ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರ ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ.

ಹೊನ್ನಾವರ ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ.

Thu, 04 Jul 2024 05:15:19  Office Staff   S O News
ಹೊನ್ನಾವರ : ಪಟ್ಟಣ ಪಂಚಾಯತ್ ನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ ಮತ್ತು ಕೌನ್ಸಿಲರ್ ನನ್ನ ಲೋಕಾಯುಕ್ತರು ಬಂಧಿಸಿದ್ದಾರೆ. ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪ.ಪಂ.ಸದಸ್ಯ ವಿಜಯ ಕಾಮತ ಬಂಧಿತರು. ಇವರಿಬ್ಬರು  l ಇ ಸ್ವತ್ತು ಮಾಡಿಕೊಡಲು ಎರಡೂವರೆ ಲಕ್ಷ ರೂ.  ಬೇಡಿಕೆ ಇಟ್ಟಿದ್ದರು. ಇಂದು 60  ಸಾವಿರ ರೂಪಾಯಿ  ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.  ಹೊನ್ನಾವರ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಲೋಕಾಯುಕ್ತರು ಬಂಧಿಸಿದ್ದಾರೆ. ಚಂದ್ರಹಾಸ ಎಂಬುವವರು ದೂರು ನೀಡಿದ್ದಾರೆ.

Share: