ಮಂಗಳೂರು, ಮಾ.11: ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಘಟನೆ ಗುರುವಾರ ಸಂಜೆ ಮಂಗಳೂರು ಬಂದರಿನಿಂದ 16 ನಾವಿಕ ಮೈಲು ದೂರದಲ್ಲಿ ಸಂಭವಿಸಿದ್ದು, 45 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಬೋಟ್‌ನಲ್ಲಿದ್ದ 10 ಮಂದಿ ನಾವಿಕರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನ ಹಳೆ ಬಂದರಿನಿಂದ ಲಕ್ಷ ದ್ವೀಪದ ಅಗಾಸಿ ಎಂಬಲ್ಲಿಗೆ ಜಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಬೋಟ್‌ನಲ್ಲಿದ್ದ ಹತ್ತು ಮಂದಿಯನ್ನು ರಕ್ಷಿಸಿದ್ದಾರೆ
ಜಲ್ಲಿ ಸಾಗಾಟದ ಈ ಬೋಟ್ ಗುಜರಾತ್‌ನ ಹಮೀದ್ ಯಾಕೂಬ್ ಎಂಬವರಿಗೆ ಸೇರಿದ್ದೆಂದು ಹೇಳಲಾಗಿದೆ.