ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಚಾಲನೆ - ಹದಿನಾರು ಅಧಿಕಾರಿಗಳಿಗೆ ಸ್ಥಳ ಬದಲಾವಣೆ

ಬೆಂಗಳೂರು: ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಚಾಲನೆ - ಹದಿನಾರು ಅಧಿಕಾರಿಗಳಿಗೆ ಸ್ಥಳ ಬದಲಾವಣೆ

Sun, 18 Apr 2010 03:25:00  Office Staff   S.O. News Service

ಬೆಂಗಳೂರು, ಏ. ೧೭: ಹಲವು ತಿಂಗಳಿಂದ ವರ್ಗಾವಣೆಗೆ ಬ್ರೇಕ್ ಹಾಕಿದ್ದ ಸರ್ಕಾರ ಈಗ ಮತ್ತೆ ವರ್ಗಾವರ್ಗಿಗೆ ಚಾಲನೆ ನೀಡಿದ್ದು, ಇಂದು ೧೬ ಮಂದಿ ಹಿರಿಯ ಐ.ಎ.ಎಸ್. ಅಧಿಕಾರಿಗಳ ಸ್ಧಳ ಬದಲಾವಣೆ ಮಾಡಿದೆ.

 

ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಳೆದವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ನೇಮಕದಲ್ಲಿ ಬದಲಾವಣೆಗಳನ್ನು ಮಾಡಿದ್ದ ಬಿಜೆಪಿ ಸರ್ಕಾರ ಈಗ ಇಲಾಖ ಮುಖ್ಯಸ್ಥರ ಬದಲಾವಣೆಗೆ ಮುಂದಾಗಿದ್ದು, ಇಂದು ೧೬ ಮಂದಿ ಅಧಿಕಾರಿಗಳ ವರ್ಗಾವಣೆ ಪಟ್ಟಿ ಹೊರ ಬಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವರ್ಗಾವಣೆ ಆಗಲಿದೆ.

ಇಂದು ವರ್ಗಾವಣೆಯಾದ ೧೬ ಐ.ಎ.ಎಸ್. ಅಧಿಕಾರಿಗಳ ಪಟ್ಟಿ ಈ ರೀತಿ ಇದೆ.

ಅಭಿಜಿತ್ ದಾಸ್ ಗುಪ್ತ - ಹೆಚ್ಚುವರಿ ಅಭಿವೃದ್ಧಿ ಆಯುಕ್ತರು.

ಸುಬೀರ್ ಹರಿಸಿಂಗ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಕೆ.ಎಂ. ಶಿವಕುಮಾರ್ - ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ

ಮದನ್ ಗೋಪಾಲ್ - ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಡಿ. ಸತ್ಯ ಮೂರ್ತಿ - ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ

ಯೊಗೇಂದ್ರ ತ್ರಿಪಾಠಿ - ವ್ಯವಸ್ಥಾಪಕ ನಿದೇರ್ಶಕ ಎಂ.ಎಸ್.ಐ.ಎಲ್.

ಕೆ. ಶಿವರಾಮ್ - ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ.

ಬಿ.ಎಚ್. ಅನಿಲ್‌ಕುಮಾರ್-ಮುಖ್ಯ ಯೋಜನ ಅಧಿಕಾರಿ. ಕರ್ನಾಟಕ ಹೆದ್ದಾರಿ ಯೋಜನೆಗಳು

ಹರೀಶ್ ಗೌಡ - ಕಾರ್ಯದರ್ಶಿ ಆಹಾರ ಇಲಾಖೆ

ಜಿ.ಎಸ್. ನಾರಾಯಣ ಸ್ವಾಮಿ - ಕಾರ್ಯದರ್ಶಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ.

ಕೆ.ಎಸ್. ಶಶಿಧರ್ - ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

ಎಸ್.ಎನ್. ಜಯರಾಮ್- ನೊಂದಣಿ ಇಲಾಖೆ ಮಹಾನಿರ್ದೇಶಕ

ಕೆ.ಎಸ್. ಪ್ರಭಾಕರ್ - ಕಾರ್ಯದರ್ಶಿ ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ)

ಸೀತಾರಾಮ್ - ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಡಾ. ಕೆ.ಹೆಚ್. ಗೋವಿಂದರಾಜು - ಪಶು ಸಂಗೋಪನಾ ಇಲಾಖೆ ಆಯುಕ್ತ

ಕೆ.ಆರ್. ನಿರಂಜನ - ವಿಶೇಷ ಆಯುಕ್ತ ಬಿ.ಬಿ.ಎಂ.ಪಿ.


Share: