ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರೈತರ ಪ್ರತಿಭಟನೆಗೆ ಸೋತ ಸರ್ಕಾರ - ಮಾತುಕತೆಗೆ ಸಿದ್ಧ

ಬೆಂಗಳೂರು: ರೈತರ ಪ್ರತಿಭಟನೆಗೆ ಸೋತ ಸರ್ಕಾರ - ಮಾತುಕತೆಗೆ ಸಿದ್ಧ

Sat, 30 Jan 2010 03:15:00  Office Staff   S.O. News Service

ಬೆಂಗಳೂರು, ಜನವರಿ 29: ಬಿ‌ಎಂಐಸಿ ಯೋಜನೆ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ ಮಾತುಕತೆಗೆ ಮುಂದಾಗಿದೆ.

 

 

ನಾಳೆ ಸಂಜೆ ೪.೩೦ಕ್ಕೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾಜಿ ಪ್ರಧಾನಿ ಎಚ್. ಖ. ದೇವೇಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೈಸ್ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

 

 

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ರಾತ್ರಿಯೇ ತಮ್ಮ ಅಧಿಕಾರಿಗಳ ಮೂಲಕ ಗೌಡರಿಗೆ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ ಇಂದು ದೇವೇಗೌಡರು ಮುಖ್ಯಮಂತ್ರಿಗಳ ಮನೆ ಮುಂದೆ ನಡೆಸಬೇಕಾಗಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

 

 

ನೈಸ್ ಯೋಜನೆ ವಿಚಾರವಾಗಿ ಹಲವಾರು ವರ್ಷಗಳಿಂದ ಧ್ವನಿ ಎತ್ತುತ್ತಿರುವ ದೇವೇಗೌಡರು ನಾಳೆ ನೇರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಮಾಡಿ ನೇರ ಮಾತುಕತೆ ನಡೆಸಲಿದ್ದಾರೆ. ಎಂಬುದರ ಬಗ್ಗೆ ಎಲ್ಲರಲ್ಲೂ ಆಶ್ವರ್ಯ ಮೂಡಿಸಿದೆ.

 

 

ನೈಸ್ ವಿಚಾರವಾಗಿ ದೇವೇಗೌಡರು ಈ ಹಿಂದೆ ಇದೇ ಮುಖ್ಯಮಂತ್ರಿಗಳನ್ನು ಅಸಂವಿಧಾನಿಕ ಪದಗಳಿಂದ ನಿಂದನೆಮಾಡಿ ಮತ್ತೆ ಅದೇ ಮುಖ್ಯಮಂತ್ರಿಗಳ ಜತೆ ಮಾತುಕತೆಗೆ ಮುಂದಾಗಿದ್ದಾರೆ.

 

ಏತನ್ಮದ್ಯೆ ನಾಳೆ ನೈಸ್ ಯೋಜನೆ ಕುರಿತು ದೇವೇಗೌಡರು ಪ್ರಸ್ತಾಪಿಸುವ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಲು ಮುಖ್ಯಮಂತ್ರಿಗಲೂ ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಈ ಯೋಜನೆ ಬಗ್ಗೆ ಗೌಡರು ಎತ್ತಬಹುದಾದ ವಿಷಯಗಳಿಗೆ ಕಾನೂನು ರೀತಿಯಲ್ಲಿ ಉತ್ತರ ನೀಡಲು ಸಿದ್ದರಿರುವಂತೆ ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ.

 

 

ಒಟ್ಟಾರೆ ನಾಳೆ ನಡೆಯುವ ಮಾತುಕತೆ ಫಲಪ್ರದವಾಗಲಿದೆಯೇ ? ಇಲ್ಲವೇ ? ಸರ್ಕಾರ ನೀಡುವ ಅಸಮಂಜಸ ಉತ್ತರದಿಂದ ಗೌಡರು ಕೋಪಗೊಂಡು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

 

 

ಮತ್ತೊಂದೆಡೆ ಗೌಡರೂ ಸಹ ನೈಸ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ, ಮೂಲ ಒಪ್ಪಂದ ಉಲ್ಲಂಘಿಸಿ ಈ ಯೋಜನೆಗೆ ನೀಡಿರುವ ರೈತರ ಕೃಷಿ ಭೂಮಿ ನೀಡಿಕೆ ಸೇರಿದಂತೆ ಈ ಯೋಜನೆಯ ಎಲ್ಲಾ ಸಮಗ್ರ ಮಾಹಿತಿಯನ್ನು ಕಲೆಹಾಕಿಕೊಂಡು ಮುಖ್ಯಮಂತ್ರಿಗಳೊಂದಿಗೆ ವಾಕ್ ಸಮರಕ್ಕೆ ಸಿದ್ದತೆಯಾಗಿದ್ದಾರೆ. 

 


Share: