ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಮನೆಯಲ್ಲಿ ಕಳುವು - 95 ಸಾವಿರ ನಗದು ಹಾಗೂ ಅಪಾರ ವಸ್ತುಗಳನ್ನು ದೋಚಿ ಪರಾರಿ

ಭಟ್ಕಳ:ಮನೆಯಲ್ಲಿ ಕಳುವು - 95 ಸಾವಿರ ನಗದು ಹಾಗೂ ಅಪಾರ ವಸ್ತುಗಳನ್ನು ದೋಚಿ ಪರಾರಿ

Thu, 25 Feb 2010 20:24:00  Office Staff   S.O. News Service

ಭಟ್ಕಳ:ಇಲ್ಲಿನ ಹಳೆ ಬಸ್ ನಿಲ್ಧಾಣದ ಬಳಿ ಮುಖ್ಯ ರಸ್ತೆಯಲ್ಲಿರುವ ಎಸ್.ಪಿ. ಅಸ್ಲಮ್ ಎಂಬುವವರ ಮನೆಯಲ್ಲಿ ಕಳ್ಳತನವಾದ ಬಗ್ಗೆ ನಗರ ಠಾಣೆಯಲ್ಲಿ ದೂರೊಂದು ದಾಖಲಾಗಿದ್ದು ಕಳುವು ಪ್ರಕರಣವು  ಫೆ ೮ ಜರುಗಿ ತೆಂದು  ಹೇಳಲಾಗಿದೆ. ಆದರೆ ಪೋಲಿಸರು ಗುರುವಾರಂದು ಬಂದು ಕಳ್ಳತನದ ಬಗ್ಗೆ ವಿವರವನ್ನು  ಪಡೆದುಕೊಂಡಿರುವ ತಿಳಿದುಬಂದಿದೆ. 

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಉಪಯೋಗಿಸಿಕೊಂಡ ಕಳ್ಳರ ತಂಡವು ಮನೆಯಿಂದ ಮನೆಯ ಬಾಗಿಲನ್ನು ಮುರಿದು ಒಳಹೊಕ್ಕು  ಸುಮಾರು ೯೫ ಸಾವಿರ ನಗದು ಹಾಗೂ ಎಲೆಕ್ಟ್ರಾನಿಕ್   ವಸ್ತುಗಳನ್ನು  ದೋಚಿಕೊಂಡು ಪರಾರಿಯಾಗಿದ್ದಾರೆ. ಫರಾನ್ ಪಟೇಲ್ ಎಂಬುವವರು ನೀಡಿದ ದೂರಿನ ಮೆರೆಗೆ ಸಿ.ಪಿ.ಐ ಗುರು ಮತ್ತೂರು, ನಗರ ಠಾಣೆಯ ಪಿ.ಎಸ್.ಐ ಮಂಜುನಾಥ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.


Share: