ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರದಲ್ಲಿ ಅಳಿವೆಗೆ ಸಿಕ್ಕ ಮೀನುಗಾರಿಕಾ ಬೋಟ್

ಹೊನ್ನಾವರದಲ್ಲಿ ಅಳಿವೆಗೆ ಸಿಕ್ಕ ಮೀನುಗಾರಿಕಾ ಬೋಟ್

Fri, 30 Aug 2024 16:18:20  Office Staff   S O News

ಹೊನ್ನಾವರ : ತಾಲೂಕಿನ ಕಾಸರಕೋಡು ಸಮೀಪ ಮೀನುಗಾರಿಕಾ ಬೋಟು ಅಳಿವೆಗೆ ಸಿಲುಕಿ ತೊಂದರೆಗೊಳಗಾದ ಘಟನೆ ನಡೆದಿದೆ.

ರಾತ್ರಿ  ಬಂದರು ಸಮೀಪ ಈ ಅವಘಡ ಸಂಭವಿಸಿದೆ. ಬೋಟಿನಲ್ಲಿ ಒಟ್ಟು 30 ಮೀನುಗಾರರಿದ್ದರು. ಅನ್ಸಾರ್ ಸಾಬ್ ಎಂಬುವವರಿಗೆ ಸೇರಿದ ಎಂಎಂಎಪ್ ಬೋಟ್  ಆಗಿದೆ. ಬೋಟು  ಅಳಿವೆಯಲ್ಲಿ ಸಿಲುಕಿದಾಗ ಮೀನುಗಾರರು ರಕ್ಷಣೆಗಾಗಿ ಕೂಗಿಕೊಂಡಾಗ   ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ  ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು.

ಅಲೆಯ ಹೆಚ್ಚಾಗಿದ್ದರಿಂದ  ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಇಂದು ಬೆಳಿಗ್ಗೆ ತೀರದ ಸಮೀಪ ಬೋಟು ಬಂದಿದ್ದು ಮಗುಚಿ ಬೀಳುವ ಆತಂಕವಿದೆ.


Share: