ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ.

ಭಟ್ಕಳ: ಪ್ರವಾದಿ ಮುಹಮ್ಮದ್ ಈ ಜಗತ್ತು ಕಂಡ ಅದ್ಬುತ ವ್ಯಕ್ತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಮತ.

Mon, 08 Mar 2010 02:59:00  Office Staff   S.O. News Service

ಭಟ್ಕಳ, ಮಾರ್ಚ್ 7: ಈ ಜಗತ್ತಿನ ಪ್ರತಿಯೊಂದು ರಂಗದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕೆಂದು ತೋರಿಸಿದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರು ಈ ಜಗತ್ತು ಕಂಡ ಒಂದು ಅದ್ಬುತ ವ್ಯಕ್ತಿಯಾಗಿದ್ದಾರೆ ಎಂದು ರಾಮಕ್ಷೇತ್ರ ಧರ್ಮಸ್ಥಳದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಂಜೆ ಭಟ್ಕಳದ ಹೋಟೆಲ್ ಟಿ.ಎಫ್.ಸಿ. ಹತ್ತಿರ ಮೈದಾನದಲ್ಲಿ ಎಸ್.ಐ.ಓ ಭಟ್ಕಳ ಶಾಖೆಯ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

 

 

ಈ ಜಗತ್ತು ಯಾವ ರೀತಿ ಬಾಳಿ ಬದುಕಬೇಕು ಎಂಬುವುದನ್ನು ತಮ್ಮ ಸಂದೇಶ ಹಾಗೂ ಚಾರಿತ್ಯ್ರದ ಮೂಲಕ ತೋರಿಸಿಕೊಟ್ಟಂತಹ ಮಹಾನ್ ಚೈತನ್ಯ ಎಂದು ಬಿಂಬಿಸಿದ ಅವರು ಇಂದು ಅವರ ಅನುಯಾಯಿಗಳು ಪ್ರವಾದಿಯ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾಧಿಸಿದರು. ಮುಸ್ಲಿಮ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆಯಬೇಕು, ಧರ್ಮಾಚರಣೆ ಬೇಕು ಧರ್ಮಾಂಧತೆ ಬೇಡ ಎಂಬ ಕಿವಿಮಾತನ್ನು ಹೇಳಿದ ಸ್ವಾಮಿಗಳು ಈ ದೇಶದ ಐಕ್ಯತೆಯು ರಾಜಕೀಯ ಕಾರಣಗಳಿಂದ ಹಾಳಾಗುತ್ತಿದೆ ಎಂದರು.ಯುವಕರು ತಮ್ಮ ಮನಸ್ಸು ಮತ್ತು ಬುದ್ದಿಯನ್ನು ಸ್ಥೀಮಿತದಲ್ಲಿಟ್ಟುಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದು ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಇಂದು ಯುವ ಸಮುದಾಯ ಭಯೋತ್ಪಾದನೆಯ ದಾರಿಯನ್ನು ತುಳಿಯುತ್ತಿರುವುದ ವಿಷಾದನೀಯ ಎಂದರು.

 

8_sio_salvation_1.jpg
8_sio_salvation_2.jpg

 

 

ಮುಖ್ಯ ಅತಿಥಿಯಾಗಿ ಮಾತನಾಡಿದ ಲಾಲ್ ಹುಸೇನ್ ಕಂದಗಲ್ ಎಲ್ಲಾ ಧರ್ಮ, ಜಾತಿಗಳಲ್ಲಿರುವ ಕೋಮುವಾದಿಗಳನ್ನು ಬದಿಗಿರಿಸಿ ಸಜ್ಜರನ್ನು ಒಂದು ಗೂಡಿಸಿ ಸಂಘಟನಾತ್ಮಕವಾಗಿ ನಮ್ಮ ದೇಶದಲ್ಲಿ ಕೋಮು ಸೌಹರ್ಧತೆಯನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದ ಅವರು ನಮ್ಮ ದೇಶದ ಸಂಸ್ಕೃತಿಯು ಕೋಮುವಾದಿ ಸಂಸ್ಕೃತಿಯಲ್ಲ. ಭಾರತೀಯ ಸಂಸ್ಕೃತಿಯು ಮಾನವೀಯ ಸಂಸ್ಕೃತಿಯಾಗಿದ್ದು ಇಂದು ನಾವು ಅದನ್ನು ಬಿಟ್ಟು ಕೋಮುವಾದಿತನವನ್ನು ಬೆಳಿಸಿಕೊಳ್ಳುತ್ತಿದ್ದೇವೆ ಎಂದು ವಿಷಾಧಿಸಿದರು.

ನಮ್ಮಲ್ಲಿನ ಅಶಾಂತಿ, ಗೊಂದಲ, ರಕ್ತಪಾತ, ಬರ್ಬರತೆಗೆ ಅಮಾನವೀಯತೆಯೆ ಕಾರಣವಾಗಿದೆ ನಾವು ನಮ್ಮಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಇಸ್ಲಾಮ್ ಧರ್ಮವು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದೆ. ಇಸ್ಲಾಮ್ ಧರ್ಮವು ಶಾಂತಿಯ ಧರ್ಮವಾಗಿದ್ದು ಯಾವತ್ತಿಗೂ ಅಶಾಂತಿಯನ್ನು ಬೋಧಿಸುವುದಿಲ್ಲ ಎಂದರು. ಮಾನವೀಯತೆಯಿಂದ ಶಾಂತಿ ಸ್ಥಾಪನೆಯಾಗುತ್ತದೆ ಎಂದ ಅವರು ಶಾಂತಿಯಿಂದ ಪ್ರಗತಿಸಾಧ್ಯವಾಗುತ್ತದೆ ಎಂದರು. ಈ ದೇಶಕ್ಕೆ ಧರ್ಮದಿಂದ ಯಾವುದೇ ಅಪಾಯವಿಲ್ಲ. ಹಿಂದು,ಮುಸ್ಲಿಮ್.ಹಾಗೂ ಕ್ರೈಸ್ ಕೋಮುವಾದಿಗಳಿಂದ ಈ ದೇಶಕ್ಕೆ ಅಪಾಯವಿದೆ ಎಂದರು.



8_sio_salvation_3.jpg
8_sio_salvation_4.jpg
8_sio_salvation_5.jpg
8_sio_salvation_6.jpg
8_sio_salvation_7.jpg

 

ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದ ಎಸ್.ಐ.ಓ ರಾಜ್ಯ ಘಟಕದ ಅಧ್ಯಕ್ಷ ಶೌಕತ್ ಅಲಿ ಕೆ. ಮಹಿಳೆಯು ಇಲ್ಲಿ ಸುರಕ್ಷಿತಳಾಗಿಲ್ಲ. ಮಹಿಳೆಯನ್ನು ಪೋಜಿಸುವಂತಹ ಈ ದೇಶದಲ್ಲಿ ಮಹೀಳೆಯರು ವೇಶ್ಯವಾಟಿಕಗಳಲ್ಲಿ ತೊಡಗಿಲ್ಪಡುತ್ತಿದ್ದಾರೆ. ಪ್ರಾವಾದಿ ವರ್ಯರು ಅಂದಿನ ಜಾರ ಸಂಸ್ಕೃತಿಯಲ್ಲಿ ಬಹುಪತ್ನಿತ್ವದ ರೂಪರೇಶೆಗಳನ್ನು ನೀಡಿ ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ನೀಡಿದ್ದಾರೆ. ಧರ್ಮವಿಶ್ವಾಸಿಯು ಎಂದಿಗೂ ಅನೈತಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಭಯೊತ್ಪಾದಕನಾಗಲಾರ, ಭಯೋತ್ಪಾದಕರಾರು ಧರ್ಮಾನುಯಾಯಿಗಳಲ್ಲ ಎಂದರು.

ಎಸ್.ಐ.ಓ ಪಶ್ಛಿಮ ವಲಯ ಅಧ್ಯಕ್ಷ ಅಶ್ಫಾಖ್ ಆಹ್ಮದ್ ಪ್ರಸ್ಥಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ಸೈಯ್ಯದ್ ಹಸನ್ ಸಖ್ಖಾಫ್, ಸೇವಾ ವಾಹಿನಿಯ ಸುರೇಂದ್ರ ಶಾನುಭಾಗ, ಅಂಜುಮನ್ ಸಂಸ್ಥೆಯ ಡಿ.ಎಚ್.ಶಬ್ಬರ್, ಜಮಾತೆ ಇಸ್ಲಮಿ ಹಿಂದ್ ಭಟ್ಕಳ ಶಾಕೆ ಅಧ್ಯಕ್ಷ ಸಾದಾ ಮೀರ, ಪುರಸಭೇಯ ಅಧ್ಯಕ್ಷ ಪರ್‍ವೇಝ್ ಕಾಸಿಮಿಜಿ, ಪುರಸಭಾ ಸದಸ್ಯ ಇನಾಯತುಲ್ಲಾ ಶಾಬಂದ್ರಿ, ತಂಝೀಮ್ ಸಂಸ್ಥೆಯ ಅಧ್ಯಕ್ಷ ಡಾ.ಬದ್ರುಲ್ಲ್ ಹಸನ್ ಮು‌ಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್, ರಾಬಿತಾ ಸೂಸೈಟಿಯ ಅಧ್ಯಕ್ಷ ಸೈಯ್ಯದ್ ಅಬ್ದುಲ್ಲಾ ಲಂಕಾ, ತಾ.ಪಂ. ಮಾಜಿ ಅಧ್ಯಕ್ಷ ಎಲ್ ಎಸ್. ನಾಯ್ಕ, ಮತ್ತಿತರು ಉಪಸ್ಥಿತರಿದ್ದರು.


Share: