ಭಟ್ಕಳ:5, ಭಾಷೆಯೆಂಬುದು ಮನುಷ್ಯನ ಮನಸ್ಸುಗಳನ್ನು ಬೆಸೆಯುತ್ತದೆ, ಅದು ಸಂವಹನದ ಒಂದು ಸಾಧನೆವೆ ಹೊರತು ಪರಸ್ಪರ ಬಡಿದಾಡುವ ಅಸ್ತ್ರವಲ್ಲ ಎಂದು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಎಮ್. ಸೈಯ್ಯದ್ ಖಲೀಲುರ್ರಹ್ಮಾನ್ ಹೇಳಿದರು

ಅವರು ಇಂದು ಅಂಜುಮನ್ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಖ್ಯಾತ ವಿಮರ್ಶಕ, ಸಾಹಿತಿ ಹಾಗೂ ಅಂಜುಮನ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸೈಯ್ಯದ್ ಝಮೀರುಲ್ಲಾ ಷರೀಫರಿಗೆ ಅಭಿನಂದನಾ ಗ್ರಂಥ ಸಮರ್ಪಣೆಯ ಭಾವಾಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಭಾಷೆಯ ಆಧಾರದ ಮೇಲಿನ ವರ್ಗೀಕರಣ ಸಲ್ಲದು ಎಂದ ಅವರು ನಾವೆಲ್ಲರೂ ಕನ್ನಡಿಗರು ಕನ್ನಡ ಭಾಷೆಯಿಂದಾಗಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಕಾರ್ಯವಾಗಬೇಕು ಎಂದರು.
ಡಾ. ಶರೀಫರ ಕಾವ್ಯಾ ಕುರಿತಂತೆ ಹಿರಿಯ ಸಾಹಿತಿ ಡಾ.ಬಿ.ಎ. ಸನದಿ ಮಾತನಾಡಿ ಷರೀಫರ ಕಾವ್ಯಾವು ವೈಶಿಷ್ಟ್ಯತೆಯಿಂದ ಕುಡಿದ್ದು ಅಲ್ಪಸಂಖ್ಯಾತ ಸಮುದಾಯದ ಭಾವನೆಗಳನ್ನು ಪ್ರತಿಬಿಂಬಿಸುತ್ತಿದ್ದೆ ಎಂದರು. ಕವಿಗಳಿಗೆ ಮನುಷ್ಯರ ಮನಸ್ಸುಗಳನ್ನು ಸ್ವಚ್ಚಗೊಳಿಸುವ ಶಕ್ತಿಯಿದೆ ಎಂದರು.
ಇನ್ನೋರ್ವ ಅತಿಥಿ ಸಾಹಿತಿ ವಿಷ್ಣು ನಾಯ್ಕ್ ಮಾತನಾಡಿ ಭಾರತೀಯ ಮುಸ್ಲಿಮ್ ಲೇಖಕರು ಇಂದು ಬಹಳ ಬಿಕ್ಕಟ್ಟಿನಲ್ಲಿದ್ದು ಅವರು ವರು ಇಲ್ಲಿನ ಮುಸ್ಲಿಮೇತರರನ್ನು ಹಾಗೂ ಮುಸ್ಲಿಮರನ್ನೂ ಎದುರಿಸಿ ಏನು ಬರೆಯಬಕು? ಎಂಬ ಗೊಂದಲದಲ್ಲಿದ್ದಾರೆ ಅಂತಹ ಗೊಂದಲಗಳ ನಡುವೆ ಶರೀಫರು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬರಹಗಳಿಗೆ ಅದ್ಭುತವಾದ ಸೃಜನಾಶೀಲ ಶಕ್ತಿಯಿದೆ, ಅರೊಬ್ಬ ಅಪ್ಪಟ ವೈಚಾರಿಕ ವಿಚಾರದ ಹಿನ್ನೆಲೆಯುಳ್ಳ ಬರಹಗಾರ ಎಂದು ಅವರ ಸಾಹಿತ್ಯವಾಲೋಕನವನ್ನು ಮಾಡಿದರು.


ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೂ ಅಬ್ದುಲ್ ರಹೀಮ್ ಮಾತನಾಡಿ ಒಬ್ಬ ಅಲ್ಪಸಂಖ್ಯಾತ ಸಮುದಾಯದ ಸಾಹಿತಿಯ ಅಭಿನಂಧನಾ ಗ್ರಂಥ ಸಮರ್ಪಣಾ ಸಮಾರಂಭಕ್ಕೆ ಬಹುಸಂಖ್ಯಾತ ವರ್ಗದ ಒಂದು ಸಂಖ್ಯೆಯೆ ಇಲ್ಲಿ ನೆರೆದಿರುವುದು ಕಂಡರೆ ಶರೀಫರ ಸಾಹಿತ್ಯ ಸೇವೆಯ ಅರಿವು ನನಗಾಗುತ್ತದೆ ಎಂದ ಅವರು ಸಂಪೂರ್ಣವಾಗಿ ಕನ್ನಡದಲ್ಲಿಯೆ ಮಾತನಾಡಿ ಸಭಿಕರನ್ನು ಆಶ್ಚರ್ಯಚಕಿತರನ್ನಾಗಿಸಿದರು. ಸಮಾರಂಭವನ್ನು ಶಾಸಕ ಜೆ.ಡಿ.ನಾಯ್ಕ ಉದ್ಘಾಟಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದರು.
ಈಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೋಹಿದಾಸ ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಾಮೋದರ್ ಗರ್ಡಿಕರ್ ಈ ಸಂದರ್ಭದಲ್ಲಿ ಮಾತನಾಡಿದರು. ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್. ಸೈಯದ್ ಅಬ್ದುಲ್ ಅಝೀಮ್ ಅಂಬಾರಿ ತಾ.ಪಂ. ಮಾಜಿ ಆಧ್ಯಕ್ಷ ಪರಮೇಶ್ವರ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಗ್ರಂಥ ಸಮರ್ಪಣ ಸಮತಿಯ ಅಧ್ಯಕ್ಷ ಡಾ. ಆರ್.ವಿ. ಸರಾಫ್ ಪ್ರಸ್ಥಾವಿಕವಾಗಿ ಮಾತನಾಡಿದರು. ಸಂಪಾದಕ ಮಂಡಳಿಯ ಪಿ.ಆರ್. ನಾಯ್ಕ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.