ಬೆಂಗಳೂರು, ಎ.೧೭: ರಾಜ್ಯದಲ್ಲಿ ಬಿಜೆಪಿ ಸರಕಾರ ಜಾರಿಗೆ ತರಲು ಹೊರಟಿರುವ ಸಂವಿಧಾನ ವಿರೋಧಿ ‘ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ- ೨೦೧೦’ನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದು ‘ದನ ಕಡಿಯುವ ನಿಷೇಧ ಮಸೂದೆ ವಿರುದ್ಧ ಜನಾಂದೋಲನ ಒಕ್ಕೂಟ’ ನಿರ್ಧರಿಸಿದೆ.
ನಗರದ ಸೆಂಟ್ರೆಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಈ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ನಡೆಯಲಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಎಲ್ಲ ಪ್ರಗತಿಪರ, ರೈತಪರ, ದಲಿತಪರ ಅಲ್ಪಸಂಖ್ಯಾತ ಸಂಘಟನೆ ಗಳಿಗೆ ಕರೆ ನೀಡಲಾಗಿದೆ.
ಇಪ್ಪತ್ತಾರಕ್ಕೂ ಹೆಚ್ಚು ಸ್ಥಳೀಯ ಹಾಗೂ ರಾಜ್ಯಮಟ್ಟದ ಸಂಘಟನೆಗಳು ಸೇರಿ ರಚಿಸಲಾಗಿರುವ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಉದ್ಘಾಟಿಸಿ ಮಾತನಾಡುತ್ತಾ, ಅತ್ಯಂತ ಅಪಾಯಕಾರಿ, ಸಂವಿಧಾನ ಬಾಹಿರ ಹಾಗೂ ರೈತ ವಿರೋಧಿ ಮಸೂದೆ ಯನ್ನು ಜಾರಿಗೆ ತರದಂತೆ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶ ಅಥವಾ ರಾಜ್ಯದ ಆಡಳಿತ ನಡೆಸುವವರು ಎಲ್ಲ ಜನರ ಹಿತ ಬಯಸುವರಾಗಿರಬೇಕು. ಅದನ್ನು ಬಿಟ್ಟು ಯಾವುದೇ ಒಂದು ಗುಂಪಿನ ಹಿತ ಬಯಸುವುದು ಸರಿಯಲ್ಲ ಎಂದು ಹೇಳಿದರು.
ದನದ ಮಾಂಸ ತಿನ್ನದ, ಜಾನುವಾರು ಗಳನ್ನು ಸಾಕದ, ಅವುಗಳ ತುಪ್ಪ, ಗಾಂಜಲ ನೋಡಿ ಕೀಲೋ ಮೀಟರ್ ದೂರ ಸರಿಯುವ ಕೇವಲ ಶೇ. ೧೦ರಷ್ಟು ಜನರ ಹಿತ ಕಾಪಾಡಲು ಶೇ. ೯೦ರಷ್ಟು ಜನರನ್ನು ಅಪಾಯದ ಅಂಚಿಗೆ ದೂಡಲಾಗುತ್ತಿದೆ. ಕಾಯ್ದೆ ಜಾರಿಯಾದಲ್ಲಿ ಕೃಷಿ ಚಟುವಟಿಕೆ, ಚರ್ಮೋದ್ಯಮ, ಜಾನು ವಾರು ಸಾಕಣೆ, ಹಾಲು ಉತ್ಪಾದನೆ ಸಂಪೂರ್ಣವಾಗಿ ನಶಿಸಿ ಹೋಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಸುಗಳನ್ನು ಸಾಕುವವರಿಗೆ ಹೆಚ್ಚುವರಿ ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದು ಅತ್ಯಂತ ಹಾಸ್ಯಾಸ್ಪದ. ಪ್ರಾಯೋಗಿಕವಾಗಿ ಜಾರಿ ಗೊಳಿಸಲು ಸಾಧ್ಯವಲ್ಲದ ಇಂತಹ ಹೇಳಿಕೆಗಳನ್ನು ಸಿಎಂ ನೀಡುತ್ತಿರುವುದು ಅವರ ಬೇಜವಾಬ್ದಾರಿತನ ತೋರಿಸು ತ್ತದೆ. ಈ ಕರಾಳ ಕಾಯ್ದೆ ಜಾರಿಯಾದಲ್ಲಿ ಅನುಪಯುಕ್ತ ಜಾನುವಾರಗಳನ್ನು ವಿಧಾನ ಸೌಧದ ಮುಂದೆ ಕಟ್ಟೋಣ. ಈಗಾಗಲೇ ಕೆಲಸವಿಲ್ಲದ ಸಚಿವರು ದನ ಕಾಯುವ ಕೆಲಸ ಮಾಡಲಿ ಎಂದು ಅವರು ಲೇವಡಿ ಮಾಡಿದರು.
ಯು.ಆರ್.ಅನಂತಮೂರ್ತಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಮಾತನಾಡಿ, ಈ ಕಾಯ್ದೆ ಸಜ್ಜನರನ್ನು ಅಪರಾಧಿಗಳನ್ನಾಗಿ ಮಾಡುತ್ತದೆ. ಇದೊಂದು ಅನಗತ್ಯ ಕಾನೂನು. ಇಂತಹ ಕರಾಳ ಕಾನೂನಿನ ವಿರುದ್ಧ ಜನಾಂದೋಲನ ರೂಪಿಸಲು ಮುಂದಾ ಗಿರುವ ಪ್ರೊ.ರವಿವರ್ಮ ಕುಮಾರ್‌ರನ್ನು ಅಭಿನಂದಿಸಿದರು.
ಮುಂದಾಲೋಚನೆ ಇಲ್ಲದ ಈ ಕಾನೂನು ಜಾರಿಗೊಂಡರೆ ಅರಾಜಕತೆ ಸೃಷ್ಟಿಯಾಗಬಹುದು. ಕೋಮುವಾದಿ ಸಂಘಟನೆಗಳ ಎಲ್ಲ ಕಾರ್ಯಗಳಿಗೆ ಕಾನೂನಿನ ಮಾನ್ಯತೆ ಸಿಕ್ಕಂತಾಗುತ್ತದೆ. ಈಗಾಗಲೇ ಇಂತಹ ಸ್ಥಿತಿ ದಕ್ಷಿಣ ಕನ್ನಡ ಮತ್ತಿತರ ಕಡೆಗಳಲ್ಲಿ ನಿರ್ಮಾಣವಾಗಿದೆ. ಅನುಪಯುಕ್ತ ದನಗಳನ್ನು ಮಾರಾಟ ಮಾಡುವವರು ಹಿಂದೂಗಳು. ಅದರ ಬಗ್ಗೆ ಚಕಾರ ಎತ್ತದ ಹಿಂದೂ ಧರ್ಮ ರಕ್ಷಣೆಯ ಸ್ವಯಂಘೋಷಿತ ರಕ್ಷಕರು ಅದನ್ನು ಕೊಂಡು ಹೋಗುವ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡುತ್ತಾರೆ ಎಂದು ಕಾನೂನಿನ ದುರಪಯೋಗದ ಕುರಿತು ಹೇಳಿದರು.
ಜಿ.ಕೆ.ಗೋವಿಂದ್ ರಾವ್: ಖ್ಯಾತ ಚಿಂತಕ ಪ್ರೊ.ಜಿ.ಕೆ. ಗೋವಿಂದ್ ರಾವ್ ಈ ಸಂದರ್ಭದಲ್ಲಿ ಮಾತನಾಡಿ, “ಗೋಹತ್ಯೆ ನಿಷೇಧವನ್ನು ವಿರೋಧಿಸು ವವರ ಕೈ ಕತ್ತರಿಸಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾ, ಪವರ್ ಮಿನಿಷ್ಟರ್ ಆಗಿದ್ದ ಈಶ್ವರಪ್ಪರ ಎಲ್ಲ ಪವರ್ ಕಿತ್ತುಕೊಂಡು ಕೈ-ಕಾಲು ಕಟ್ಟಿ ಹಾಕಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಈಶ್ವರಪ್ಪರನ್ನು ತರಾಟೆಗೆ ತೆಗೆದುಕೊಂಡರು.
ರೈತರ ಆತ್ಮಹತ್ಯೆಗಳ ಸಂಖ್ಯೆ ನಿರಂತರ ಹೆಚ್ಚಾಗುತ್ತಿದ್ದರೂ, ಆ ಬಗ್ಗೆ ಒಂದೇ- ಒಂದು ಮಾತನ್ನಾಡದ ಇಂಥವರು ಮತ್ತು ಇವರ ಸರಕಾರಕ್ಕೆ ಸಾಯುವ ರೈತರಿಗಿಂತ ಮುದಿ ಹಸುಗಳ ಬಗ್ಗೆ ಅಪಾರ ಕಾಳಜಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆರಾಧ್ಯದೈವ ವಿವೇಕಾನಂದ ೧೯೦೦ರಲ್ಲಿ ಗೋಮಾಂಸ ಭಕ್ಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲ ಜೀವಿ ಗಳು ಶ್ರೇಷ್ಟ. ಯಾವುದೂ ಕನಿಷ್ಟ ಅಲ್ಲ. ಪ್ರಕೃತಿ ತನ್ನ ಸಮತೋಲನ ಕಾಪಾಡಿ ಕೊಳ್ಳಲು ಇದು ಅನಿವಾರ್ಯ ಎಂದರು.
ಗೌರಿ ಲಂಕೇಶ್: ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಈ ಕಾನೂನು ಮತ್ತು ಇದೇ ರೀತಿಯ ಇನ್ನೂ ಅನೇಕ ವಿಷಯಗಳಲ್ಲಿ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿ ರುವ ಕೋಮು ಸೌಹಾರ್ದ ವೇದಿಕೆ ಯನ್ನು ಈ ಹೋರಾಟದಲ್ಲಿ ಸೇರಿಸಿಕೊಳ್ಳು ವಂತೆ ಒಕ್ಕೂಟಕ್ಕೆ ಮನವಿ ಮಾಡಿದರು.
ಗೋವು ಪವಿತ್ರ ಮತ್ತು ಪೂಜ್ಯ ಎಂದಾದರೆ, ವಿಷ್ಣುವಿನ ಅವತಾರ ವರಾಹ ಸಹ ಪವಿತ್ರ ಹಾಗೂ ಪೂಜ್ಯ. ಧರ್ಮ ಪಾಲನೆ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿರುವ ಸಿಎಂ ಯಡಿಯೂರಪ್ಪ ಹಾಗೂ ಪೇಜಾವರ ಸ್ವಾಮಿ ವರಾಹವನ್ನು ಪೂಜಿಸಲಿ ಎಂದವರು ಸಲಹೆ ನೀಡಿದರು.
ಸಮತಾ ಸೈನಿಕದಳದ ಎಂ.ವೆಂಕಟ ಸ್ವಾಮಿ, ಸಿಪಿಎಂ ಎಸ್.ವೈ. ಗುರುಶಾಂತ್, ದಸಂಸ(ಅ)ನ ಮಾವಳ್ಳಿ ಶಂಕರ್, ಮುತ್ತಹಿದಾಃ ಮಹಾಝ್‌ನ ಸೈಯದ್ ಇಕ್ಬಾಲ್, ದಸಂಸದ ವೆಂಕಟೇಶ್, ಅಹಿಂದದ ಪ್ರೊ.ಎನ್.ವಿ.ನರಸಿಂಹಯ್ಯ ಸಂದರ್ಭೋಚಿತವಾಗಿ ಮಾತನಾಡಿ ದರು. ಕಾರ್ಯಕ್ರಮದ ಪ್ರಮುಖ ರೂವಾರಿ ಪ್ರೊ.ರವಿವರ್ಮಾ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜನಶಕ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ: ಎ.ಕೆ.ಸುಬ್ಬಯ್ಯ
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಮಾತನಾಡಿ, ಈ ಕರಾಳ ಮಸೂದೆಯನ್ನು ವಿರೋಧಿಸಿ ವಿಚಾರವಾದಿಗಳು, ಬುದ್ಧಿಜೀವಿಗಳು, ಸತ್ಯನಿಷ್ಠರು ಒಂದಾಗಿ ರಾಜ್ಯಾದ್ಯಂತ ಜನಾಂದೋಲನ ರೂಪಿಸುವ ಉದ್ದೇಶ ದಿಂದ ಈ ಒಕ್ಕೂಟವನ್ನು ರಚಿಸಲಾ ಗಿದೆ. ಇದರಲ್ಲಿ ಕೆಲವರು ಕೈತಪ್ಪಿ ಹೋಗಿರಬಹುದು ಅವರನ್ನು ಸೇರಿಸಿ ಕೊಳ್ಳಲಾಗುವುದು. ನಮ್ಮ ಎಲ್ಲ ಆಂತ ರಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಈ ಮಸೂದೆಯ ವಿರುದ್ಧ ಹೋರಾಟ ಮಾಡಬೇಕಾಗಿದೆ. ಜನ ಶಕ್ತಿ ಒಂದಾ ದಲ್ಲಿ ಸರಕಾರಗಳು ಯಾವ ಲೆಕ್ಕಕ್ಕೂ ಇಲ್ಲ. ಇಂತಹ ಉದಾಹರಣೆಗಳು ರಾಜ್ಯದಲ್ಲಿ ಈ ಹಿಂದೆ ಕಂಡಿದ್ದೇವೆ ಎಂದು ನುಡಿದರು.
ಕಾನೂನು ಯಾಕೆ ತಂದಿದ್ದೀರಿ ಎಂಬು ದಕ್ಕೆ ಸರಕಾರದ ಬಳಿ ಸ್ಪಷ್ಟ ಸಮರ್ಥ ನೆಗಳಿಲ್ಲ. ಗೋವು ನಮ್ಮ ತಾಯಿ ಎಂದು ಹೇಳುತ್ತಾರಲ್ಲ... ಯಾರದರೂ ಹತ್ತು ಹಸು ಸಾಕಿದರೆ ಅವರಿಗೆ ಹತ್ತು ತಾಯಿಗಳು ಎಂದರ್ಥವೇ? ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಹಾಗೂ ಪೇಜಾವರ ಸ್ವಾಮಿಗಳು ದನದ ಹೊಟ್ಟಯಿಂದ ಬಂದವರಾ? ಹಸು ತಾಯಿ ಅಂದ ಮೇಲೆ ಎತ್ತು ಏನು? ತಂದೆ ಎಂದು ಅರ್ಥ ಅಲ್ಲವೇ? ಎಂದು ಕಾಯ್ದೆಯನ್ನು ಸಮರ್ಥಿಸಿ ಕೊಳ್ಳುತ್ತಿರು ವರಿಗೆ ಚುಚ್ಚಿ ಮಾತನಾಡಿದರು.
ಈ ಕಾನೂನು ಯಾವ ಕಾರಣಕ್ಕೂ ಜಾರಿಯಾಗಬಾರದು. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಕಣ್ಣು ಮುಚ್ಚಾಲೆ ಆಟವಾಡುತ್ತಿವೆ. ಎಲ್ಲರದ್ದೂ ಒಳ ಒಪ್ಪಂದವಾದಂತಿದೆ ಎಂದು ವಿಶ್ಲೇಷಿಸಿದರು.
ಈ ಕಾನೂನು ಜಾರಿ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಜನವಿರೋಧದ ನಡುವೆಯೂ ಕಾಯ್ದೆ ಜಾರಿಗೆ ಬಂದಲ್ಲಿ ‘ಜೈಲ್ ಭರೋ ಅಲ್ಲ ಜೈಲ್ ತೋಡೊ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.