ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಕಾಗೇರಿ ಮನವಿ.

ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಕಾಗೇರಿ ಮನವಿ.

Wed, 03 Jul 2024 05:04:24  Office Staff   SO News

ನವದೆಹಲಿ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ   ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ  ರಾಷ್ಟ್ರೀಯ ಹೆದ್ದಾರಿ‌ ಕಾಮಗಾರಿಗಳನ್ನ  ತ್ವರಿತಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳುವಂತೆ  ಮನವಿ ಮಾಡಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ಭಟ್ಕಳ ತಾಲೂಕಿನ ಗಡಿಯಿಂದ ಕಾರವಾರದ ಗಡಿ ಮಾಜಾಳಿವರೆಗೆ ಚತುಷ್ಪತ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕೆಂದರು.  ಸಾಗರ ಮಾಲಾ ಯೋಜನೆಯಡಿಯಲ್ಲಿ ಮಂಜೂರಾದ ಶಿರಸಿ-ಕುಮಟಾ, ಶಿರಸಿ ಹಾನಗಲ್ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸುವದು ಮತ್ತು ಮಳೆಗಾಲದಲ್ಲಿ ರಸ್ತೆ ನಿರ್ವಹಣೆ ಮಾಡುವದರ ಕುರಿತು ಚರ್ಚಿಸಿ ಮನವಿ ಪತ್ರ ನೀಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಜಿಲ್ಲೆಯಲ್ಲಿ‌ ನಡೆಯುವ ಕಾಮಗಾರಿಗಳ ವೇಗಗೊಳಿಸಲು ಹಾಗೂ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.


Share: