ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ

ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ

Sat, 26 Sep 2009 02:48:00  Office Staff   S.O. News Service
ಕುವೈಟ್, ಸೆಪ್ಟೆಂಬರ್ 26:  ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ 2009 ರ ಪ್ರಥಮ ಆರು ತಿಂಗಳಲ್ಲಿ 17,000 ದಷ್ಟು ಜನರು ಕೆಲಸ ಕಳೆದುಕೊಂಡು ಸ್ವದೇಶಗಳಿಗೆ ಹಿಂದಿರುಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಅವರಲ್ಲಿ ಶೇಖಡಾ ಎಪ್ಪತ್ತಕ್ಕೂ ಹೆಚ್ಚು ಜನರು ಏಶ್ಯನ್ನರಾಗಿದ್ದಾರೆ ಎಂದು ಕುವೈಟ್ ಮಿನಿಸ್ಟ್ರಿ ಆಫ್ ಸೋಶ್ಯಲ್ ಅಫೇರ್ಸ್ ಅಂಡ್ ಲೇಬರ್ ಸಚಿವಾಲಯದ ಅಧಿಕಾರಿ ಅಲ್ ಸೇಯಸ್ಸಾರವರು ತಿಳಿಸಿದ್ದಾರೆ.  
ಆದರೆ ನಿಜವಾಗಿ ಕೆಲಸ ಕಳೆದುಕೊಂಡವರ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚಾಗಿರಬಹುದು, ಏಕೆಂದರೆ ಕೆಲಸ ಕಳೆದುಕೊಂಡರೂ ಇನ್ನೂ ಕುವೈಟಿನಲ್ಲಿಯೇ ವಾಸ್ತವ್ಯ ಹೂಡಿ ಬೇರೆ ಉದ್ಯೋಗಗಳನ್ನು ಹುಡುಕುತ್ತಿರುವವರ ಸಂಖ್ಯೆಯೂ ಬಹಳ ದೊಡ್ಡದಿದೆ, ಈ ಹದಿನೇಳು ಸಾವಿರ ಜನ ಈಗಾಗಲೇ ತಮ್ಮ ಸ್ವದೇಶಗಳಿಗೆ ಹಿಂದಿರುಗಿದ್ದಾರೆ ಎಂದು ಅವರು ತಿಳಿಸಿದರು. 

ಆದರೆ ಕುವೈಟ್ ಕಾನೂನು ಪ್ರಕಾರ ಉದ್ಯೋಗವಿಲ್ಲದೆ ವಾಸ್ತವ್ಯ ವೀಸಾ ಸಿಗುವುದು ಅಸಂಭವವಾಗಿದ್ದು ಇಂತಹವರ ವಾಸ್ತವ್ಯ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಬೇರೆ ಕೆಲಸ್ ಹುಡುಕಲು ಅವರ ಪೂರ್ವ ಪ್ರಾಯೋಜಕರು ಹಿಂದಿನ ವೀಸಾ ಅವಧಿಯನ್ನು ವಿಸ್ತರಿಸಿ ನೀಡಿದ್ದರೆ ಮಾತ್ರ ಈ ವಾಸ್ತವ್ಯ ಕಾನೂನುಬದ್ಧವಾಗಿರುತ್ತದೆ.  ಆದರೆ ಬಹುತೇಕ ಸಂದರ್ಭಗಳಲ್ಲಿ ಪ್ರಾಯೋಜಕರು ತಮ್ಮ ಉದ್ಯೋಗಿ ಅವಧಿಯನ್ನು ಮುಗಿಸುವ ಮುನ್ನವೇ ವೀಸಾ ರದ್ದುಗೊಳಿಸಿ ಉದ್ಯೋಗಿಗೆ ನ್ಯಾಯವಾಗಿ ನೀಡಬೇಕಾದ ಅಂತಿಮ ಭತ್ಯೆಗಳನ್ನು ಹಿಡಿದಿಟ್ಟುಕೊಳ್ಳುವುದು ವಾಸ್ತವ ಸಂಗತಿಯಾಗಿದೆ.

ಪ್ರಸ್ತುತ ಕುವೈಟಿನಲ್ಲಿ ಶೇಖಡಾ ೬೯ ರಷ್ಟು ನಾಗರಿಕರು ಅನಿವಾಸಿಗಳಾಗಿದ್ದಾರೆ. ಆರ್ಥಿಕ ಕುಸಿತ ಅನಿವಾಸಿಗಳಲ್ಲಿ ಅದರಲ್ಲೂ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳ ಕಾರ್ಮಿಕರನ್ನು ಆತಂಕದಿಂದ ದಿನಕಳೆಯುವಂತೆ ಮಾಡಿದೆ.

Share: