ಭಟ್ಕಳ, ಫೆಬ್ರವರಿ ೯, ಇಲ್ಲಿನ ಟಿಪ್ಪು ಸುಲ್ತಾನ್ ಯುತ್ ಅಸೋಸಿಯೇಶನ್ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಐಪಿಎಲ್ ಮಾದರಿಯ ೨೦:೨೦ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಂಘಟಕ ಟಿಪ್ಪು ಸುಲ್ತಾನ್ ವಾರಿಯರ್ ತಂಡ ಅಭೂತಪೂರ್ವ ಗೆಲುವನ್ನು ದಾಖಲಿಸಿತು. ನಗರದ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಮೈದಾನದಲ್ಲಿ ಭಾನುವಾರದಂದು ಜರುಗಿದ ಅಂತಿಮಾ ಪಂದ್ಯಾವಳಿಯ ಸೆಣಸಾಟದಲ್ಲಿ ಭಟ್ಕಳದ ಟಿಪ್ಪು ಸುಲ್ತಾನ್ ಹಾಗೂ ಭಟ್ಕಲ್ ಚಾಲೆಂಜರ್‍ಸ್ ನಡುವೆ ನಡೆದ ಬಿರುಸಿನ ಆಟದಲ್ಲಿ ಸುಲ್ತಾನ್ ವಾರಿಯರ್ ತಂಡವು ಚಾಲೆಂಜರ್‍ಸ್ ತಂಡವನ್ನು ೪ವಿಕೆಟ್ ಗಳ ಅಂತರದಿಂದ ಮಣಿಸುವುದರ ಮೂಲಕ ಟಿಪ್ಪು ಸುಲ್ತಾನ್ ಟ್ರೋಫಿ ಹಾಗೂ ನಗದು ರೂ ೨೦,೨೦೨ ನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಂಟಿಂಗನ್ನು ಆಯ್ಕೆ ಮಾಡಿಕೊಂಡಿದ್ದ ಚಾಲೆಂಜರ್‍ಸ್ ತಂಡವು ನಿಗದಿತ ೨೦ ಓವರ್ ಗಳಲ್ಲಿ ೮ ವಿಕೇಟ್ ನಷ್ಟಕ್ಕೆ ೧೫೮ರನ್ ಗಳ ಗುರಿಯನ್ನು ಮುಂದಿಟ್ಟಿತು. ನಂತರ ಬ್ಯಾಟಿಂಗ್ ಮಾಡಿದ ಸುಲ್ತಾನ್ ತಂಡವು ಭರ್ಜರಿಯಾಗಿ ಆಟವನ್ನು ಆರಂಭಿಸಿ ೧೭ ಓವರ್ ಗಳಲ್ಲಿ ಎಲ್ಲ ವಿಕೇಟ್ ಗಳನ್ನು ಪಡೆದು ನಿಗಧಿತ ಗುರಿಯನ್ನು ತಲುಪಿ ಗೆಲುವು ಸಾಧಿಸಿತು. ಸುಲ್ತಾನ್ ವಾರಿಯರ್ ತಂಡದ ಇಮ್ರಾನ್ ಲಂಕಾ ಮತ್ತು ನಸ್ರುಲ್ಲಾ ಅಸ್ಕರಿ ಜೋಡಿಯು ಭರ್ಜರಿ ಬ್ಯಾಟಿಂಗ್ ಮಾಡಿ ೧೩ ಬಾಲಿಂಗ್ ನಲ್ಲಿ ೪೦ ರನ್ ಗಳ ಸುರಿಮಳೆಗೈದು ಕ್ರಿಕೇಟ್ ಪ್ರೇಮಿಗಳ ಮನವನ್ನು ತಣಿಷಿದರು. ಈ ಪಂದ್ಯಾವಳಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿ ೧೮೦ ರನ್ ಗಳನ್ನು ಮಾಡಿದ ಆಪ್ಶನ್ ತಂಡದ ಇಮ್ರಾನ್ ಖತೀಬ್ ಉತ್ತಮ ಬ್ಯಾಟ್ಸ್ ಮನ್ ಮತ್ತು ಸುಲ್ತಾನ್ ವಾರಿಯರ್‍ಸ್ ನ ಷಹಾಬುದ್ದೀನ್ ರಿಗೆ ಉತ್ತಮ ಬೌಲರ್(ಎಸೆತಗಾರ) ಭಟ್ಕಲ್ ಚಾಲೆಂಜರ್‍ಸ್ ನ ಅಬ್ದುಲ್ ಗಫೂರ್ ಬೆಸ್ಟ್ ಫೀಲ್ಡರ್, ಮತ್ತು ಹಸ್ಸಾನ್ ರಮಝಾನ್ ರಿಗೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ, ಉತ್ತಮ ಬೌಲಿಂಗ್ ಮಾಡಿದ ಸುಲ್ತಾನ್ ವಾರಿಯರ್‍ಸ್ ನ ಷಹಾಬುದ್ದೀನ್ ರಿಗೆ ಪಂದ್ಯಾ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

