ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ವಾಷಿಂಗ್ಟನ್: ಪರಮಾಣು ಸಾಮಗ್ರಿಗಳ ಭದ್ರತೆಯೊ ಇರಾನಿನ ಮೇಲೆ ದಿಗ್ಬಂಧನವೊ

ವಾಷಿಂಗ್ಟನ್: ಪರಮಾಣು ಸಾಮಗ್ರಿಗಳ ಭದ್ರತೆಯೊ ಇರಾನಿನ ಮೇಲೆ ದಿಗ್ಬಂಧನವೊ

Wed, 21 Apr 2010 03:19:00  Office Staff   S.O. News Service

ವಾಶಿಂಗ್ಟನಿನಲ್ಲಿ ನಡೆದ 47 ದೇಶಗಳ ಪರಮಾಣು ಭದ್ರತೆ ಶೃಂಗಸಭೆ ಭಾರೀ ಸುದ್ದಿ ಮಾಡಿ ಕೊನೆಗೊಂಡಿದೆಇತ್ತೀಚೆಗೆ ಅಣ್ವಸ್ತ್ರ ಕಡಿತದ ಸ್ಟಾಟರ್ ಒಪ್ಪಂದ ಪ್ರಕ್ರಿಯೆಯ ಪುನರಾರಂಭ ಮತ್ತು ಪರಮಾಣು ರಣನೀತಿಯ ಪುರ್ನಮರ್ಶೆ ಇವುಗಳ ಹಿನ್ನೆಲೆಯಲ್ಲಿ ಒಬಾಮಾ ಆಡಳಿತ ಬುಶ್ ಆಡಳಿತಕ್ಕಿಂತ ಅಣು ನಿಶ್ಶಸ್ತ್ರೀಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂಬ ಅನಿಸಿಕೆ ಕೆಲವರಲ್ಲಿ ಮೂಡಿಸಿರಬಹುದುಆದರೆ ಈ ಶೃಂಗಸಭೆಯ ನಿಜವಾದ ಉದ್ದೇಶ ಬೇರೆಯೇ ಆಗಿತ್ತು ಎಂಬುದು ವಸ್ತುನಿಷ್ಟ ವೀಕ್ಷಕರಿಗೆ ಸ್ಪಷ್ಟವಾಗಿತ್ತುಇರಾನ್ ಮತ್ತು ಉತ್ತರ ಕೊರಿಯಾಗಳನ್ನು ಶೃಂಗಸಭೆಯಿಂದ ಹೊರಗಿಟ್ಟದ್ದು ಅಮೆರಿಕದ ಆಟ ಬಯಲು ಮಾಡಿದೆ.ಪರಮಾಣು ಸಾಮಗ್ರಿಗಳು ಭಯೋತ್ಪಾದಕರ ಕೈಗೆ ಸಿಗದಂತೆ ಮಾಡುವ ಭದ್ರತಾ ಕ್ರಮಗಳ ನೆಪದಲ್ಲಿ ಇರಾನಿನ ಮೇಲೆ ದಿಗ್ಬಂಧನ ಹೊರಿಸುವುದಕ್ಕೆ ಬೆಂಬಲ ಗಳಿಸುವ ಅಮೆರಿಕನ್ ಹುನ್ನಾರ ಸ್ಪಷ್ಟವಾಗಿತ್ತು.

ಪರಮಾಣು ಸಾಮಗ್ರಿಗಳ ಭದ್ರತೆ ಮತ್ತು ಹೊಸ ಪರಮಾಣು ಸಾಮಗ್ರಿಗಳ ಉತ್ಪಾದನೆ ಇವು ಶೃಂಗಸಭೆಯ ಎರಡು ಪ್ರಮುಖ ಕಾಳಜಿಗಳುಈ ಎರಡೂ ಅಂಶಗಳ ಸುತ್ತವೇ ಪರಮಾಣು ಪ್ರಸರಣ ನಿಷೇಧ ಒಪ್ಪಂದ ಮತ್ತು ಪರಮಾಣು ಸಾಮಗ್ರಿಗಳ ಕಡಿತ ಒಪ್ಪಂದಗಳನ್ನು ಹೆಣೆಯಲಾಗಿದೆಭಾರತ ಮತ್ತು ಪಾಕಿಸ್ತಾನ ಈ ವರೆಗೆ ಇವು ತಾರತಮ್ಯ ಹೊಂದಿದೆ ಎಂದು ಸಹಿ ಹಾಕಲು ನಿರಾಕರಿಸಿರುವ ಒಪ್ಪಂದಗಳಿವು ಎಂದು ಇಲ್ಲಿ ನೆನಪಿಸಿಕೊಳ್ಳಬಹುದುಈ ಶೃಂಗಸಭೆಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಿದ ದೇಶಗಳ ಪ್ರತ್ಯೇಕ ಔತಣ ಕೂಟ ನಡೆಸಲಾಯಿತುಭಾರತಕ್ಕೆ ಅಲ್ಲಿ ಆಮಂತ್ರಣ ಇರಲಿಲ್ಲ ಎಂದು ಗಮನಾರ್ಹಈ ಒಪ್ಪಂದಕ್ಕೆ ಇರಾನ್ ಸಹ ಸಹಿ ಹಾಕಿದ್ದು ಅದರ ಪರಮಾಣು ಚಟಯವಟಿಕೆ ಒಪ್ಪಂದದ ಯಾವ ಮೂಲ ಅಂಶಗಳನ್ನು ಉಲ್ಲಂಘಿಸಿಲ್ಲಆದರೆ ಅದನ್ನು ಮರೆಮಾಚಲು ಅಮೆರಿಕ ಈ ಎಲ್ಲಾ ಸರ್ಕಸ್ಸು ಮಾಡಬೇಕಾಗಿ ಬಂದಿದೆಆ ಒಪ್ಪಂದಕ್ಕೆ ಇನ್ನು ಸಹಿ ಹಾಕದ ಹೆಚ್ಚುವರಿ ಭಾಗದ ಕೆಲವು ಅಂಶಗಳನ್ನು ಮಾತ್ರ ಮನ್ನಿಸಿಲ್ಲಅದು ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೇ ಎಂದು ಹಲವು ದೇಶಗಳು ಪ್ರಶ್ನಿಸಿವೆಇದು ಪರಮಾಣು ಸಾಮಗ್ರಿಗಳು ಭಯೋತ್ಪಾದಕರ ಕೈಗೆ ಸಿಕ್ಕರೆ ಬರುವ ಅಪಾಯಗಳ ಭೂತ ಎಬ್ಬಿಸಿ ಇರಾನಿನ ಮೇಲೆ ದಿಗ್ಬಂಧನ ಹೇರಲು ಒತ್ತಡ ತಂತ್ರ.

ಪರಮಾಣು ಸಾಮಗ್ರಿಗಳು ಭಯೋತ್ಪಾದಕರ ಕೈಗೆ ಸಿಕ್ಕರೆ ಬರುವ ಅಪಾಯಗಳ ಬಗ್ಗೆ ಅಮೆರಿಕ ಎಷ್ಟು ಪ್ರಾಮಾಣಿಕವಾಗಿದೆ ಎಂದು ಪ್ರಶ್ನಿಸುವ ಅಗತ್ಯ ಇದೆಈ ನಿಟ್ಟಿನಲ್ಲಿ ಈಗಾಗಲೇ ಇರುವ ಎರಡು ಅಂತರ್ರಾಷ್ಟ್ರೀಯ ಒಪ್ಪಂದಗಳಿಗೆ ಅಮೆರಿಕ ಸಹಿ ಹಾಕಿಲ್ಲ. 2005 ರಲ್ಲಿ ಅಸ್ತಿತ್ವಕ್ಕೆ ಬಂದ ಪರಮಾಣು ಸಾಮಗ್ರಿಗಳ ಭದ್ರತೆಗೆ ಒಪ್ಪಂದ ಮತ್ತು (ರಶ್ಯ ಪ್ರಸ್ತಾವಿಸಿದಪರಮಾಣು ಭಯೋತ್ಪಾದಕತೆ ಹತ್ತಿಕ್ಕುವ ಅಂತರ್ರಾಷ್ಟ್ರೀಯ ಒಪ್ಪಂದ ಇವೆರಡನ್ನೂ ಅಮೆರಿಕ ಮನ್ನಿಸಿಲ್ಲಪರಮಾಣು ಸಾಮಗ್ರಿಗಳ ಮೇಲೆ ಅಣ್ವಸ್ತ್ರ ಹೊಂದಿರುವ ಪ್ರಬಲ ದೇಶಗಳ ಅಧಿಪತ್ಯ ಸಾಧಿಸುವುದುತಮ್ಮ ಅಧಿಪತ್ಯಕ್ಕೆ ಧಕ್ಕೆ ತರುವ ದೇಶಗಳಿಗೆ ಪರಮಾಣು ತಂತ್ರಜ್ಞಾನ ಸಿಗದಂತೆ ಮಾಡುವುದು ಈ ಶೃಂಗಸಭೆಯ ಆಶಯಇದು ಇಂದಿನ ಪರಿಸ್ಥಿತಿಯಲ್ಲಿ ನಡೆಯದ ಮಾತುಪರಮಾಣು ತಂತ್ರಜ್ಞಾನ ಸುಲಭಸಾಧ್ಯ ಮತ್ತು ಅಗ್ಗ ಆಗುತ್ತಿರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣದಿಂದ ಮಾತ್ರ ಬಾಂಬು ತಯಾರಿಸಬಹುದಾದ ಪರಮಾಣು ಸಾಮಗ್ರಿಗಳು ಅಪಾಯಕಾರಿ ಗುಂಪುಗಳ ಕೈ ಸೇರದಂತೆ ತಡೆಯಲು ಸಾಧ್ಯತಮ್ಮ ಭದ್ರತೆಗೆ ಪರಮಾಣು ಅಸ್ತ್ರಗಳು ಬೇಕುಇತರರಿಗೆ ತಮ್ಮ ಭದ್ರತೆಯ ಭರವಸೆ ಸಾಕು ಎಂಬ ನೀತಿಯನ್ನು ಹೆಚ್ಚಿನ ದೇಶಗಳು ಒಪ್ಪುವುದಿಲ್ಲಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣದ ಬಗ್ಗೆ ಶೃಂಗಸಭೆಯಲ್ಲಿ ಕೇಳಿಬಂದರೂ (ನಮ್ಮ ಪ್ರಧಾನಿ ಭಾಷಣ ಸೇರಿದಂತೆಅದರ ಅಜೆಂಡಾದಲ್ಲಿ ಸೇರಿರಲಿಲ್ಲಸಾರ್ವತ್ರಿಕ ಪರಮಾಣು ನಿಶ್ಶಸ್ತ್ರೀಕರಣ ಜಗತ್ತಿನ ಪ್ರಮುಖ ಅಜೆಂಡಾ ಆಗುವ ವರೆಗೆ ಪರಮಾಣು ಸಾಮಗ್ರಿಗಳ ಭದ್ರತೆಯ ಮಾತು ಹುಸಿ ಎಂಬುದು ಸ್ಪಷ್ಟ.

ಇರಾನ್ ಈ ಶೃಂಗಸಭೆಯ ಬೆನ್ನಿನಲ್ಲೇ ಪರಮಾಣು ನಿಶ್ಶಸ್ತ್ರೀಕರಣ ಶೃಂಗಸಭೆ ಸಂಘಟಿಸಿದೆಈ ಶೃಂಗಸಭೆಯಲ್ಲಿ ಪಶ್ಚಿಮ ಏಶ್ಯಾವನ್ನು ಪರಮಾಣು ಅಸ್ತ್ರ ರಹಿತ ಪ್ರದೇಶವಾಗಿ ಘೋಷಿಸುವ ಯೋಚನೆಯಿದೆಆದರೆ ಅಮೆರಿಕ ಇದು ಇಸ್ರೇಲ್ ಮತ್ತು ತನ್ನ ನೆಲೆಗಳಿಗೆ ಅದು ಅನ್ವಯವಾಗಬಾರದು ಎನ್ನುತ್ತಿದೆಪಶ್ಚಿಮ ಏಶ್ಯಾದಲ್ಲಿ ಇಸ್ರೇಲಿನ ಭಯೋತ್ಪಾದಕ ಪಾತ್ರ ಗಮನಿಸಿದರೆ ವಾಶಿಂಗ್ಟನ್ ಶೃಂಗಸಭೆಯ ಆಶಯಗಳು ಎಷ್ಟು ಅಪ್ರಾಮಾಣಿಕ ಎಂದು ಸ್ಪಷ್ಟವಾಗುತ್ತದೆ.

ವಾಶಿಂಗ್ಟನ್ ಶೃಂಗಸಭೆಯ ಬಗ್ಗೆ ನಮ್ಮ ಮಾಧ್ಯಮಗಳಲ್ಲಿ ಚರ್ಚೆಸ್ಪಂದನ ಸಾಕಷ್ಟು ಚೋದ್ಯಕರವಾಗಿದ್ದವುಒಬಾಮಾ ಭಾರತ ಅಥವಾ ಪಾಕಿಸ್ತಾನದ ಪ್ರಧಾನಿಯನ್ನು ಮೊದಲು ಭೇಟಿಯಾದರೇಯಾರ ಜತೆ ಎಷ್ಟು ಹೊತ್ತು ಕಳೆದರುಯಾವ ಔತಣಕೂಟಕ್ಕೆ ಯಾರಿಗೆ ಆಮಂತ್ರಣ ಇತ್ತುಒಬಾಮಾ ಭಾರತಕ್ಕೆ ಎಷ್ಟು ಆದ್ಯತೆ ಕೊಡ್ತಾರೆಆದ್ಯತೆ ಕೊಡ್ತಾರಾ ಇಲ್ವಾ ಇಂತಹ ಪ್ರಶ್ನೆಗಳ ಬಗ್ಗೆ ತಲೆ ಕೆಡಿಸಿಕೊಂಡರುಎಲ್ಲಾ ದೇಶಗಳ ಮೇಲೆ ಅಣ್ವಸ್ತ್ರ ಬಲದ ಆಧಾರದ ಮೇಲೆ ಅಧಿಪತ್ಯ ನಡೆಸುವುದುತಮ್ಮ ಮೂಗಿನ ನೇರಕ್ಕೆ ಎಲ್ಲರೂ ನಡೆಯುವಂತೆ ಮಾಡುವುದು ಮಾತ್ರ ಅಮೆರಿಕದ ಒಬಾಮಾರ ಆದ್ಯತೆ ಎಂದು ಅವರಿಗೂ ಅರ್ಥವಾಗಲಿಲ್ಲ.ಜನಕ್ಕೂ ಅರ್ಥವಾಗದಂತೆ ಮಾಡಿದರು 0

ಸರ್ವಾಧಿಕಾರ ಕ್ರಮಗಳಿಗೆ ಕಡಿವಾಣ ಹಾಕಿದ 18ನೇ ತಿದ್ದುಪಡಿ

ಪಾಕಿಸ್ತಾನದ ಪಾರ್ಲಿಮೆಂಟು ಮೂರನೇ ಎರಡು ಬಹುಮತದಿಂದ ಪಾಸು ಮಾಡಿದ 18 ನೇ ಸಂವಿಧಾನ ತಿದ್ದುಪಡಿ ಸರ್ವಾಧಿಕಾರ ಕ್ರಮಗಳಿಗೆ ಕಡಿವಾಣ ಹಾಕುವ ಹಲವು ಬದಲಾವಣೆಗಳನ್ನು ತಂದಿದೆಅಧ್ಯಕ್ಷರು ಸಂವಿಧಾನ ಮತ್ತು ಪಾರ್ಲಿಮೆಂಟು ತಡೆ ಹಿಡಿಯುವ ಅಥವಾ ವಿಸಜರ್ಸುವ ಅಧಿಕಾರಕ್ಕೆ ಕಡಿವಾಣ ಹಾಕಿದೆಅದು ದೇಶದ್ರೋಹದ ಕ್ರಮ ಎಂದಿದೆ.ಇದಲ್ಲದೆ ನೇಶನಲ್ ಫೈನಾನ್ಸ್ ಕಮಿಶನ್ ಸಂಘಟಿಸಿ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕರಾಜಕೀಯ ಅಧಿಕಾರ ಕೊಟ್ಟಿದೆರಾಜ್ಯಗಳಿಗೆ ತೆರಿಗೆ ಆದಾಯದ ದೊಡ್ಡ ಭಾಗ ಕೊಟ್ಟಿರುವುದುಸಣ್ಣ ರಾಜ್ಯಗಳಿಗೆ ಅನುಕೂಲಕರವಾದ ಆದಾಯ ಹಂಚಿಕೆಯಲ್ಲಿ ಜನಸಂಖ್ಯೆಯೇ ಮುಖ್ಯ ಆಧಾರವಾಗಿ ತೆಗೆದು ಹಾಕಿರುವುದುತೈಲ-ಗ್ಯಾಸ್ ಆದಾಯದಲ್ಲಿ ರಾಜ್ಯಗಳಿಗೆ ಪಾಲು ಇವು ಪ್ರಜಾಪ್ರಭುತ್ವ ಮತ್ತು ವಿಕೆಂಧ್ರೀಕರಣ ವನ್ನು ಮುಂದಕ್ಕೊಯ್ಯುವ ಇತರ ಕ್ರಮಗಳು.

ಆದರೆ ಇಂತಹ ಪ್ರಮುಖ ಬದಲಾವಣೆ ಅಷ್ಟಾಗಿ ಗಮನ ಸೆಳೆದಿಲ್ಲಅಮೆರಿಕದ ಅಫ್-ಪಾಕ್ ರಣನೀತಿಯ ಭಾಗವಾಗಿ ಪುನಃ ಮಿಲಿಟರಿಗೆ ರಾಜಕೀಯ ಪ್ರಾಮುಖ್ಯತೆ ಬಂದಿರುವ ಹಿನ್ನಲೆಯಲ್ಲಿ ನೋಡಿದರೆ ಇದು ಅಂತಹ ಪರಿಣಾಮಕಾರಿ ಕ್ರಮ ಆಗಲಿಕ್ಕಿಲ್ಲ.ಈಗ ಜದರ್ರಿಯವರ ಅಧಿಕಾರಕ್ಕೆ ಕಡಿವಾಣ ಹಾಕಲು ಇದು ಬಂದಿದೆರಾಜಕೀಯ ಪಕ್ಷಗಳ ಜಗಳ ಬಗೆ ಹರಿಸುವ ನೆಪದಲ್ಲಿ ಮಿಲಿಟರಿ ಸವರ್ಧಕಾರಕ್ಕೆ ಯಾವತ್ತೂ ಅವಕಾಶ ಇದೆ ಎಂಬ ಗುಮಾನಿಯನ್ನೂ ಹಲವರು ವ್ಯಕ್ತ ಪಡಿಸಿದ್ದಾರೆಆದರೂ ಇದು ಒಂದು ಗಮನಾರ್ಹ ಬೆಳವಣಿಗೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಶ್ರೀಲಂಕಾದಲ್ಲಿ ರಾಜಪಕ್ಸೆ ಪಕ್ಷಕ್ಕೆ ಜಯ

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಅಧ್ಯಕ್ಷ ಮಹೀಂದ್ರ ರಾಜಪಕ್ಸರವರ ಪಕ್ಷದ ನಾಯಕತ್ವದ ರಂಗ ಭಾರೀ ಜಯಗಳಿಸಿದೆಅವರ ನಾಯತ್ವದಲ್ಲಿ `ಯುನೈಟೆಡ್ ಪ್ರೋಗ್ರೆಸ್ಸಿವ್ ಫ್ರೀಡಂ ಅಲಯನ್ಸ‘ ರಂಗ ಮೂರನೇ ಎರಡು ಬಹುಮತಕ್ಕೆ ಕೆಲವೇ ಕಡಿಮೆ ಸೀಟು ಗಳಿಸಿದೆಶೇಕಡಾ 60 ಮತಗಳಿಕೆ ಸಾಧಿಸಿದೆಪ್ರಮುಖ ವಿರೋಧ ಪಕ್ಷವಾದ ಯುನೈಟೆಡ್ ನೇಶನಲ್ ಪಾರ್ಟಿ ತನ್ನ ಬೆಂಬಲ ಹೆಚ್ಚಿಸಿಕೊಳ್ಳಲು ವಿಫಲವಾಗಿದೆಮಾಜಿ ಮಿಲಿಟರಿ ಜನರಲ್ ಶರತ್ ಫೊನ್ಸೇಕಾ ನಾಯಕತ್ವದ ಮೂರನೇ ರಂಗ ಹೀನಾಯವಾಗಿ ಸೋತಿದೆಈ ರಂಗ ಸಂಘಟಿಸಿದ ಜನತಾ ವಿಮುಕ್ತಿ ಪೆರುಮಾನ ಪರಾಭವ ಕಂಡಿದೆ.

ಆದರೆ ಜನರಲ್ ಶರತ್ ಫೊನ್ಸೇಕಾ ವೈಯಕ್ತಿಕವಾಗಿ ಆಯ್ಕೆಯಾಗಿದ್ದಾರೆಉತ್ತರದ ತಮಿಳು ಬಹುಸಂಖ್ಯಾತ ಪ್ರದೇಶಗಳಲ್ಲಿ ತಮಿಳು ನೇಶನಲ್ ಅಲಯನ್ಸ್ ಉತ್ತಮ ಪ್ರದರ್ಶನ ಕೊಟ್ಟಿದೆಆದರೆ ಈ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕೇವಲ ಶೇ. 55 ಆಗಿದೆಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಶೇ. 75 ಮತ್ತು ಹಿಂದಿನ ಪಾರ್ಲಿಮೆಂಟರಿ ಚುನಾವಣೆಗಳ ಸರಾಸರಿ ಶೇ. 60-65 ಕ್ಕಿಂತ ಇದು ತೀರಾ ಕಡಿಮೆ ಎಂದು ಗಮನಿಸಬೇಕುಉತ್ತರದ ತಮಿಳು ಪ್ರದೇಶಗಳಲ್ಲಿ ಇನ್ನೂ ಕಡಿಮೆಇದು ಆತಂಕಕಾರಿಈವರೆಗೆ ಎಲ್ಟಿಟಿಇ ಭಯೋತ್ಪಾದನೆಯ ಕಾರಣ ಕೊಟ್ಟು ಸಮರ್ಥಿಸಲಾಗುತ್ತಿದ್ದ ಹಲವು ದಮನಕಾರೀ ಸರ್ವಾಧಿಕಾರಿ ಕ್ರಮಗಳನ್ನು ಹಿಂತೆಗೆದುಕೊಳ್ಳುವುದುಎಲ್ಲಾ ವಿರೋಧ ಪಕ್ಷಗಳು ಮತ್ತು ತಮಿಳು ಮುಸ್ಲಿಂ ಮುಂತಾದ ಅಲ್ಪಸಂಖ್ಯಾತ ಗುಂಪುಗಳ ಜತೆ ಮಾತುಕತೆ ಸಹಕಾರದಿಂದ ಶಾಂತಿ ಬೆಳವಣಿಗೆಗೆ ಗಮನ ಕೊಡುವುದು ಹೊಸ ಸರ್ಕಾರದ ಆದ್ಯತೆ ಆಗಬೇಕುಸೋತ ಮಾಜಿ ಮಿಲಿಟರಿ ಜನರಲ್ ಶರತ್ ಫೊನ್ಸೇಕಾ ಬಂಧನಅವರ ವಿರುಧ್ಧ ಮಿಲಿಟರಿ ಕೊರ್ಟ್ ವಿಚಾರಣೆವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಮೇಲೆ ತೀವ್ರ ನಿರ್ಬಂಧಗಳು ಮುಂತಾದವು ಈ ಭರವಸೆ ನೀಡುತ್ತಿಲ್ಲ.  

 

ಸೌಜನ್ಯ: ಜನಶಕ್ತಿ 



Share: