ದುಬೈ, ಸೆಪ್ಟೆಂಬರ್ 29: ಬರುವ ಅಕ್ಟೋಬರ್ 2 ಶುಕ್ರವಾರದಂದು ನಗರದ ಜೆ.ಎಸ್.ಎಸ್. ಇಂಟರ್ ನ್ಯಾಶನಲ್ ಸ್ಕೂಲ್, ಅಲ್ ಬರ್ಶಾದಲ್ಲಿ ಸಂಗೀತ ಪ್ರದರ್ಶನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

ಕನ್ನಡಪರ ಚಟುವಟಿಕೆಗಳಲ್ಲಿ ಕಾರ್ಯನಿರತವಾಗಿರುವ ಕನ್ನಡ ಕೂಟ ಯು.ಎ.ಇ. ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿದೆ.
ಸಂಜೆ ಆರು ಘಂಟೆಯಿಂದ ಸುಮಾರು ಹತ್ತು ಘಂಟೆಯವರೆಗೆ ನಡೆಯಲಿದ್ದು ಯು.ಎ.ಇ.ಯಲ್ಲಿ ರುವ ಕನ್ನಡಿಗರ ಮಕ್ಕಳು ಚಿತ್ರಗೀತೆ, ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳನ್ನು ಹಾಡುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.
ಸಭಾಂಗಣಕ್ಕೆ ಪ್ರವೇಶ ಶುಲ್ಕ ಇಪ್ಪತ್ತು ದಿರ್ಹಾಂಗಳನ್ನು ನಿಗದಿಪಡಿಸಲಾಗಿದ್ದು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.