ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರದಲ್ಲಿ ಆಂಧ್ರ ವ್ಯಕ್ತಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ

ಹೊನ್ನಾವರದಲ್ಲಿ ಆಂಧ್ರ ವ್ಯಕ್ತಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ

Tue, 03 Sep 2024 13:37:04  Office Staff   SO News

ಹೊನ್ನಾವರ :  ತಾಲೂಕಿನ ಗೇರುಸೊಪ್ಪ  ಬಳಿ ವ್ಯಕ್ತಿಯೊರ್ವನನ್ನ ಕೊಲೆಗೈದು ಮೃತದೇಹ ಬಿಸಾಡಿ ಪರಾರಿಯಾದ ಘಟನೆ  ನಡೆದಿದೆ.

ಆಂಧ್ರಪ್ರದೇಶ ಮೂಲದ ಭೋಜನಪು ಶಾಂಭಸಿವ (39) ಕೊಲೆಯಾದ ವ್ಯಕ್ತಿ. ಅಣ್ಣಮಯ್ಯ  ಜಿಲ್ಲೆಯ ಕಳಕಡ ಮಂಡಲದ ತಿಪ್ಪಿಗರಿಪಲ್ಲಿ ಗ್ರಾಮದವನಾಗಿದ್ದ. ಆಗಸ್ಟ್ 24 ರಂದು  ಶಾಂಭಸಿವ ಮನೆಯಿಂದ ಕಾಣೆಯಾದ  ಬಗ್ಗೆ ಕಳಕಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟ್ಯಾಕ್ಸಿ ಚಾಲಕನಾಗಿದ್ದ ಈತನಿಗೆ ಬಾಡಿಗೆ ನೆಪದಲ್ಲಿ ಮೂವರು ವ್ಯಕ್ತಿಗಳು  ಹೊನ್ನಾವರ ಕಡೆ ಕರೆ ತಂದಿದ್ದರೆನ್ನಲಾಗಿದೆ .

ಹೊನ್ನಾವರದಿಂದ ಸಾಗರ ಮಾರ್ಗವಾಗಿ ತೆರಳುತ್ತಿದ್ದಾಗ ಗೇರುಸೊಪ್ಪ ವ್ಯೂ ಪಾಯಿಂಟ್ ನಿಂದ ಸುಮಾರು ದೂರದಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದಾರೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಂಧ್ರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


Share: