ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕೊಪ್ಪಳ: ಗ್ರಾ.ಪಂ. ಚುನಾವಣೆ : ೬೭೫೩೫೩ ಮತದಾರರು, ೮೭೪ ಮತಗಟ್ಟೆಗಳು

ಕೊಪ್ಪಳ: ಗ್ರಾ.ಪಂ. ಚುನಾವಣೆ : ೬೭೫೩೫೩ ಮತದಾರರು, ೮೭೪ ಮತಗಟ್ಟೆಗಳು

Wed, 21 Apr 2010 03:13:00  Office Staff   S.O. News Service

ಕೊಪ್ಪಳ ಏ. ೨೦ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ೧೩೦ ಗ್ರಾಮ ಪಂಚಾಯತಿಗಳಲ್ಲಿ ೨೫೧೭ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿದ್ದು, ೬೭೫೩೫೩ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ ಒಟ್ಟು ೮೭೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.

 

ಗ್ರಾಮ ಪಂಚಾಯತ್ ಚುನಾವಣೆಗಾಗಿ ಏ. ೧೯ ರಿಂದ ನಾಮಪತ್ರಗಳನ್ನು ಸ್ವೀಕರಿಸುವ ಕಾರ್ಯ ಆರಂಭವಾಗಿದೆ. ಮತದಾರರು : ಜಿಲ್ಲೆಯ ಒಟ್ಟು ೧೩೦ ಗ್ರಾಮ ಪಂಚಾಯತಿಗಳಲ್ಲಿ ೨೫೧೭ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ೩೩೮೦೪೩ ಪುರುಷ ಮತದಾರರು ಹಾಗೂ ೩೩೭೩೧೦ ಮಹಿಳಾ ಮತದಾರರು ಸೇರಿದಂತೆ ಒಟ್ಟು ೬೭೫೩೫೩ ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ಪುರುಷ ಮತದಾರರು ೮೮೮೭೬ ಹಾಗೂ ಮಹಿಳಾ ಮತದಾರರು- ೮೯೫೬೦ ಸೇರಿದಂತೆ ಒಟ್ಟು ೧೭೮೪೩೬ ಮತದಾರರಿದ್ದಾರೆ. ಅದೇ ರೀತಿ ಗಂಗಾವತಿಯಲ್ಲಿ ಪುರುಷ- ೯೯೮೫೩, ಮಹಿಳೆ- ೧೦೨೦೧೨, ಒಟ್ಟು ೨೦೧೮೬೫ ಮತದಾರರಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ಪುರುಷ- ೭೩೬೪೬, ಮಹಿಳೆ- ೭೩೯೩೪, ಒಟ್ಟು- ೧೪೫೨೨೦ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ ಪುರುಷ- ೭೫೬೩೮, ಮಹಿಳೆ- ೭೩೯೩೪, ಒಟ್ಟು ೧೪೯೫೭೨ ಮತದಾರರು ಮತ ಚಲಾಯಿಸಲಿದ್ದಾರೆ.

 

ಮತಗಟ್ಟೆಗಳು : ಗ್ರಾಮ ಪಂಚಾಯತಿ ಚುನಾವಣೆ ಸಂಬಂಧ ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು ಜಿಲ್ಲೆಯಲ್ಲಿ ೭೯೦ ಮತಗಟ್ಟೆಗಳು ಹಾಗೂ ೮೪ ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು ೮೭೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆ ಪೈಕಿ ೩೦೮ ಮತಗಟ್ಟೆಗಳನ್ನು ಸೂಕ್ಷ್ಮ, ೪೦೨ ಮತಗಟ್ಟೆಗಳನ್ನು ಅತಿಸೂಕ್ಷ್ಮ ಹಾಗೂ ೧೬೪ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕೊಪ್ಪಳ ತಾಲೂಕಿನಲ್ಲಿ ೨೨೦ ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- ೫೨, ಅತಿಸೂಕ್ಷ್ಮ- ೧೨೫ ಹಾಗೂ ಸಾಮಾನ್ಯ- ೪೩ ಮತಗಟ್ಟೆಗಳಿವೆ. ಗಂಗಾವತಿ ತಾಲೂಕಿನಲ್ಲಿ ೨೫೯ ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- ೯೪, ಅತಿಸೂಕ್ಷ್ಮ- ೧೩೩ ಹಾಗೂ ಸಾಮಾನ್ಯ- ೩೨ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ೧೯೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ ಸೂಕ್ಷ್ಮ- ೬೮, ಅತಿ ಸೂಕ್ಷ್ಮ- ೯೧, ಸಾಮಾನ್ಯ- ೩೭ ಮತ್ತು ಕುಷ್ಟಗಿ ತಾಲೂಕಿನ ಒಟ್ಟು ೧೯೯ ಮತಗಟ್ಟೆಗಳ ಪೈಕಿ ಸೂಕ್ಷ್ಮ- ೯೪, ಅತಿ ಸೂಕ್ಷ್ಮ- ೫೩ ಹಾಗೂ ಸಾಮಾನ್ಯ- ೫೨ ಮತಗಟ್ಟೆಗಳೆಂದು ಗುರುತಿಸಲಾಗಿದೆ.

 

ಚುನಾವಣಾ ಸಿಬ್ಬಂದಿ : ಜಿಲ್ಲೆಯಲ್ಲಿ ಒಟ್ಟು ೮೭೪ ಮತಗಟ್ಟೆಗಳಿರುವುದರಿಂದ ಪ್ರತಿ ಮತಗಟ್ಟೆಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಒಬ್ಬರು ಗ್ರೂಪ್ ’ಡಿ’ ದರ್ಜೆಯ ನೌಕರರು ಸೇರಿ ಒಟ್ಟು ೭೩೭೦ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಕೊಪ್ಪಳ ತಾಲೂಕಿನಲ್ಲಿ ೨೨೦ ಮಟಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗಳಿಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಗ್ರೂಪ್ ’ಡಿ’ ದರ್ಜೆಯ ನೌಕರರು ಸೇರಿ ಒಟ್ಟು ೧೧೦೦ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಗಂಗಾವತಿ ತಾಲೂಕಿನಲ್ಲಿ ೨೫೯ ಮತಗಟ್ಟೆಗಳಿದ್ದು, ೧೨೯೫ ಸಿಬ್ಬಂದಿಗಳು, ಯಲಬುರ್ಗಾ ತಾಲೂಕಿನಲ್ಲಿ ೧೯೬ ಮತಗಟ್ಟೆಗಳಿದ್ದು ೯೮೦ ಸಿಬ್ಬಂದಿಗಳು ಹಾಗೂ ಕುಷ್ಟಗಿ ತಾಲೂಕಿನಲ್ಲಿ ೧೯೯ ಮಟಗಟ್ಟೆಗಳಿದ್ದು ಒಟ್ಟು ೯೯೫ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.

 


Share: