ಸಕಲೇಶಪುರ, ಡಿಸೆಂಬರ್ 29: ವಿದ್ಯುತ್ ದುರಸ್ಥಿ ಮಾಡುವಂತೆ ದೂರವಾಣಿಯಲ್ಲಿ ಮನವಿ ಮಾಡಿದ ಜನರೂಂದಿಗೆ ಸ್ಥಳಿಯ ಚೆಸ್ಕಾಂ ಇಲಾಖೆ ಅದಿಕಾರಿಗಳು ಉಡಾಫೆಯಿಂದ ವರ್ತಿಸಿ ಅಶ್ಲೀಲ ಪದಗಳಿಂದ ಬೈದ ಘಟನೆ ಪಟ್ಟಣದ ಕುಶಾಲನಗರ ಬಡಾವಣೆಯ ನಾಗರೀಕರು ದೂರಿದ್ದಾರೆ.
ಚೆಸ್ಕಾಂ ಇಲಾಖೆಯ ಅದಿಕಾರಿಗಳ ನಿರ್ಲಕ್ಷದಿಂದಾಗಿ ಪಟ್ಟಣದ ಕುಶಾಲನಗರ ಬಡವಾಣೆಯ ಜನರು ಸೊಮವಾರ ರಾತ್ರಿ ಕತ್ತಲಲ್ಲಿ ಕಳೆಯುವಂತಾಗಿತ್ತು ಅಲ್ಲದೆ, ಪದೇ-ಪದೇ ಈ ಬಡವಾಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಈ ಸಂಬಂಧ ಸೋಮವಾರ ರಾತ್ರಿ ದೂರಾವಣಿಯಲ್ಲಿ ವಿದ್ಯುತ್ ದುರಸ್ಥಿಗೆ ಮನವಿ ಮಾಡಿದ ನಾಗರೀಕರೂಂದಿಗೆ ಮಾತನಾಡಿದ ಪದ್ಮನಾಭ ಎಂಬ ಚೆಸ್ಕಾಂ ಅಧಿಕಾರಿ ಅತಿ ಕಳಪೆ ಮಟ್ಟದ ಮಾತುಗಳನ್ನು ಈ ಸಂದರ್ಭದಲ್ಲಿ ಬಳಸಿದ್ದಾರೆಂದು ನಾಗರೀಕರು ದೂರಿದ್ದಾರೆ.
ಹೀಗೆ ಅನಾಗರೀಕವಾಗಿ ವರ್ತಿಸಿರುವ ಪದ್ಮನಾಭ ಎಂಬವವರ ಮೇಲೆ ಕ್ರಮ ಕೈಗೂಳ್ಳ ಬೇಕು ಎಂದು ಹಿರಿಯ ಅದಿಕಾರಿಗಳನ್ನು ಒತ್ತಾಯಿಸಿರುವ ನಾಗರೀಕರು ಇಲಾಖೆಯ ಅದಿಕಾರಿಗಳು ಕ್ರಮ ಕೈಗೂಳ್ಳದಿದ್ದರೆ ಕುಶಾಲನಗರ ಬಡಾವಣೆಯ ಜನರೆ ಈ ಅಧಿಕಾರಿಗೆ ಬುದ್ದಿ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.