ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ದೊರಕಿದ ಭಾರೀ ಬೆಂಬಲ ಶ್ಲಾಘಿಸಿದ ಬಸವರಾಜ ಹೊರಟ್ಟಿ

ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ದೊರಕಿದ ಭಾರೀ ಬೆಂಬಲ ಶ್ಲಾಘಿಸಿದ ಬಸವರಾಜ ಹೊರಟ್ಟಿ

Thu, 25 Feb 2010 02:57:00  Office Staff   S.O. News Service

ಭಟ್ಕಳ, ಫೆಬ್ರವರಿ ೨೪, ಪಶ್ಚಿಮ ಶಿಕ್ಷಕ ಮತದಾರರ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಆಯ್ಕೆಯಾಗಿ ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಪರಿಣಾಮಕಾರಿಯಾಗಿ ಕೆಲಸವನ್ನು ಮಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ತಮಗೆ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಮುಂಬರುವ ಪಶ್ಚಿಮ ಶಿಕ್ಷಕರ ಮತದಾರರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜೆ.ಡಿ‌ಎಸ್. ಅಭ್ಯರ್ಥಿ ಬಸವರಾಜ ಹೊರಟ್ಟಿ ತಿಳಿಸಿದರು. ಅವರು ಇಂದು ಬುಧವಾರ ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

 

 

 

 25-bkl1.jpg

 

ಮಂಗಳವಾರದಂದು ಸಂಘಪರಿವಾರ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಬೇರಪ್ಪ ಅವರು ಬಸವರಾಜ ಹೊರಟ್ಟಿಯ ವಿರುದ್ದ ಹಲವಾರು ಗಂಭಿರ ಅರೋಪವನ್ನು ಮಾಡಿದ್ದು ಅದಕ್ಕೆ ಪ್ರತಿಕ್ರ್ರಿಯೆ ಎಂಬಂತೆ ಹೊರಟ್ಟಿ ಇಂದು ಈ ಪತ್ರಿಕಾ ಗೋಷ್ಟಿಯನ್ನು ಆಯೋಜಿಸಿದ್ದರು. ತಾನು ಸಚಿವನಾಗಿ ೨೦ ತಿಂಗಳು ಮಾಡಿದ ಕಾರ್ಯವು ತನಗೆ ಸಂತೃಪ್ತಿಯನ್ನು ನೀಡಿದೆ ಎಂದ ಅವರು ವಿರೋಧಿಗಳು ನನ್ನ ಸಾಧನೆಯನ್ನು ಕಂಡು ಈ ರೀತಿಯಾದ ಟೀಕೆಯನ್ನು ಮಾಡುತ್ತಿದ್ದಾರೆ. ತೆರೆಮರೆಯಲ್ಲಿ ಟೀಕೆಗಳನ್ನು ಮಾಡದೆ ಧೈರ್ಯವಿದ್ದರೆ ನನ್ನೆದುರು ಬಂದು ಮಾತಾಡಲಿ ಎಂದು ಅವರು ಸವಾಲೆಸೆದರು.

 

ಶಿಕ್ಷಣ ಸಚಿವನಾಗಿ ತಾನು ಶೇ೯೦% ರಷ್ಟು ಕೆಲಸಮಾಡಿದ ತೃಪ್ತಿಯಿದೆ ಶಿಕ್ಷಣ ಕ್ಷೇತ್ರವು ಸಮಸ್ಯೆಗಳ ಆಗರವಾಗಿದ್ದು ಎಲ್ಲವನ್ನು ಬಗೆಹರಿಸಿದ್ದೇನೆ ಎಂದು ಹೇಳುವುದಿಲ್ಲ. ಶಿಕ್ಷಕರ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಪ್ರಯತ್ನಿಸಿದ್ದೇನೆ. ಶಿಕ್ಷಕರ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಿದ್ದು, ಶಿಕ್ಷಕರ ವರ್ಗಾವಣೆ ಶಾಸನ, ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ಸೌಲಭ್ಯ, ಶಿಕ್ಷಕರಿಗೆ ಹಬ್ಬದ ಮುಂಗಡ ಹಣ ಮಂಜೂರಿ, ಸರಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯಾಧ್ಯಾಪಕರ ಹುದ್ದೆಗೆ ಇದ್ದ ಶಕಡಾ ೫೦ ಬಡ್ತ ಅವಕಾಸವನ್ನು ಶಕಡಾ ೭೫ ಕ್ಕೆ ಏರಿಸಿದ್ದು, ಪ್ರೌಢ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರ ಖಾಯಂ ಮಾಡುವುದು, ಶಾಶ್ವತ ಅನುದಾನ ರಹಿತ ಪ್ರಾಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದ್ದು, ಅನುದಾನ ರಹಿತ ಶಾಲಾ ನೌಕರರಿಗೆ ಸೇವಾ ಭದ್ರತೆ ನೀಡಿದ್ದು ದೇಶದಲ್ಲಿ ಮೊದಲಬಾರಿಗೆ ದೈಹಿಕ ಶಿಕ್ಷಣ ವಿಷಯವನ್ನು ಪ್ರಾಥಮಿಕ ಹಂತದಿಂದ ಪದವಿಪೂರ್ವ ಶಿಕ್ಷಣದವರೆಗೆ ಕಡ್ಡಾಯ ವಿಷಯವನ್ನಾಗಿ ಮಾಡಿದ್ದು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ೮ನೇ ತರಗತಿಯ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮಾಡಿದ್ದು, ನನ್ನ ಅವಧಿಯಲ್ಲಿ ೨೪,೭೬೮ ಪ್ರಾಥಮಿಕ ಹಾಗೂ ೧೨,೯೯೪ ಪ್ರೌಢ, ೫೫೫೧ ಪದವಿಪೂರ್ವ ಉಪನ್ಯಾಸಕರು ಸೇರಿದಂತೆ ಒಟ್ಟು ೪೮,೩೧೩ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಂಡಿದ್ದು ಸೇರಿದಂತೆ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ನನ್ನ ಸಾಧನೆಯಾಗಿದೆ ಎಂದ ಅವರು ಇದನ್ನೆ ವಿರೋಧಿಗಳು ಟೀಕಿಸುತ್ತಿದ್ದಾರೆ ಎಂದಾದರೆ ಅವರು ನನ್ನೊಂದಿಗೆ ನೇರ ಸಂವಾದವನ್ನು ಮಾಡಲಿ ಆಗ ನನ್ನ ಸಾಧನೆಯನ್ನು ತೋರಿಸುತ್ತೇನೆ ಎಂದರು. ೧೯೭೦ರಿಂದಲೆ ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಒಂದು ದೀರ್ಘ ಹೊರಾಟವನ್ನು ಕೈಗೊಂಡಿದ್ದೇನೆ. ಶಿಕ್ಷಣ ಕ್ಷೇತ್ರದ ಒಳಹೊರವನ್ನು ಚೆನ್ನಾಗಿ ಬಲ್ಲವನಾಗಿದ್ದು ಶಿಕ್ಷಕರ ಸೇವೆಗೆ ಸದಾ ಸಿದ್ದನಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧ್ಯಕ್ಷ ಪ್ರಭಾಕರ್ ಭಂಟ್, ನಾರಾಯಣ ದೈಮನೆ, ಭಟ್ಕಳ ಸಂಘದ ಜೆ.ಸಿ. ದೇವರಾಜ್, ಮತ್ತಿತರರು ಉಪಸ್ಥಿತರಿದ್ದರು. 

 


Share: