅಕ್ಟೋಬರ್ 21ರಂದು ಮುಂಜಾನೆ 10 ಗಂಟೆಗೆ ಭಟ್ಕಳದ ಸಿಟಿ ಹಾಲ್, ಹೊಸ ಬಸ್ ನಿಲ್ದಾಣದ ಎದುರುಗಡೆ ಸ್ವಾಗತ ಹೋಟೆಲ್ ಪಕ್ಕದಲ್ಲಿ ಆಯೋಜಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯ ವೇಳೆ ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ ಮತ್ತು ಗುರುತಿನ ಪತ್ರಗಳನ್ನು ವಿತರಿಸಲಾಗುವುದು. ನವೆಂಬರ್ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ 'ಬೆಂಗಳೂರು ಚಲೋ' ಕಾರ್ಯಕ್ರಮದ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.