ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸೆ. 17 ರಿಂದ ಕಾರವಾರದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರ

ಸೆ. 17 ರಿಂದ ಕಾರವಾರದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರ

Sat, 14 Sep 2024 06:18:33  Office Staff   S O News

ಕಾರವಾರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ, ಅಲಿಮ್ಕೋ ಹಾಗೂ ಸಿಎಸ್‌ಆರ್ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರವನ್ನು ಏ.ಡಿ.ಐ.ಪಿ ಹಾಗೂ ಆರ್.ವಿ.ವಾಯ್ ಯೋಜನೆಯಡಿ ಆಯೋಜಿಸಲಾಗಿದೆ.

ಈ ಶಿಬಿರವು ಸೆಪ್ಟೆಂಬರ್ 17 ರಂದು ಕಾರವಾರದ ಕರ್ನಾಟಕ ಸರ್ಕಾರಿ ನೌಕರರ ಸಂಘ ಸಭಾಭವನದಲ್ಲಿ ಪ್ರಾರಂಭವಾಗಲಿದೆ. ನಂತರ ಸೆಪ್ಟೆಂಬರ್ 18 ರಂದು ಅಂಕೋಲಾ, 19 ರಂದು ಕುಮಟಾ, 20 ರಂದು ಹೊನ್ನಾವರ, 21 ರಂದು ಭಟ್ಕಳ, 23 ರಂದು ಶಿರಸಿ, 24 ರಂದು ಸಿದ್ಧಾಪುರ, 25 ರಂದು ಯಲ್ಲಾಪುರ, 26 ರಂದು ಮುಂಡಗೋಡ, 27 ರಂದು ಹಳಿಯಾಳ, 28 ರಂದು ದಾಂಡೇಲಿ ಹಾಗೂ 30 ರಂದು ಜೋಯಿಡಾದ ತಾಲೂಕಾ ಆಸ್ಪತ್ರೆಗಳಲ್ಲಿ ನಡೆಯಲಿದೆ.

ಜಿಲ್ಲೆಯ ಎಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಲು ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಯುಡಿಐಡಿ ಕಾರ್ಡ್ (ವಿಕಲಚೇತನರಿಗೆ) ಮತ್ತು ಫೋಟೊ ದಾಖಲಾತಿಗಳನ್ನು ತರಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share: