ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕ.ರಾಜ್ಯ ಅನುದಾನರಹಿತ ಪಾಲಿಟೆಕ್ನಿಕ್ ಒಕ್ಕೂಟದಿಂದ 1.5ಲಕ್ಷ ರೂ. ದೇಣಿಗೆ

ಭಟ್ಕಳ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕ.ರಾಜ್ಯ ಅನುದಾನರಹಿತ ಪಾಲಿಟೆಕ್ನಿಕ್ ಒಕ್ಕೂಟದಿಂದ 1.5ಲಕ್ಷ ರೂ. ದೇಣಿಗೆ

Tue, 27 Oct 2009 18:10:00  Office Staff   S.O. News Service
ಭಟ್ಕಳ, ಅ. 27: ಕರ್ನಾಟಕ ರಾಜ್ಯ ಅನುದಾನ ರಹಿತ ಪಾಲಿಟೆಕ್ನಿಕ್‌ಗಳ ಒಕ್ಕೂಟದಿಂದ ಮುಖ್ಯ ಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1.5 ಲಕ್ಷ ರೂಪಾಯಿಯ ನಿಧಿಯನ್ನು ಅರ್ಪಿಸಲಾಯಿತು.
 
ಬೆಂಗಳೂರಿನ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾದ ಕರ್ನಾಟಕ ರಾಜ್ಯ ಅನುದಾನ ರಹಿತ ಪಾಲಿಟೆಕ್ನಿಕ್‌ಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಗದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮರಿಸ್ವಾಮಿ, ಸಹ ಕಾರ್ಯದರ್ಶಿ ಎಸ್.ಜೆ.ಗೌಡರ್ ಹಾಗೂ ಸದಸ್ಯರಾದ ಪ್ರಕಾಶ್ ಮುಂತಾದವರ ಸಮ್ಮುಖದಲ್ಲಿ ನೀಡಲಾಯಿತು.
 
ಕರ್ನಾಟಕ ರಾಜ್ಯ ಅನುದಾನ ರಹಿತ ಪಾಲಿಟೆಕ್ನಿಕ್‌ಗಳ ಸಿಬ್ಬಂದಿಯ ಒಂದು ದಿನದ ವೇತನವನ್ನು ನೆರೆ ಸಂತ್ರಪ್ತರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಜಗದೀಶ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ



Share: